twitter
    For Quick Alerts
    ALLOW NOTIFICATIONS  
    For Daily Alerts

    ಮಂಗಳೂರಿಗರಿಗೆ ಮೋಡಿ ಮಾಡಿದ ಜ್ಯೋತಿರಾಜ್

    By Mahesh
    |

    ಚಿತ್ರದುರ್ಗದ ಪ್ರತಿಭೆ ಕೋತಿರಾಜನ ಜೀವನ ಕಥೆಯನ್ನು ಹೊಂದಿರುವ 'ಜ್ಯೋತಿ ಅಲಿಯಾಸ್ ಕೋತಿರಾಜ' ಚಿತ್ರ ತೆರೆಗೆ ಬರುತ್ತಿರುವ ವಿಷಯ ಎಲ್ಲರಿಗೂ ಗೊತ್ತೇ ಇದೆ. ನಮ್ಮ ನೆಲದ ಸ್ಪೈಡರ್ ಮ್ಯಾನ್ ಜ್ಯೋತಿ ರಾಜ್ ಈಗ ತಮ್ಮ ಚಿತ್ರದ ಪ್ರಚಾರಕ್ಕಾಗಿ ಎತ್ತರೆತ್ತರ ಕಟ್ಟಡಗಳನ್ನು ಹತ್ತಲು ಆರಂಭಿಸಿದ್ದಾರೆ.

    ವಿ.ಜಿ.ಫಿಲಂಸ್ ಲಾಂಛನದಲ್ಲಿ ಶೈಲಾಡೇವಿಡ್ ನಿರ್ಮಾಣದಲ್ಲಿ ತಯಾರಾಗಿರುವ ಜ್ಯೋತಿ ಅಲಿಯಾಸ್ ಕೋತಿರಾಜ ಚಿತ್ರದ ಪ್ರಥಮ ಪ್ರತಿ ಸಿದ್ದವಾಗಿದೆ. ಚಿತ್ರದ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರ ತಂಡ ಸದ್ಯಕ್ಕೆ ಮಂಗಳೂರಿಗೆ ಬಂದಿಳಿದಿದೆ.

    ಮಂಗಳೂರಿಗೆ ಬಂದ ಜ್ಯೋತಿ ರಾಜ್ ಗೆ ಪಡವಿನಂಗಡಿಯಲ್ಲಿರುವ 300 ಅಡಿ ಎತ್ತರದ ಇನ್ ಲ್ಯಾಂಡ್ ವಿಂಡ್ಸರ್ ಕಟ್ಟಡ ಕಣ್ಣಿಗೆ ಬಿದ್ದಿದೆ. ಕಟ್ಟಡದ ಮಾಲೀಕ ಸಿರಾಜ್ ಅಹ್ಮದ್ ಅವರು ಜ್ಯೋತಿರಾಜ್ ಇಚ್ಛೆಗೆ ಓಕೆ ಎಂದಿದ್ದಾರೆ.[ಜ್ಯೋತಿರಾಜ್ ಸಾಹಸದ ಚಿತ್ರಗಳು]

    ಭಾನುವಾರ ಮಂಗಳೂರಿನ ಜನರ ಎದುರಿನಲ್ಲಿ ಸುಮಾರು 24 ಅಂತಸ್ತಿನ ಕಟ್ಟಡವನ್ನು ಕೇವಲ ಒಂದು ಹಗ್ಗದ ನೆರವಿನಿಂದ ಹತ್ತಿದ ಜ್ಯೋತಿ ರಾಜ್ ಎಲ್ಲರನ್ನು ಮೂಕವಿಸ್ಮಿತರನ್ನಾಗಿಸಿಬಿಟ್ಟ. ಜ್ಯೋತಿರಾಜ್ ಸಾಹಸ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ವ್ಯವಸ್ಥಾಪಕ ನಿರ್ದೇಶಕ ಸಿರಾಜ್ ಅಹ್ಮದ್ ಅವರು ಆತ್ಮೀಯವಾಗಿ ಸನ್ಮಾನಿಸಿದರು. ಜ್ಯೋತಿರಾಜನ ಸಾಹಸವನ್ನು ನೋಡಲು ನಟಿ ದೀಪಿಕಾದಾಸ್ ನಿರ್ದೇಶಕ ಸೆಬಾಸ್ಟಿನ್ ಡೇವಿಡ್ ಕೂಡಾ ಹಾಜರಿದ್ದರು. [ಚಿತ್ರಗಳು: ಐಸಾಕ್ ರಿಚರ್ಡ್, ಮಂಗಳೂರು]

    ಹಗ್ಗ ಏಕೆ ಬೇಕು ಎಂದ ಜ್ಯೋತಿ ರಾಜ್

    ಹಗ್ಗ ಏಕೆ ಬೇಕು ಎಂದ ಜ್ಯೋತಿ ರಾಜ್

    ಜ್ಯೋತಿ ರಾಜ್ ಅಲಿಯಾಸ್ ಕೋತಿರಾಜ ಹಗ್ಗ ಬಳಸದೆ ಕಟ್ಟಡ ಹತ್ತಲು ಮುಂದಾದ. ಅದರೆ, ಕಟ್ಟಡದ ಮಾಲೀಕರಾದ ಸಿರಾಜ್ ಅವರು ಒಂದು ಹಗ್ಗವನ್ನಾದರೂ ಬಳಸುವಂತೆ ಒತ್ತಾಯಿಸಿದ ಮೇಲೆ ಓಕೆ ಎಂದ ಕೋತಿರಾಜ

    'ಜ್ಯೋತಿ ಅಲಿಯಾಸ್ ಕೋತಿರಾಜ' ಚಿತ್ರದ ಪ್ರಚಾರಕ್ಕಾಗಿ

    'ಜ್ಯೋತಿ ಅಲಿಯಾಸ್ ಕೋತಿರಾಜ' ಚಿತ್ರದ ಪ್ರಚಾರಕ್ಕಾಗಿ

    ಚಿತ್ರದುರ್ಗದ ಪ್ರತಿಭೆ ಕೋತಿರಾಜನ ಜೀವನ ಕಥೆಯನ್ನು ಹೊಂದಿರುವ 'ಜ್ಯೋತಿ ಅಲಿಯಾಸ್ ಕೋತಿರಾಜ' ಚಿತ್ರ ತೆರೆಗೆ ಬರುತ್ತಿರುವ ವಿಷಯ ಎಲ್ಲರಿಗೂ ಗೊತ್ತೇ ಇದೆ. ನಮ್ಮ ನೆಲದ ಸ್ಪೈಡರ್ ಮ್ಯಾನ್ ಜ್ಯೋತಿ ರಾಜ್ ಈಗ ತಮ್ಮ ಚಿತ್ರದ ಪ್ರಚಾರಕ್ಕಾಗಿ ಎತ್ತರೆತ್ತರ ಕಟ್ಟಡಗಳನ್ನು ಹತ್ತಲು ಆರಂಭಿಸಿದ್ದಾರೆ.

    15 ನಿಮಿಷದಲ್ಲಿ ಹತ್ತಿದ ಜ್ಯೋತಿ ರಾಜ್

    15 ನಿಮಿಷದಲ್ಲಿ ಹತ್ತಿದ ಜ್ಯೋತಿ ರಾಜ್

    ಪಡವಿನಂಗಡಿಯಲ್ಲಿರುವ 300 ಅಡಿ ಎತ್ತರದ ಇನ್ ಲ್ಯಾಂಡ್ ವಿಂಡ್ಸರ್ ಕಟ್ಟಡ. ಸುಮಾರು 24 ಅಂತಸ್ತಿನ ಕಟ್ಟಡವನ್ನು ಕೇವಲ ಒಂದು ಹಗ್ಗದ ನೆರವಿನಿಂದ 15 ನಿಮಿಷದಲ್ಲಿ ಹತ್ತಿದ ಜ್ಯೋತಿ ರಾಜ್.

    ಸಾಹಸವನ್ನು ನೋಡಲು ಬಂದ ದೀಪಿಕಾದಾಸ್

    ಸಾಹಸವನ್ನು ನೋಡಲು ಬಂದ ದೀಪಿಕಾದಾಸ್

    ಜ್ಯೋತಿರಾಜನ ಸಾಹಸವನ್ನು ನೋಡಲು ನಟಿ ದೀಪಿಕಾದಾಸ್ ನಿರ್ದೇಶಕ ಸೆಬಾಸ್ಟಿನ್ ಡೇವಿಡ್ ಕೂಡಾ ಹಾಜರಿದ್ದರು.

    ಮಂಗಳೂರಿಗೆ ನಾನು ಚಿರಋಣಿ : ಜ್ಯೋತಿರಾಜ್

    ಮಂಗಳೂರಿಗೆ ನಾನು ಚಿರಋಣಿ : ಜ್ಯೋತಿರಾಜ್

    ಮಂಗಳೂರಿಗೆ ಬಂದಿಳಿದ ನನಗೆ ಯಾರೂ ಗೊತ್ತಿರಲಿಲ್ಲ. ನಂತೂರು ಸರ್ಕಲ್ ಬಳಿ ನನ್ನನ್ನು ಗುರುತಿಸಿದ ಆಟೋ ಚಾಲಕರು ನನಗೆ ಸನ್ಮಾನ ಮಾಡಿ 10,000 ರು ಪ್ರೋತ್ಸಾಹ ಧನ ನೀಡಿದರು. ನನಗೆ ಅನೇಕ ಸಲ ಗಾಯಗಳಾಗುವುದುಂಟು ಆದರೆ ನಾನು ಸಾಹಸವನ್ನು ಬಿಡುವುದಿಲ್ಲ. ಮಂಗಳೂರಿನ ಸಹೃದಯರಿಂದ ನನ್ನ ಚಿಕಿತ್ಸೆ ಗಾಗಿ 5 ಲಕ್ಷ ರು ನೆರವು ಸಿಕ್ಕಿದೆ. ಅವರಿಗೆ ನಾನು ಚಿರಋಣಿ ಎಂದು ಜ್ಯೋತಿರಾಜ್ ಭಾವುಕರಾದರು.

    English summary
    Jyothi Raj dearly called as Kothi Raj, climbed to the top of City's 300ft high Skyscraper Inland Windsor at Padavinangadi here on December 7. Lead Actress of the Kannada Movie "Kothi Raja" Deepika Das, director of the film Sebastian David encouraged him.
    Sunday, December 7, 2014, 19:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X