ಉತ್ತರ ಕರ್ನಾಟಕದ 'ಖೊಟ್ಟಿ ಪೈಸೆ' ಚಲನಚಿತ್ರ ಜುಲೈನಲ್ಲಿ ತೆರೆಗೆ
ಜ್ಯೋತಿ ಫಿಲ್ಮ್ ಬ್ಯಾನರ್ ಅಡಿ ಚಿತ್ರೀಕರಣಗೊಂಡ 'ಖೊಟ್ಟಿ ಪೈಸೆ' ಕನ್ನಡ ಚಲನಚಿತ್ರ ಜುಲೈ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ. ಈ ವಿಷಯವನ್ನು ಚಿತ್ರದ ನಿರ್ದೇಶಕ ಕಿರಣ್ ಆರ್.ಕೆ ತಿಳಿಸಿದ್ದಾರೆ.
ಇಂದು ಬಾಗಲಕೋಟೆಯ ನವನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಕ್ಕಾ ಉತ್ತರ ಕರ್ನಾಟಕ ಶೈಲಿಯ ಭಾಷೆಯ ಚಿತ್ರ ಇದಾಗಿದೆ. ಒಳ್ಳೆಯ ಕಥೆ ಇದ್ದು ಕುಟುಂಬದ ಜನ ಕುಳಿತುಕೊಂಡು ನೋಡುವ ಚಿತ್ರವಾಗಿದೆ ಎಂದರು. ಇನ್ನು ಮನುಷ್ಯನ ಜೀವನಕ್ಕೆ ಬೇಕಾಗುವ ಅವಶ್ಯಕತೆ ಕುರಿತು ಚಿತ್ರವನ್ನು ಎಣೆಯಲಾಗಿದೆಯಂತೆ.
'ಖೊಟ್ಟಿ ಪೈಸೆ' ಚಿತ್ರದ ಚಿತ್ರೀಕರಣ ಬಾಗಲಕೋಟೆ ಜಿಲ್ಲೆಯ ಮುರನಾಳ, ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ನಡೆಸಲಾಗಿದೆ. ಸಿನಿಮಾದಲ್ಲಿ ಉತ್ತರ ಕರ್ನಾಟಕ ಅದರಲ್ಲಿಯೂ ಬಾಗಲಕೋಟೆ ಮತ್ತು ವಿಜಯಪುರದ ಹೆಚ್ಚು ಕಲಾವಿದರು ನಟಿಸಿದ್ದಾರಂತೆ.

ಉಳಿದಂತೆ, ಹಾಸ್ಯನಟ ಬಿರಾದರ, ರಾಮಚೇತನ, ಸಹನ, ಕುಮಾರ, ನಂದಿನಿ ಸೇರಿದಂತೆ ಇನ್ನಿತರ ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಖೊಟ್ಟಿ ಪೈಸೆ' ಚಿತ್ರಕ್ಕೆ ಗಿರ್ಜಾ ಕುಮಾರ ಬಂಡವಾಳ ಹಾಕಿದ್ದು, ಅಂದಾಜು 40 ಲಕ್ಷ ರೂಪಾಯಿ ಬಜೆಟ್ ನಲ್ಲಿ ಈ ಚಿತ್ರ ನಿರ್ಮಾಣ ಗೊಂಡಿದೆಯಂತೆ.


Click it and Unblock the Notifications











