'ಉಂಡೆನಾಮ' ಹಾಕಿ ಹೊಟ್ಟೆ ಹುಣ್ಣಾಗುಸುವಷ್ಟು ನಗಿಸಲು ಬರ್ತಿದ್ದಾರೆ ಕೋಮಲ್

By ಫಿಲ್ಮಿಬೀಟ್ ಡೆಸ್ಕ್

ಕನ್ನಡ ಚಿತ್ರರಂಗದಲ್ಲಿ ಹಾಸ್ಯದ ಮೂಲಕ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಿದ್ದ ನಟ ಕೋಮಲ್ ಕುಮಾರ್. ಕೆಲವು ದಿನಗಳಿಂದ ಈ ನಟ ಬೆಳ್ಳಿತೆರೆಮೇಲೆ ಕಾಣಿಸಿಕೊಂಡಿರಲಿಲ್ಲ. ಈಗ ಮತ್ತೆ ಅದೇ ಹಳೇ ಚಾರ್ಮ್‌ನೊಂದಿಗೆ ಥಿಯೇಟರ್‌ಗೆ ಬರುತ್ತಿದ್ದಾರೆ.

ಕೋಮಲ್ ಕುಮಾರ್ ಕೆಲವು ವರ್ಷ ಸೈಲೆಂಟ್ ಆಗಿದ್ದರು. ಅವರ ಯಾವುದೇ ಸಿನಿಮಾ ರಿಲೀಸ್ ಆಗಿರಲಿಲ್ಲ. ಈಗ ಅವರು ಅಭಿಮಾನಿಗಳು ಖುಷಿ ಪಡುವಂತಹ ಸಮಯ ಬಂದೇ ಬಿಟ್ಟಿದೆ. ಕೋಮಲ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ 'ಉಂಡೆನಾಮ' ಇದೇ ವಾರ(ಏಪ್ರಿಲ್ 14) ಬಿಡುಗಡೆಯಾಗುತ್ತಿದೆ.

ಕೋಮಲ್ ಅಭಿನಯದ ಈ ಸಿನಿಮಾ ಕೋವಿಡ್‌ಗೂ ಮುನ್ನವೇ ಆರಂಭಗೊಂಡಿತ್ತು. ಆದರೆ, ಕೊರೊನಾ ಹಾಗೂ ಲಾಕ್‌ಡೌನ್‌ ವೇಳೆ ಸಿನಿಮಾ ಆರಂಭ ಆಗಿತ್ತು. ಆದರೆ, ಅಂದ್ಕೊಂಡಂತೆ ಈ ಸಿನಿಮಾ ರಿಲೀಸ್ ಆಗಿರಲಿಲ್ಲ. ಈಗ ಅದೇ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಮೂಲಕ ಮತ್ತೆ ಕೋಮಲ್ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಾರೆ ಅನ್ನೋ ಭರವಸೆಯಲ್ಲಿ ಅಭಿಮಾನಿಗಳು ಇದ್ದಾರೆ.

ಮೊದಲು 'ಉಂಡೆನಾಮ' ಸಿನಿಮಾದ ಟೈಟಲ್ ಬೇರೆನೇ ಇಟ್ಟಿದ್ದರು. ಕೋವಿಡ್ ಸಮಯದಲ್ಲಿ ಸಿನಿಮಾ ಸೆಟ್ಟೇರಿದ್ದರಿಂದ ಅದಕ್ಕೆ ತಕ್ಕಂತೆ ಟೈಟಲ್ ಇಡಲಾಗಿತ್ತು. ಆದ್ರೀಗ ಕೋವಿಡ್, ಲಾಕ್‌ಡೌನ್ ಎಲ್ಲಾ ಔಟ್‌ಡೇಟೆಡ್ ಆಗಿದ್ದರಿಂದ ಟೈಟಲ್ ಅನ್ನು ಬದಲಾಯಿಸಲಾಯಿತು. ಈಗೀನ ಪರಿಸ್ಥಿತಿಗೆ ತಕ್ಕಂತೆ 'ಉಂಡೆನಾಮ' ಅನ್ನೋ ಟೈಟಲ್ ಇಟ್ಟು ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ.

ಟೈಟಲ್ ಬದಲಾವಣೆ ಮಾಡಿದ್ದರೂ, ಸಿನಿಮಾ ಕಥೆ ಲಾಕ್‌ಡೌನ್ ಸಮಯದಲ್ಲಿಯೇ ಆರಂಭ ಆಗುತ್ತೆ. ಕೋಮಲ್ ಪಾತ್ರ ಲಾಕ್‌ಡೌನ್‌ ಸಮಯದಲ್ಲಿ ಮದುವೆ ಆಗಬೇಕು ಅಂತ ಹಪಾಹಪಿಸುತ್ತಿರುವ ಸನ್ನಿವೇಶವನ್ನೇ ಹಾಸ್ಯಾಸ್ಪದವಾಗಿ ಹೇಳಲಾಗಿದೆ. ಹೀಗಾಗಿ ಇಲ್ಲಿ ಭರಪೂರ ಹಾಸ್ಯವಿರುತ್ತೆ.

Komal Kumar Starrer Undenaama Movie Releasing this week

ಇನ್ನು ಕೋಮಲ್ ಕುಮಾರ್ ಈ ಸಿನಿಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಧನ್ಯಾ ಬಾಲಕೃಷ್ಣ, ಹರೀಶ್ ರಾಜ್, ತಬಲ ನಾಣಿ, ಕೆಜಿಎಫ್ ಸಂಪತ್, ತನಿಷಾ, ವೈಷ್ಣವಿ, ಅಪೂರ್ವ ಸೇರಿದಂತೆ ಹಲವರು 'ಉಂಡೆನಾಮ' ಸಿನಿಮಾದಲ್ಲಿ ನಟಿಸಿದ್ದಾರೆ.

'ಉಂಡೆನಾಮ' ಸಿನಿಮಾವನ್ನು ಕೆ.ಎಲ್ ರಾಜಶೇಖರ್ ನಿರ್ದೇಶಿಸಿದ್ದಾರೆ. ನಂದಕಿಶೋರ್ ಸಿ ನಿರ್ಮಾಣ ಮಾಡುತ್ತಿದ್ದಾರೆ. ನವೀನ್ ಕುಮಾರ್ ಎಸ್ ಕ್ಯಾಮರಾವರ್ಕ್ ಇದ್ದರೆ, ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದಾರೆ.

ಈ ಹಿಂದೆ ಕೋಮಲ್ ಅಭಿನಯದ ಕೆಲವು ಸಿನಿಮಾಗಳು ಸೋಲುಂಡಿವೆ. ಸಿನಿಮಾದಲ್ಲಿ ನಾಯಕನಾಗಿ ನಟಿಸಲು ಆರಂಭಿಸಿದ ಬಳಿಕ ಕೆಲವೇ ಕೆಲವು ಸಿನಿಮಾಗಳಿಗೆ ಯಶಸ್ಸು ಸಿಕ್ಕಿದೆ. ಹೀಗಾಗಿ ಬಹಳ ದಿನಗಳ ಬಳಿಕ ತೆರೆಮೇಲೆ ಕಾಣಿಸಿಕೊಳ್ಳುತ್ತಿರುವ ಕೋಮಲ್‌ಗೆ 'ಉಂಡೆನಾಮ' ಸಕ್ಸಸ್ ತಂದುಕೊಡುತ್ತಾ? ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

More from Filmibeat

English summary
Komal Kumar Starrer Undenaama Movie Releasing this week, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X