ಕಿಚ್ಚನ ಡೈಲಾಗ್ ಅಭಿಮಾನಿಗಳ ಬಾಯಲ್ಲಿ, ನೋಡಿ ಆನಂದಿಸಿ....

By Suneetha

ಯಾವುದೇ ಸ್ಟಾರ್ ನಟರ ಬಹುನಿರೀಕ್ಷಿತ ಸಿನಿಮಾಗಳು ತೆರೆಗೆ ಬರ್ತವೆ ಅಂದ್ರೆ, ಒಂದು ವಾರಕ್ಕೆ ಮುಂಚೆಯೇ ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಆ ಸಿನಿಮಾ ಟ್ರೆಂಡ್ ಆಗುತ್ತದೆ. ಮೆಚ್ಚಿನ ಸ್ಟಾರ್ ನಟನ ಸಿನಿಮಾದ ಯಾವುದೋ ಪಂಚಿಂಗ್ ಡೈಲಾಗ್ ಗಳನ್ನೋ, ಅಥವಾ ಯಾವುದೋ ಸ್ಟೈಲ್ ಅನ್ನು ಹಿಡಿದುಕೊಂಡು ಅಭಿಮಾನಿಗಳು ಟ್ರೆಂಡ್ ಹುಟ್ಟು ಹಾಕಿ ಬಿಡುತ್ತಾರೆ.

ಇದೀಗ ಕಿಚ್ಚ ಸುದೀಪ್ ಅವರ 'ಕೋಟಿಗೊಬ್ಬ 2' ಸಿನಿಮಾದ ಡೈಲಾಗೊಂದು ಸಿನಿಮಾ ತೆರೆ ಕಾಣಲು ಒಂದು ವಾರ ಇದೆ ಎನ್ನುವಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಯಂಕರ ಟ್ರೆಂಡ್ ಆಗಿದೆ.[ಟ್ರೈಲರ್: ಅಭಿಮಾನಿಗಳ ಕುತೂಹಲಕ್ಕೆ ಕಿಚ್ಚು ಹಚ್ಚಿದ ಕಿಚ್ಚ]

ಈ ಮೊದಲು ಕಿಚ್ಚ ಸುದೀಪ್ ಅವರ 'ಹೆಬ್ಬುಲಿ' ಚಿತ್ರದ ಹೇರ್ ಸ್ಟೈಲ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೆಂಡ್ ಆಗಿತ್ತು. ಅಭಿಮಾನಿಗಳು ಕೂಡ ಸುದೀಪ್ ಅವರ ತರಾನೇ ಹೇರ್ ಸ್ಟೈಲ್ ಮಾಡಿಕೊಂಡು ಸುದ್ದಿ ಮಾಡಿದ್ದರು. ಇದೀಗ 'ಕೋಟಿಗೊಬ್ಬ 2' ಚಿತ್ರದ ಸರದಿ

ಬಹಳ ದಿನಗಳಿಂದ ಸುದೀಪ್ ಅಭಿಮಾನಿಗಳು 'ಕೋಟಿಗೊಬ್ಬ 2' ಚಿತ್ರವನ್ನು ತೆರೆಯ ಮೇಲೆ ನೋಡಲು ಜಾತಕಪಕ್ಷಿಯಂತೆ ಕಾಯುತ್ತಿದ್ದ ದಿನಕ್ಕೆ ಬ್ರೇಕ್ ಬೀಳುವ ಸಂದರ್ಭ ಹತ್ತಿರ ಬರುತ್ತಿದೆ. ಮುಂದಿನ ಶುಕ್ರವಾರ, ಆಗಸ್ಟ್ 12 ರಂದು ಕಿಚ್ಚ ಸುದೀಪ್ ಅವರ 'ಕೋಟಿ' ಕಥೆ 'ಕೋಟಿಗೊಬ್ಬ 2' ಅದ್ದೂರಿಯಾಗಿ ತೆರೆಗೆ ಅಪ್ಪಳಿಸುತ್ತಿದೆ.[ಪವನ್ ಒಡೆಯರ್-ಕಿಚ್ಚ ಸುದೀಪ್ ನಡುವೆ ಹೊಸ ಒಪ್ಪಂದ.!]

ಈಗಾಗಲೇ 'ಕೋಟಿಗೊಬ್ಬ 2' ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು, ಸಾಕಷ್ಟು ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಈ ಟ್ರೈಲರ್ ಹವಾ ಸಾಮಾಜಿಕ ಜಾಲತಾಣಗಳಲ್ಲಿ ಹೇಗಿದೆ ಅಂತ ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ....

ಕಿಚ್ಚನ 'ಪವರ್ ಆಫ್ ಮನಿ' ಟ್ರೆಂಡ್ ಆಯ್ತು

ಕಿಚ್ಚನ 'ಪವರ್ ಆಫ್ ಮನಿ' ಟ್ರೆಂಡ್ ಆಯ್ತು

ಅಂದಹಾಗೆ 'ಕೋಟಿಗೊಬ್ಬ 2' ಟ್ರೈಲರ್ ನಲ್ಲಿ ಕಿಚ್ಚ ಸುದೀಪ್ ಅವರು 'ದಟ್ಸ್ ದ ಪವರ್ ಆಫ್ ಮನಿ' ಅಂತ ಒಂದು ಡೈಲಾಗ್ ಹೊಡಿತಾರೆ. ಆ ಡೈಲಾಗ್ ಇದೀಗ ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಅಂತೂ ಕಿಚ್ಚನ ಪವರ್ ಆಫ್ ಮನಿ ಸಖತ್ ಟ್ರೆಂಡಿಂಗ್ ಆಗಿದೆ.[ಸುದೀಪ್ ಅಸಾಧಾರಣ ಸಾಧನೆಗೆ ನನ್ನದೊಂದು ಸೆಲ್ಯೂಟ್ ಎಂದವರಾರು.?]

ಅಭಿಮಾನಿಗಳ ಡಬ್ ಸ್ಮ್ಯಾಷ್

ಅಭಿಮಾನಿಗಳ ಡಬ್ ಸ್ಮ್ಯಾಷ್

ಟ್ವಿಟ್ಟರ್ ತಾಣದಲ್ಲಿ ಕಿಚ್ಚನ ಕ್ರೇಜ್ ಸಖತ್ ಜೋರಾಗಿದ್ದು, ಕಟ್ಟಾ ಅಭಿಮಾನಿಗಳಂತೂ 'ದಟ್ಸ್ ದ ಪವರ್ ಆಫ್ ಮನಿ' ಡೈಲಾಗ್ ಅನ್ನು ಡಬ್ ಸ್ಮ್ಯಾಷ್ ಮಾಡಿ-ಮಾಡಿ ಟ್ವಿಟ್ಟರ್ ನಲ್ಲಿ ಹಾಕಿಕೊಂಡು ಕಿಚ್ಚ ಸುದೀಪ್ ಅವರಿಗೆ 'ನಿಮ್ಮ ಅಭಿಪ್ರಾಯ ತಿಳಿಸಿ' ಅಂತ ಒಂದೇ ಸಮನೆ ಟ್ವೀಟ್ ಮಾಡುತ್ತಿದ್ದಾರೆ.[ಅಬ್ಬಾ..ಸದ್ಯ ಪುನೀತ್-ಸುದೀಪ್ ಗೆ ಕ್ಲ್ಯಾಷ್ ಆಗ್ತಿಲ್ಲ.!]

ಕಿಚ್ಚನ ರೀ-ಟ್ವೀಟ್ ಗಳು/ಕಾಮೆಂಟ್ ಗಳು

ಕಿಚ್ಚನ ರೀ-ಟ್ವೀಟ್ ಗಳು/ಕಾಮೆಂಟ್ ಗಳು

ಅಭಿಮಾನಿಗಳ ಈ ಸಂಭ್ರಮಕ್ಕೆ ತಣ್ಣೀರೆರೆಚಲು ಇಚ್ಛಿಸದ ಕಿಚ್ಚ ಸುದೀಪ್ ಅವರು ಪ್ರತಿಯೊಬ್ಬ ಅಭಿಮಾನಿಗಳ ಟ್ವೀಟ್ ಗೂ, ರೀ-ಟ್ವೀಟ್ ಮಾಡುತ್ತಾ ವಿಭಿನ್ನ ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲದೇ ಇನ್ನೂ ಚೆನ್ನಾಗಿ ಮಾಡಬಹುದಿತ್ತು, ಹೀಗೆ ಮಾಡಿ, ಹಾಗೆ ಮಾಡಿ ಅಂತ ಬಿಟ್ಟಿ ಸಲಹೆ ಬೇರೆ ಕೊಡುತ್ತಿದ್ದಾರೆ.

ಅಭಿಮಾನಿಗಳ ಸಂಭ್ರಮ/ಸಡಗರ

ಅಭಿಮಾನಿಗಳ ಸಂಭ್ರಮ/ಸಡಗರ

ಖುದ್ದು ಕಿಚ್ಚ ಅವರೇ ರೀ-ಟ್ವೀಟ್ ಮಾಡಿ ಕಾಮೆಂಟ್ ಮಾಡುತ್ತಿದ್ದಾರೆ ಅಂದ್ರೆ ಅಭಿಮಾನಿಗಳ ಖುಷಿ ಕೇಳಬೇಕಾ....'ಹೋಯ್ ನನ್ನ ಡಬ್ ಸ್ಮ್ಯಾಷ್ ಟ್ವೀಟ್ ಗೆ ಕಿಚ್ಚ ಸುದೀಪ್ ರೀ-ಟ್ವೀಟ್ ಮಾಡಿದ್ರು ಅಂತ ಅಭಿಮಾನಿಗಳು ಹುರ್ರೇ...'ಅಂತ ಗೋಲ್ಡ್ ಮೆಡಲ್ ಗೆದ್ದಷ್ಟು ಖುಷಿಯಲ್ಲಿ ಬೀಗುತ್ತಿದ್ದಾರೆ.

ನಟ ಚಿರಂಜೀವಿ ಸರ್ಜಾ

ಬರೀ ಅಭಿಮಾನಿಗಳು ಮಾತ್ರವಲ್ಲದೇ ಚಿತ್ರನಟ ಚಿರಂಜೀವಿ ಸರ್ಜಾ ಅವರು ಕೂಡ ಡಬ್ ಸ್ಮ್ಯಾಷ್ ಮಾಡಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್ ಅವರು 'ಹೋಟಗಾರ' ಅಂತ ಸಖತ್ ಫನ್ನಿ ರಿಪ್ಲೈ ಮಾಡಿದ್ದಾರೆ.

ನಟ ರಾಹುಲ್

ಸುದೀಪ್ ಅವರ 'ಜಿಗರ್ ಥಂಡ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟ ರಾಹುಲ್ ಅವರು ಕೂಡ ಡಬ್ ಸ್ಮ್ಯಾಷ್ ಮಾಡಿ ಟ್ವೀಟ್ ಮಾಡಿದ್ದಾರೆ. ಅಂದಹಾಗೆ ಈ ಡಬ್ ಸ್ಮ್ಯಾಷ್ ಅನ್ನು ಮೊದಲು ಶುರು ಹಚ್ಚಿಕೊಂಡಿದ್ದು, ನಟ ರಾಹುಲ್ ಅವರು ತದನಂತರ ಎಲ್ಲಾ ಅಭಿಮಾನಿಗಳನ್ನು ಇದನ್ನು ಟ್ರೆಂಡ್ ಮಾಡಿದರು.

ಅಭಿಮಾನಿ ಕಿಚ್ಚ ಶರಣ್

ಕಿಚ್ಚ ಸುದೀಪ್ ಅವರ ಅಭಿಮಾನಿ ಕಿಚ್ಚ ಶರಣ್ ಎಂಬುವವರು ಮಾಡಿರುವ ಪವರ್ ಆಫ್ ಮನಿ 'ಡಬ್ ಸ್ಮ್ಯಾಷ್'ಗೆ ಕಿಚ್ಚ ಸುದೀಪ್ ಅವರು '-ಟ್ವೀಟ್ ಮಾಡಿ 'ಗುಡ್ ಟ್ರೈ' ಎಂದು ಕಾಮೆಂಟ್ ಮಾಡಿದ್ದಾರೆ.

ಅಭಿಮಾನಿ ಕಲ್ಯಾಣ್ ಕುಮಾರ್

ಕಲ್ಯಾಣ್ ಕುಮಾರ್ ಎಂಬ ಅಭಿಮಾನಿಯೊಬ್ಬರು 'ಡಬ್ ಸ್ಮ್ಯಾಷ್' ಮಾಡಿದ್ದು, ಇದಕ್ಕೆ ಕಿಚ್ಚ ಸುದೀಪ್ ಅವರು 'ಸೂಪರ್ಬ್' ಎಂದು ಕಾಮೆಂಟ್ ಮಾಡಿದ್ದಾರೆ.

ಅಭಿಮಾನಿ ಕಿಚ್ಚ ಮಹೇಶ್

ಸುದೀಪ್ ಅವರ ಕಟ್ಟಾ ಅಭಿಮಾನಿ ಮಹೇಶ್ ಮಾಡಿರುವ ಡಬ್ ಸ್ಮ್ಯಾಷ್ ಗೆ ಕಿಚ್ಚ ಸುದೀಪ್ ಅವರು 'ನಾನು ಹೇಳಲೇಬೇಕು, ಇದು ಮಲ್ಟಿ ಟ್ಯಾಲೆಂಟೆಡ್' ಎಂದು ಕಾಮೆಂಟ್ ಮಾಡಿದ್ದಾರೆ.

ಅಭಿಮಾನಿ ಸುನೀಲ್ ಲಮಾಣಿ

ಅಭಿಮಾನಿ ಸುನೀಲ್ ಅವರ ವಿಭಿನ್ನ ಸ್ಟೈಲ್ ಇರುವ ಡಬ್ ಸ್ಮ್ಯಾಷ್ ಗೆ ಸುದೀಪ್ ಅವರ 'ಮೂಗು ಒರೆಸುವ ಅನುಕರಣೆ ಮಾಡಿದ್ದು', ಅಂತ ಕಾಮೆಂಟ್ ಮಾಡಿದ್ದಾರೆ.

ಸೆನ್ಸಾರ್ ನಲ್ಲಿ ಕ್ಲೀನ್ ಚಿಟ್

ಸೆನ್ಸಾರ್ ನಲ್ಲಿ ಕ್ಲೀನ್ ಚಿಟ್

ಸೆನ್ಸಾರ್ ಪರೀಕ್ಷೆಯಲ್ಲಿ ಕ್ಲೀನ್ ಚಿಟ್ ಪಡೆದುಕೊಂಡಿರುವ 'ಕೋಟಿಗೊಬ್ಬ 2' 'ಯು' ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಆಗಸ್ಟ್ 12, ಶುಕ್ರವಾರದಂದು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕಕಾಲದಲ್ಲಿ ಗ್ರ್ಯಾಂಡ್ ಆಗಿ ತೆರೆಗೆ ಅಪ್ಪಳಿಸಲಿದೆ.

More from Filmibeat

English summary
Kannada Actor Sudeep and Actress Nithya menen starrer Kannada Movie 'Kotigobba 2' dialogue 'That's the Power of Money' trending in twitter. Actor Sudeep also re-tweet the post of fans. Here is the dubsmash collections check it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X