For Quick Alerts
  ALLOW NOTIFICATIONS  
  For Daily Alerts

  ಕೋಮಲ್ ಹೊಸ ಚಿತ್ರದ ಬಗ್ಗೆ ಮಾಹಿತಿ ನೀಡಿದ ನರೇಂದ್ರ ಮೋದಿ

  |

  ನಟ ಕೋಮಲ್ ಕಮಾರ್ ಮತ್ತು 'ಅಯೋಗ್ಯ' ಚಿತ್ರದ ನಿರ್ಮಾಪಕ ಟಿಆರ್ ಚಂದ್ರಶೇಖರ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಬರುತ್ತಿರುವುದು ತಿಳಿದಿರುವ ವಿಚಾರ. 'ಮಜಾ ಟಾಕೀಸ್' ಖ್ಯಾತಿಯ ರಾಜಶೇಖರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ಟೈಟಲ್ ವಿಚಾರಕ್ಕೆ ಈ ಚಿತ್ರ ಈಗ ಸುದ್ದಿಗೆ ಬಂದಿದೆ. ಕೋಮಲ್ ಕುಮಾರ್ ಮುಂದಿನ ಚಿತ್ರದ ಬಗ್ಗೆ ಪಿಎಂ ನರೇಂದ್ರ ಮೋದಿ, ಕರ್ನಾಟಕ ಸಿಎಂ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಚ್‌ಡಿ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.

  'ರಾಬರ್ಟ್' ಚಿತ್ರದ ಸಂಭಾಷಣೆಕಾರ ಈಗ ಸ್ಟಾರ್ ನಟನ ಚಿತ್ರಕ್ಕೆ ಡೈರೆಕ್ಟರ್'ರಾಬರ್ಟ್' ಚಿತ್ರದ ಸಂಭಾಷಣೆಕಾರ ಈಗ ಸ್ಟಾರ್ ನಟನ ಚಿತ್ರಕ್ಕೆ ಡೈರೆಕ್ಟರ್

  ಅಚ್ಚರಿಯಾದರೂ ಇದು ನಿಜನಾ....ಕೋಮಲ್ ಮುಂದಿನ ಸಿನಿಮಾ ಹೆಸರೇನು ಎಂಬುದನ್ನು ಅಕ್ಟೋಬರ್ 30ರಂದು ಅನಾವರಣ ಮಾಡಲಾಗುವುದು ಎಂದು ಮೋದಿ ಸೇರಿದಂತೆ ಕರ್ನಾಟಕ ಘಟಾನುಘಟಿ ರಾಜಕಾರಣಿಗಳು ಹೇಳಿದ್ದಾರೆ.

  ನರೇಂದ್ರ ಮೋದಿ, ಕರ್ನಾಟಕ ಸಿಎಂ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಚ್‌ಡಿ ಕುಮಾರಸ್ವಾಮಿ ಅವರಂತೆ ಪಾತ್ರಧಾರಿಗಳನ್ನು ಬಳಸಿಕೊಂಡು ''ಅಕ್ಟೋಬರ್ 30ರಂದು ಟೈಟಲ್ ತಿಳಿಸಲಾಗುವುದು'' ಎಂದು ಪ್ರಚಾರ ಮಾಡಿದೆ. ಚಿತ್ರತಂಡದ ಈ ಹೊಸ ಪ್ರಯತ್ನಕ್ಕೆ ಚಿತ್ರರಸಿಕರು ಸಹ ಮೆಚ್ಚುಗೆಗೆ ವ್ಯಕ್ತಪಡಿಸಿದ್ದಾರೆ.

  ಅಂದ್ಹಾಗೆ, ಈ ಚಿತ್ರಕ್ಕೆ ನವನಿರ್ದೇಶಕ ರಾಜಶೇಖರ್ ಆಕ್ಟನ್ ಕಟ್ ಹೇಳುತ್ತಿದ್ದಾರೆ. 'ಮಜಾ ಟಾಕೀಸ್' ಹಾಗೂ ದರ್ಶನ್ ನಟನೆಯ 'ರಾಬರ್ಟ್' ಚಿತ್ರಕ್ಕೆ ಸಂಭಾಷಣೆ ಬರೆದಿರುವ ರಾಜಶೇಖರ್ ಅವರು ಕೋಮಲ್ ಜೊತೆ ತಮ್ಮ ಮೊದಲ ಸಿನಿಮಾ ಮಾಡುತ್ತಿದ್ದಾರೆ.

  English summary
  Komal's new film title to be announced on October 30. KL Rajashekar to direct film produced by TR Chandrasekhar.
  Saturday, October 24, 2020, 13:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X