ಕೋಟಿಗೊಬ್ಬ-ರಾಬರ್ಟ್ ಪೋಸ್ಟರ್ ವೀಕ್ಷಣೆಯ ಬಲಾಬಲ ಹೇಗಿದೆ?
Recommended Video
ಈ ವರ್ಷ ಎರಡು ಬಹುನಿರೀಕ್ಷೆಯ ಚಿತ್ರಗಳ ಪಟ್ಟಿಯಲ್ಲಿ ಸುದೀಪ್ ಅಭಿನಯದ ಕೋಟಿಗೊಬ್ಬ 3 ಮತ್ತು ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಟಾಪ್ ನಲ್ಲಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಎರಡು ಚಿತ್ರಗಳು ಮೋಷನ್ ಪೋಸ್ಟರ್ ಬಿಡುಗಡೆ ಮಾಡಿತ್ತು.
ಕೋಟಿಗೊಬ್ಬ 3 ಹಾಗೂ ರಾಬರ್ಟ್ ಎರಡನೇ ಪೋಸ್ಟರ್ ಗೆ ಮೊದಲ ದಿನ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸುದೀಪ್ ಮತ್ತು ದರ್ಶನ್ ಅಭಿಮಾನಿಗಳು ಸುಗ್ಗಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದರು.
ಇದೀಗ, ಸಂಕ್ರಾಂತಿ ಮುಗಿದಿದೆ. ಎರಡು ಪೋಸ್ಟರ್ ಬಂದು ಎರಡ್ಮೂರು ದಿನ ಕಳೆದಿದೆ. ಸದ್ಯಕ್ಕೆ ಯೂಟ್ಯೂಬ್ನಲ್ಲಿ ಕೋಟಿಗೊಬ್ಬ ಮತ್ತು ರಾಬರ್ಟ್ ಪೋಸ್ಟರ್ ಗಳು ವೀಕ್ಷಣೆ ಸಂಖ್ಯೆ ಹೇಗಿದೆ ನೋಡೋಣ. ಮುಂದೆ ಓದಿ....

7.6 ಲಕ್ಷ ದಾಟಿದ ಕೋಟಿಗೊಬ್ಬನ ವೀಕ್ಷಣೆ
ಜನವರಿ 14 ರಂದು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದ್ದ ಕೋಟಿಗೊಬ್ಬ 3 ಮೋಷನ್ ಪೋಸ್ಟರ್, ಇದುವರೆಗೂ 7.6 ಲಕ್ಷ (767,801) ವೀಕ್ಷಣೆ ಕಂಡಿದೆ. ಇದರಲ್ಲಿ 66k ಲೈಕ್ಸ್, 7.8k ಡಿಸ್ ಲೈಕ್ಸ್ ಹೊಂದಿದೆ. 17,522 ಕಾಮೆಂಟ್ ಹೊಂದಿದೆ.

ರಾಬರ್ಟ್ ಲುಕ್ ವೀಕ್ಷಣೆ ಎಷ್ಟು?
ಜನವರಿ 15 ರಂದು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾಗಿದ್ದ ರಾಬರ್ಟ್ ಎರಡನೇ ಮೋಷನ್ ಪೋಸ್ಟರ್, ಇದುವರೆಗೂ 9.5 ಲಕ್ಷ (958,608) ವೀಕ್ಷಣೆ ಕಂಡಿದೆ. ಇದರಲ್ಲಿ 109k ಲೈಕ್ಸ್, 6k ಡಿಸ್ ಲೈಕ್ಸ್ ಹೊಂದಿದ್ದು, 24,273 ಕಾಮೆಂಟ್ ಹೊಂದಿದೆ.

ಎರಡು ಪೋಸ್ಟರ್ ಗೂ ಅದ್ಭುತ ರೆಸ್ಪಾನ್ಸ್
ಕೋಟಿಗೊಬ್ಬ 3 ಮತ್ತು ರಾಬರ್ಟ್ ಸಿನಿಮಾದ ಎರಡೂ ಪೋಸ್ಟರ್ ಗೂ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮೋಷನ್ ಪೋಸ್ಟರ್ ವಿಡಿಯೋ ನೋಡಿದ ಬಹುತೇಕ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಎರಡು ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಲಿದೆ ಎಂಬ ನಿರೀಕ್ಷೆ ಹುಟ್ಟಿಕೊಂಡಿದೆ.

ಬಿಡುಗಡೆ ಯಾವಾಗ?
ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸಿನಿಮಾ ಸಮ್ಮರ್ ನಲ್ಲಿ ತೆರೆಕಾಣಲಿದೆ. ಸದ್ಯದ ಮಾಹಿತಿ ಪ್ರಕಾರ ಏಪ್ರಿಲ್ 9 ರಂದು ಚಿತ್ರಮಂದಿರಕ್ಕೆ ಬರಲಿದೆಯಂತೆ. ಆದರೆ, ಕೋಟಿಗೊಬ್ಬ 3 ಚಿತ್ರದ ಬಿಡುಗಡೆ ಕುರಿತು ಇದುವರೆಗೂ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಬಹುಶಃ, ರಾಬರ್ಟ್ ಬಳಿಕ ಕೋಟಿಗೊಬ್ಬ ತೆರೆಗೆ ಬರಬಹುದು.


Click it and Unblock the Notifications











