ಕೋಮಲ್ ಹೊಸ ಚಿತ್ರದ ಬಗ್ಗೆ ಮಾಹಿತಿ ನೀಡಿದ ನರೇಂದ್ರ ಮೋದಿ
ನಟ ಕೋಮಲ್ ಕಮಾರ್ ಮತ್ತು 'ಅಯೋಗ್ಯ' ಚಿತ್ರದ ನಿರ್ಮಾಪಕ ಟಿಆರ್ ಚಂದ್ರಶೇಖರ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಬರುತ್ತಿರುವುದು ತಿಳಿದಿರುವ ವಿಚಾರ. 'ಮಜಾ ಟಾಕೀಸ್' ಖ್ಯಾತಿಯ ರಾಜಶೇಖರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಟೈಟಲ್ ವಿಚಾರಕ್ಕೆ ಈ ಚಿತ್ರ ಈಗ ಸುದ್ದಿಗೆ ಬಂದಿದೆ. ಕೋಮಲ್ ಕುಮಾರ್ ಮುಂದಿನ ಚಿತ್ರದ ಬಗ್ಗೆ ಪಿಎಂ ನರೇಂದ್ರ ಮೋದಿ, ಕರ್ನಾಟಕ ಸಿಎಂ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಚ್‌ಡಿ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.
ಅಚ್ಚರಿಯಾದರೂ ಇದು ನಿಜನಾ....ಕೋಮಲ್ ಮುಂದಿನ ಸಿನಿಮಾ ಹೆಸರೇನು ಎಂಬುದನ್ನು ಅಕ್ಟೋಬರ್ 30ರಂದು ಅನಾವರಣ ಮಾಡಲಾಗುವುದು ಎಂದು ಮೋದಿ ಸೇರಿದಂತೆ ಕರ್ನಾಟಕ ಘಟಾನುಘಟಿ ರಾಜಕಾರಣಿಗಳು ಹೇಳಿದ್ದಾರೆ.

ನರೇಂದ್ರ ಮೋದಿ, ಕರ್ನಾಟಕ ಸಿಎಂ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಚ್‌ಡಿ ಕುಮಾರಸ್ವಾಮಿ ಅವರಂತೆ ಪಾತ್ರಧಾರಿಗಳನ್ನು ಬಳಸಿಕೊಂಡು ''ಅಕ್ಟೋಬರ್ 30ರಂದು ಟೈಟಲ್ ತಿಳಿಸಲಾಗುವುದು'' ಎಂದು ಪ್ರಚಾರ ಮಾಡಿದೆ. ಚಿತ್ರತಂಡದ ಈ ಹೊಸ ಪ್ರಯತ್ನಕ್ಕೆ ಚಿತ್ರರಸಿಕರು ಸಹ ಮೆಚ್ಚುಗೆಗೆ ವ್ಯಕ್ತಪಡಿಸಿದ್ದಾರೆ.
ಅಂದ್ಹಾಗೆ, ಈ ಚಿತ್ರಕ್ಕೆ ನವನಿರ್ದೇಶಕ ರಾಜಶೇಖರ್ ಆಕ್ಟನ್ ಕಟ್ ಹೇಳುತ್ತಿದ್ದಾರೆ. 'ಮಜಾ ಟಾಕೀಸ್' ಹಾಗೂ ದರ್ಶನ್ ನಟನೆಯ 'ರಾಬರ್ಟ್' ಚಿತ್ರಕ್ಕೆ ಸಂಭಾಷಣೆ ಬರೆದಿರುವ ರಾಜಶೇಖರ್ ಅವರು ಕೋಮಲ್ ಜೊತೆ ತಮ್ಮ ಮೊದಲ ಸಿನಿಮಾ ಮಾಡುತ್ತಿದ್ದಾರೆ.


Click it and Unblock the Notifications











