For Quick Alerts
  ALLOW NOTIFICATIONS  
  For Daily Alerts

  ಸುದೀಪ್ ಫ್ಯಾನ್ಸ್ ಗೆ 'ಕೋಟಿಗೊಬ್ಬ-2' ಎಕ್ಸ್ ಕ್ಲೂಸಿವ್ ಶೋ.!

  By Harshitha
  |

  'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್ ಅಭಿನಯದ ಈ ವರ್ಷದ ಬಹು ನಿರೀಕ್ಷಿತ ಚಿತ್ರ 'ಕೋಟಿಗೊಬ್ಬ-2' ಬಿಡುಗಡೆಗೆ ದಿನ ಗಣನೆ ಶುರುವಾಗಿದೆ. ಈ ಶುಕ್ರವಾರ (ಆಗಸ್ಟ್ 12) 'ಕೋಟಿಗೊಬ್ಬ-2' ರಾಜ್ಯಾದ್ಯಂತ ಗ್ರ್ಯಾಂಡ್ ರಿಲೀಸ್ ಆಗಲಿದೆ ಅಂತ ನಿಮಗೆ ಗೊತ್ತಿದೆ. ಈಗ ಅದಕ್ಕಿಂತ ಇಂಟ್ರೆಸ್ಟಿಂಗ್ ಆಗಿರುವ ಸುದ್ದಿ ಹೊತ್ತು ತಂದಿದ್ದೀವಿ ನೋಡಿ.

  ನೀವು ಕಿಚ್ಚ ಸುದೀಪ್ ಅಪ್ಪಟ ಅಭಿಮಾನಿಯಾಗಿದ್ದರೆ, 'ಕೋಟಿಗೊಬ್ಬ-2' ಚಿತ್ರದ ಫಸ್ಟ್ ಡೇ ಫಸ್ಟ್ ಶೋ ನೋಡಲು ತುದಿಗಾಲಲ್ಲಿ ನಿಂತಿದ್ದರೆ, 'ಕೋಟಿಗೊಬ್ಬ-2' ಚಿತ್ರತಂಡ ನಿಮಗಾಗಿ ಒಂದು ಸ್ಪೆಷಲ್ ಪ್ಲಾನ್ ಮಾಡಿದೆ. [ಟ್ರೈಲರ್: ಅಭಿಮಾನಿಗಳ ಕುತೂಹಲಕ್ಕೆ ಕಿಚ್ಚು ಹಚ್ಚಿದ ಕಿಚ್ಚ]

  ಇದೇ ಗುರುವಾರ (ಆಗಸ್ಟ್ 11) ರಾತ್ರಿ 9.30ಕ್ಕೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಇರುವ ಪ್ರಸನ್ನ ಚಿತ್ರಮಂದಿರದಲ್ಲಿ 'ಕೋಟಿಗೊಬ್ಬ-2' ಚಿತ್ರದ ವಿಶೇಷ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಇದು ಎಕ್ಸ್ ಕ್ಲೂಸಿವ್ ಆಗಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಮಾತ್ರ.! [ಟೀಸರ್: ವ್ಹಾ.! ನಮ್ ಕಿಚ್ಚ ಅವ್ರುದ್ದು ಅದೇನ್ ಸ್ಟೈಲ್ ಅಂತೀರಾ]

  ಟಿಕೆಟ್ ಬೆಲೆ 200 ರೂಪಾಯಿ ಕೊಟ್ಟರೆ, ತಮಿಳು ನಿರ್ದೇಶಕ ಕೆ.ಎಸ್.ರವಿಕುಮಾರ್ ಆಕ್ಷನ್ ಕಟ್ ಹೇಳಿರುವ 'ಕೋಟಿಗೊಬ್ಬ-2' ಚಿತ್ರವನ್ನ ಎಲ್ಲರಿಗಿಂತ ಮೊದಲು ನೀವು ಕಣ್ತುಂಬಿಕೊಳ್ಳಬಹುದು. ['ಹೂನ ಹೂನ' ಅಂತ ಸುದೀಪ್ ಜೊತೆ ನಿತ್ಯಾ ಮೆನನ್ ಕಿಲಕಿಲ]

  ಬುಕ್ಕಿಂಗ್ ವ್ಯವಸ್ಥೆ ಇದ್ಯಾ.? ಟಿಕೆಟ್ ಹಂಚಿಕೆ ಹೇಗೆ ಎಂಬುದರ ಬಗ್ಗೆ ಸದ್ಯಕ್ಕೆ ಕ್ಲಾರಿಟಿ ಸಿಕ್ಕಿಲ್ಲ. ಸಿಕ್ಕ ತಕ್ಷಣ ನಿಮಗೆ ಅಪ್ ಡೇಟ್ ಮಾಡ್ತೀವಿ. 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ....

  English summary
  Kiccha Sudeep starrer 'Kotigobba-2' special show is arranged Exclusively for Sudeep Fans on August 11th at Prasanna Theater, Bengaluru. Ticket cost - Rs.200.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X