ಕೋಮಲ್ ಕುಮಾರ್ ಮುಂದಿನ ಚಿತ್ರದ ಹೆಸರು ಬಹಿರಂಗ
2020ನೇ ವರ್ಷ ಇಡೀ ಜಗತ್ತಿಗೆ ಕಪ್ಪು ಚುಕ್ಕೆ. ಯಾರೂ ನಿರೀಕ್ಷಿಸದಂತಹ ಘಟನೆಗಳು ನಡೆದು ಹೋದವು. ಕೊರೊನಾ ವೈರಸ್ ಎಂಬ ರೋಗದಿಂದ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡರು. ಕೋಟ್ಯಾಂತರ ಜನರು ಊಟ-ತಿಂಡಿ ಇಲ್ಲದೇ, ಉದ್ಯೋಗ ಕಳೆದುಕೊಂಡು ಬೀದಿಗೆ ಬಂದರು.
ಅನೇಕ ಗಣ್ಯ ವ್ಯಕ್ತಿಗಳು, ಸೆಲೆಬ್ರಿಟಿಗಳು ಇದೇ ವರ್ಷ ಮೃತಪಟ್ಟಿರುವ ಉದಾಹರಣೆಗಳಿವೆ. ಇಷ್ಟೆಲ್ಲಾ ಘಟನೆಗಳು ಸಂಭವಿಸಿದ ವರ್ಷವನ್ನು ಯಾರೊಬ್ಬರು ಮರೆಯಲು ಸಾಧ್ಯವಿಲ್ಲ. ಇದೀಗ, '2020' ಎಂಬ ಹೆಸರಿನಲ್ಲಿ ಕನ್ನಡದಲ್ಲೊಂದು ಸಿನಿಮಾ ಶುರುವಾಗಿದೆ. ಮುಂದೆ ಓದಿ...

ಕೋಮಲ್ ಮುಂದಿನ ಸಿನಿಮಾದ ಹೆಸರು '2020'
'ಅಯೋಗ್ಯ' ಸಿನಿಮಾದ ನಿರ್ಮಾಪಕ ಟಿಆರ್ ಚಂದ್ರಶೇಖರ್ ಮತ್ತು ನಟ ಕೋಮಲ್ ಕುಮಾರ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾವೊಂದು ಮೂಡಿಬರುತ್ತಿದೆ ಎಂದು ಈ ಹಿಂದೆಯೇ ಘೋಷಣೆಯಾಗಿತ್ತು. ಇದೀಗ, ಈ ಚಿತ್ರಕ್ಕೆ '2020' ಎಂದು ಹೆಸರಿಡಲಾಗಿದೆ.

ಚೀನಾ ವೈರಸ್ ಕುರಿತು
2020 ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಪೋಸ್ಟರ್ ಚೀನಾ ಏರ್‌ಲೈನ್ಸ್ ಕೊರೊನಾ ಹರಡಿಸಿರುವುದನ್ನು ಹೈಲೈಟ್ ಮಾಡಲಾಗಿದೆ. ಹಾಗಾಗಿ, ಈ ಚಿತ್ರದ ಕಥೆ ಕೊರೊನಾ ವೈರಸ್ ಹಾಗೂ ಅದರ ಪರಿಣಾಮವಾಗಿ ನಡೆದ ಘಟನೆಗಳ ಕುರಿತು ಮೂಡಿ ಬರಲಿದೆ ಎಂಬ ಕುತೂಹಲ ಹುಟ್ಟಿಕೊಂಡಿದೆ.

ರಾಜಶೇಖರ್ ನಿರ್ದೇಶನ
'ಮಜಾಟಾಕೀಸ್' ಕಾರ್ಯಕ್ರಮಕ್ಕೆ ಸಂಭಾಷಣೆ ಬರೆಯುತ್ತಿದ್ದ ಹಾಗೂ ರಾಬರ್ಟ್ ಚಿತ್ರಕ್ಕೆ ಸಂಭಾಷಣೆ ಮಾಡಿರುವ ರಾಜಶೇಖರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಮೊದಲೇ ಹೇಳಿದಂತೆ ಇದು ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾ ಎನ್ನಲಾಗಿದೆ. ಇದೀಗ, 2020 ಎಂದು ಹೆಸರಿಟ್ಟಿರುವುದು ನಿರೀಕ್ಷೆ ಹೆಚ್ಚಿಸಿದೆ.
Recommended Video

ಜಗ್ಗೇಶ್ ಶುಭಹಾರೈಕೆ
ಸಹೋದರ ಕೋಮಲ್ ನಟಿಸುತ್ತಿರುವ 2020 ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ನಟ ಜಗ್ಗೇಶ್ ಟ್ವಿಟ್ಟರ್ ಮೂಲಕ ಶುಭಕೋರಿದ್ದಾರೆ. ''ಸಹೋದರ #ಕೋಮಲ್ ಹೊಸ ಚಿತ್ರ 2020 ಆರಂಭ...ನಿಮ್ಮ ಶುಭ ಹಾರೈಕೆ ಇರಲಿ...'' ಎಂದು ಟೈಟಲ್ ಮೋಷನ್ ಪೋಸ್ಟರ್ ಹಂಚಿಕೊಂಡಿದ್ದಾರೆ.


Click it and Unblock the Notifications











