For Quick Alerts
  ALLOW NOTIFICATIONS  
  For Daily Alerts

  'ಗೋವಾ' ತೀರದ ಜಿಂಗ್ ಚಾಕ್ ಬಿಕಿನಿ ಚಿತ್ರಗಳು

  By ಉದಯರವಿ
  |

  ಹಾಸ್ಯ ನಟ ಕೋಮಲ್ ಕುಮಾರ್ ಈಗ 'ಗೋವಾ'ದ ಬೀಚ್ ನಲ್ಲಿ ಈಜಾಡುತ್ತಿದ್ದಾರೆ. ಬೆಡಗಿಯರ ಜೊತೆಗಿನ ಅವರ ಈಜಾಟದ ಚಿತ್ರಗಳು ಈಗ ನಿಮ್ಮ ಮುಂದಿವೆ. ಕೋಮಲ್ ಜೊತೆ ತಾವೇನು ಕಮ್ಮಿ ಎಂಬಂತೆ ಶ್ರೀಕಾಂತ್ (ಶ್ರೀಕಿ), ತರುಣ್ ಚಂದ್ರ ಸಹ ಕೈಜೋಡಿಸಿದ್ದಾರೆ.

  ಈ ಗೋವಾ ಚಿತ್ರ ತಮಿಳಿನ ಗೋವಾ ಚಿತ್ರದ ರೀಮೇಕ್. ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಸೌಂದರ್ಯಾ ನಿರ್ಮಿಸಿದ್ದ ಚಿತ್ರವದು. ಈಗ ಯಥಾವತ್ತಾಗಿ ಕನ್ನಡಕ್ಕೆ ಬರುತ್ತಿದೆ. ಕನ್ನಡದಲ್ಲಿ ಬ್ರಿಟೀಷ್ ನಟಿ ರಚೆಲ್ ವೈಸ್ ಅಭಿನಯಿಸುತ್ತಿದ್ದಾರೆ.

  ಶಂಕರೇಗೌಡ ಹಾಗೂ ಶಂಕರ್ ರೆಡ್ದಿ ಈ ಚಿತ್ರದ ಇಬ್ಬರು ನಿರ್ಮಾಪಕರು. ಆಕ್ಷನ್ ಕಟ್ ಹೇಳುತ್ತಿರುವವರು ಸೂರ್ಯ ಗೌಡ. ಆದರೆ ಶಂಕರ್ ಗೌಡ ಅವರು ತಮ್ಮ ಚಿತ್ರ ರೀಮೇಕ್ ಅಲ್ಲ ಎಂದಿದ್ದಾರೆ. ಹಾಲಿವುಡ್ ಚಿತ್ರ 'ಹ್ಯಾಂಗೋವರ್' ಚಿತ್ರದ ಸ್ಫೂರ್ತಿಯೇ 'ಗೋವಾ' ಎನ್ನುತ್ತಾರೆ.

  ಕನ್ನಡ ಪ್ರೇಕ್ಷಕರಿಗೆ ಹೊಂದುವಂತೆ ಕಥೆ ಬದಲಾವಣೆ

  ಕನ್ನಡ ಪ್ರೇಕ್ಷಕರಿಗೆ ಹೊಂದುವಂತೆ ಕಥೆ ಬದಲಾವಣೆ

  ಕನ್ನಡ ಪ್ರೇಕ್ಷಕರಿಗೆ ಹೊಂದುವಂತೆ ಕಥೆಯಲ್ಲಿ ಬದಲಾವಣೆ ಮಾಡಿಕೊಂಡು ಚಿತ್ರವನ್ನು ತೆರೆಗೆ ತರುತ್ತಿದ್ದೇವೆ ಎನ್ನುತ್ತಾರೆ ಶಂಕರೇಗೌಡ.

  ಕಿಚ್ಚ ಸುದೀಪ್ ಮೊದಲ ದೃಶ್ಯಕ್ಕೆ ಕ್ಲಾಪ್

  ಕಿಚ್ಚ ಸುದೀಪ್ ಮೊದಲ ದೃಶ್ಯಕ್ಕೆ ಕ್ಲಾಪ್

  ಬೆಂಗಳೂರು, ಗೋವಾ, ಶ್ರೀರಂಗಪಟ್ಟಣ, ಮೈಸೂರುಗಳಲ್ಲಿ ಶೂಟಿಂಗ್ ನಡೆಯುತ್ತಿದೆ. ಕಿಚ್ಚ ಸುದೀಪ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಲಿದ್ದನ್ನು ಇಲ್ಲಿ ನೆನೆಯಬಹುದು.

  ಚಿತ್ರದ ನಾಯಕಿ ಆಂಗ್ಲ ಬೆಡಗಿ ರಚೆಲ್

  ಚಿತ್ರದ ನಾಯಕಿ ಆಂಗ್ಲ ಬೆಡಗಿ ರಚೆಲ್

  ಈ ಚಿತ್ರದ ಇನ್ನೊಂದು ವಿಶೇಷ ಎಂದರೆ ಚಿತ್ರದ ನಾಯಕಿ ರಚೆಲ್ ಇಂಗ್ಲಿಷ್ ನಲ್ಲೇ ಮಾತನಾಡಿರುವುದು.

  ರಚೆಲ್ ಇಂಗ್ಲಿಷ್ ನಲ್ಲೇ ಡೈಲಾಗ್

  ರಚೆಲ್ ಇಂಗ್ಲಿಷ್ ನಲ್ಲೇ ಡೈಲಾಗ್

  ಚಿತ್ರದ ಕಥೆ ಹಾಗೇ ಇರುವುದರಿಂದ ಅವರಿಗೆ ಕನ್ನಡ ಡೈಲಾಗ್ ಗಳ ಕಷ್ಟ ತಪ್ಪಿದೆ. ಕನ್ನಡ ಮತ್ತು ಇಂಗ್ಲಿಷ್ ಡೈಲಾಗ್ ಗಳ ಮೂಲಕ ಚಿತ್ರ ಪ್ರೇಕ್ಷಕರಿಗೆ ಕಚಗುಳಿ ಇಡುತ್ತದೆ.

  ಈ ಚಿತ್ರಕ್ಕೆ ಈ ಮುಂಚೆ ಪುಣ್ಯಾತ್ಮರು ಎಂದಿಡಲಾಗಿತ್ತು

  ಈ ಚಿತ್ರಕ್ಕೆ ಈ ಮುಂಚೆ ಪುಣ್ಯಾತ್ಮರು ಎಂದಿಡಲಾಗಿತ್ತು

  ಗೋವಾ ಚಿತ್ರಕ್ಕೆ ಮುಂಚೆ ಪುಣ್ಯಾತ್ಮರು ಎಂದು ಹೆಸರಿಡಲಾಗಿತ್ತು. ಗೋವಾ ಚಿತ್ರಕ್ಕೆ ರಾಜೇಶ್ ಕಟ್ಟಾ ಅವರ ಛಾಯಾಗ್ರಹಣವಿದೆ.

  ಶಾರುಖ್ ಚಿತ್ರದಲ್ಲೂ ರಚೆಲ್ ಅಭಿನಯಿಸಿದ್ದಾರೆ

  ಶಾರುಖ್ ಚಿತ್ರದಲ್ಲೂ ರಚೆಲ್ ಅಭಿನಯಿಸಿದ್ದಾರೆ

  ಚಿತ್ರದ ನಾಯಕಿ ರಚೆಲ್ ಈ ಹಿಂದೆ ಶಾರುಖ್ ಖಾನ್ ಅಭಿನಯದ ಡಾನ್ 2 ಚಿತ್ರದಲ್ಲೂ ಅಭಿನಯಿಸಿದ್ದಾರೆ.

  ಪುಂಗಿದಾಸ, ಪ್ಯಾರ್ ಗೆ ಆಗ್ಬಿಟ್ಟೈತೆ ಚಿತ್ರಗಳಲ್ಲೂ ಬಿಜಿ

  ಪುಂಗಿದಾಸ, ಪ್ಯಾರ್ ಗೆ ಆಗ್ಬಿಟ್ಟೈತೆ ಚಿತ್ರಗಳಲ್ಲೂ ಬಿಜಿ

  ಸದ್ಯಕ್ಕೆ ಕೋಮಲ್ ಕುಮಾರ್ ಅವರು ಪ್ಯಾರ್ ಗೆ ಆಗ್ಬಿಟ್ಟೈತೆ ಹಾಗೂ ಪುಂಗಿದಾಸ ಚಿತ್ರಗಳಲ್ಲೂ ಬಿಜಿಯಾಗಿದ್ದಾರೆ.

  ಸೋನು ಗೌಡ, ಶರ್ಮಿಳಾ ಮಾಂಡ್ರೆ ನಾಯಕಿಯರು

  ಸೋನು ಗೌಡ, ಶರ್ಮಿಳಾ ಮಾಂಡ್ರೆ ನಾಯಕಿಯರು

  ಸೋನು ಗೌಡ ಮತ್ತು ಶರ್ಮಿಳಾ ಮಾಂಡ್ರೆ ಈ ಚಿತ್ರದ ಇನ್ನಿಬ್ಬರು ನಾಯಕಿಯರು.

  English summary
  Comedy actor Komal Kuma lead Goa as opposed to the earlier title Punythamaru hot stills. Apart from Komal, the film will also star Sriki and Tarun in lead roles. Actress Rachel, who has done a small role in the Shah Rukh Khan starrer, Don 2, is also going to make her debut in the Kannada film industry with his film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X