ರಿಲೀಸ್‌ಗೆ ಮುಂಚೆ 'ಕೋಟಿಗೊಬ್ಬ 3' ಹಣ ಗಳಿಸಿದೆ ಎಂಬುದು ಸುಳ್ಳು, ನಾನು ಸಾಲದಲ್ಲಿದ್ದೀನಿ: ನಿರ್ಮಾಪಕ

'ಕೋಟಿಗೊಬ್ಬ 3' ಸಿನಿಮಾ ಬಿಡುಗಡೆ ಆಗುವ ಮೋದಲೇ ಕೋಟ್ಯಂತರ ರುಪಾಯಿ ಬ್ಯುಸಿನೆಸ್ ಮಾಡಿದೆ. ಬಹಳ ದೊಡ್ಡ ಮೊತ್ತವನ್ನು ಸಂಪಾದನೆ ಮಾಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ನಿರ್ಮಾಪಕ ಸೂರಪ್ಪ ಬಾಬು ಅದೆಲ್ಲ ಸುಳ್ಳು ಎಂದಿದ್ದಾರೆ.

'ಕೋಟಿಗೊಬ್ಬ 3' ಸಿನಿಮಾವು ಬಿಡುಗಡೆಗೆ ಮುಂಚೆಯೇ ಕೋಟ್ಯಂತರ ಹಣ ಗಳಿಸಿದೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ ಅದು ನಿಜವಲ್ಲ. ನಾನು ಸಾಲ ಮಾಡಿ ಸಿನಿಮಾ ಮಾಡಿದ್ದೇನೆ, ಬಡ್ಡಿಗಳನ್ನು ಕಟ್ಟಲಾಗದೆ ಹೆಣಗುತ್ತಿದ್ದೇನೆ. ಎಲ್ಲ ಬಂಡವಾಳ 'ಕೋಟಿಗೊಬ್ಬ 3' ಸಿನಿಮಾದ ಮೇಲಿದ್ದು, ಸಿನಿಮಾ ಗೆದ್ದರಷ್ಟೆ ನನಗೆ ಉಳಿಗಾಲ ಎಂದಿದ್ದಾರೆ ಸೂರಪ್ಪ ಬಾಬು. ಸಿನಿಮಾವು ಕೋಟ್ಯಂತರ ರುಪಾಯಿ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡಿದೆ ಎಂಬುದೆಲ್ಲ ಸುಳ್ಳು ಎಂದಿದ್ದಾರೆ.

ಸುದೀಪ್ ನಟನೆಯ 'ಕೋಟಿಗೊಬ್ಬ 3' ಸಿನಿಮಾವು ಅಕ್ಟೋಬರ್ 14 ರಂದು ಬಿಡುಗಡೆ ಆಗಲಿದೆ. ಸಿನಿಮಾ ಬಿಡುಗಡೆ ಮುಂಚೆಯೇ 70 ಕೋಟಿ ಕಲೆಕ್ಷನ್ ಮಾಡಿದೆ ಎಂದು ಸುದೀಪ್ ಅಭಿಮಾನಿಗಳು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

70 ಕೋಟಿ ಲಾಭ ಮಾಡಿರುವುದಾಗಿ ಲೆಕ್ಕ!

70 ಕೋಟಿ ಲಾಭ ಮಾಡಿರುವುದಾಗಿ ಲೆಕ್ಕ!

'ಕೋಟಿಗೊಬ್ಬ 3' ಸಿನಿಮಾದ ಪ್ರೀ ರಿಲೀಸ್ ಬ್ಯುಸಿನೆಸ್ ಕುರಿತಾಗಿ ಹರಿದಾಡುತ್ತಿರುವ ಪೋಸ್ಟ್‌ನಲ್ಲಿ, ಸಿನಿಮಾದ ಹಿಂದಿ ಹಕ್ಕು 21 ಕೋಟಿಗೆ ಸೂಪರ್‌ಕ್ಲಸ್ಟರ್ ಪ್ರೊಡಕ್ಷನ್‌ಗೆ ಮಾರಾಟವಾಗಿದೆ ಎಂದು. ತೆಲುಗು ಹಕ್ಕು 5 ಕೋಟಿಗೆ ಗುಡ್ ಸಿನಿಮಾ ಗ್ರೂಫ್ಸ್‌ಗೆ ಮಾರಾಟವಾಗಿದೆ ಎಂದು. ಕನ್ನಡ ಮತ್ತು ತೆಲುಗು ಡಿಜಿಟಲ್ ಹಕ್ಕು ಅಮೆಜಾನ್‌ ಪ್ರೈಂಗೆ 10 ಕೋಟಿಗೆ ಮಾರಾಟವಾಗಿದೆ. ಕನ್ನಡ, ತೆಲುಗು ಆಡಿಯೋ ಹಕ್ಕು ಐದು ಕೋಟಿಗೆ ಮಾರಾಟವಾಗಿದೆ. ವಿದೇಶದಲ್ಲಿ ಪ್ರದರ್ಶನ ಮಾಡುವ ಹಕ್ಕು 2 ಕೋಟಿಗೆ ಮಾರಾಟವಾಗಿದೆ. ಹಿಂದಿ ಸ್ಯಾಟಲೈಟ್ ಹಕ್ಕು 10 ಕೋಟಿಗೆ ಮಾರಾಟವಾಗಿದೆ. ತೆಲುಗು ಸ್ಯಾಟಲೈಟ್ ಹಕ್ಕು ಇನ್ನೂ ಮಾರಾಟವಾಗಿಲ್ಲ ಎಂದು ಲೆಕ್ಕಾಚಾರ ನೀಡಲಾಗಿದೆ. ಸಿನಿಮಾ ಬಿಡುಗಡೆಗೆ ಮುನ್ನವೇ ಒಟ್ಟು 70 ಕೋಟಿ ಹಣವನ್ನು 'ಕೋಟಿಗೊಬ್ಬ 3' ಗಳಿಸಿದೆ ಎಂದು ಪೋಸ್ಟರ್‌ನಲ್ಲಿ ಹೇಳಲಾಗಿದೆ.

ಸಿನಿಮಾದ ಪ್ರಚಾರಕ್ಕಾಗಿ ಹೀಗೆ ಸುಳ್ಳು ಪೋಸ್ಟ್ ಹಾಕಲಾಗುತ್ತದೆ

ಸಿನಿಮಾದ ಪ್ರಚಾರಕ್ಕಾಗಿ ಹೀಗೆ ಸುಳ್ಳು ಪೋಸ್ಟ್ ಹಾಕಲಾಗುತ್ತದೆ

ಈ ರೀತಿಯ ಪೋಸ್ಟರ್‌ಗಳು ಬಹುತೇಕ ಸ್ಟಾರ್ ನಟರ ಸಿನಿಮಾಕ್ಕೆ ಬರುತ್ತಲೇ ಇರುತ್ತವೆ. ನಿರ್ಮಾಪಕರಾಗಲಿ, ಪ್ರೊಡಕ್ಷನ್ ಹೌಸ್‌ಗಳಾಗಲಿ ತಮ್ಮ ಲಾಭವನ್ನು ಬಹಿರಂಗಗೊಳಿಸುವುದಿಲ್ಲ. ಸಾಮಾನ್ಯವಾಗಿ ಅಭಿಮಾನಿಗಳು ಈ ರೀತಿಯ ಪೋಸ್ಟ್‌ಗಳನ್ನು ಮಾಡಿ ಹಾಕುತ್ತಾರೆ. ತಮ್ಮ ಅಭಿಮಾನದ ನಟನ ಸಿನಿಮಾ ಬಿಡುಗಡೆ ಮುನ್ನವೇ ಹಿಟ್ ಆಗಿದೆ ಎಂದು ತೋರಿಸಿಕೊಳ್ಳಲು ಹಾಗೂ ಸಿನಿಮಾದ ಬಗ್ಗೆ ಬಿಡುಗಡೆಗೆ ಮುನ್ನವೇ ಧನಾತ್ಮಕ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ರೂಪಿಸಲು ಈ ರೀತಿಯ ತಂತ್ರಗಳನ್ನು ಅನುಸರಿಸಲಾಗುತ್ತದೆ.

ಸಾಲದಲ್ಲಿದ್ದೀನಿ, ಬಡ್ಡಿ ಕಟ್ಟಲು ಕಷ್ಟಪಡುತ್ತಿದ್ದೀನಿ: ಸೂರಪ್ಪ ಬಾಬು

ಸಾಲದಲ್ಲಿದ್ದೀನಿ, ಬಡ್ಡಿ ಕಟ್ಟಲು ಕಷ್ಟಪಡುತ್ತಿದ್ದೀನಿ: ಸೂರಪ್ಪ ಬಾಬು

ಆದರೆ ನಿರ್ಮಾಪಕ ಸೂರಪ್ಪ ಬಾಬು, ಆ ಪೋಸ್ಟ್‌ಗಳೆಲ್ಲ ಸುಳ್ಳು ಎಂದಿದ್ದಾರೆ. ಈ ರೀತಿಯ ಮಾತು ಇತ್ತೀಚಿನ ದಿನಗಳಲ್ಲಿ ತುಸು ಅಪರೂಪವೆ. ತಮ್ಮ ಸಿನಿಮಾ ನೂರು ಕೋಟಿ ಗಳಿಸಿತು, ಇನ್ನೂರು ಕೋಟಿ ಗಳಿಸಿತು ಎಂದು ಸುಳ್ಳೇ ಹೇಳಿಕೊಳ್ಳುವ ಪ್ರೊಡಕ್ಷನ್ ಹೌಸ್‌ಗಳ ನಡುವೆ, ನಿರ್ಮಾಪಕ ಸೂರಪ್ಪ ಬಾಬು ಸತ್ಯ ಹೇಳುವ ಯತ್ನ ಮಾಡಿದ್ದಾರೆ. ತಾವು ಸಾಲದಲ್ಲಿರುವುದಾಗಿ ಹಲವು ದಿನಳಿಂದ ಹೇಳಿಕೊಂಡು ಬರುತ್ತಿದ್ದಾರೆ ಸೂರಪ್ಪ ಬಾಬು. ಈ ಸಿನಿಮಾ ಹಿಟ್ ಆದರಷ್ಟೆ ನಮಗೆ ಏಳಿಗೆ ಎಂದೂ ಸಹ ಅವರು ಈ ಹಿಂದಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಅಕ್ಟೋಬರ್ 14ರಂದು ಬಿಡುಗಡೆ ಆಗಲಿದೆ

ಅಕ್ಟೋಬರ್ 14ರಂದು ಬಿಡುಗಡೆ ಆಗಲಿದೆ

ಸುದೀಪ್ ನಟನೆಯ 'ಕೋಟಿಗೊಬ್ಬ 3' ಸಿನಿಮಾ ಇದೇ ಅಕ್ಟೋಬರ್ 14 ರಂದು ಬಿಡುಗಡೆ ಆಗಲಿದೆ. ಅದೇ ದಿನ ದುನಿಯಾ ವಿಜಯ್ ನಟನೆಯ 'ಸಲಗ' ಸಿನಿಮಾ ಸಹ ಬಿಡುಗಡೆ ಕಾಣಲಿದೆ. 'ಕೋಟಿಗೊಬ್ಬ 3' ಸಿನಿಮಾದಲ್ಲಿ ಸುದೀಪ್ ಎದುರು ಮಡೋನಾ ಸೆಬಾಸ್ಟಿಯನ್, ಅಶಿಕಾ ರಂಗನಾಥ್ ನಟಿಸಿದ್ದಾರೆ. ಸಿನಿಮಾದಲ್ಲಿ ಅಫ್ತಾಬ್ ಶಿವದಾಸನಿ, ದಾನಿಶ್ ಅಖ್ತರ್, ಶ್ರದ್ಧಾ ದಾಸ್, ನವಾಬ್ ಶಾ ಅಂಥಹಾ ಬಾಲಿವುಡ್ ನಟರು ನಟಿಸಿದ್ದಾರೆ. ರವಿಶಂಕರ್ ಸಹ ಸಿನಿಮಾದಲ್ಲಿದ್ದಾರೆ. ಶಿವ ಕಾರ್ತಿಕ ನಿರ್ದೇಶನ ಮಾಡಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಹಲವು ಬಾರಿ ಬಿಡುಗಡೆ ಮುಂದೂಡಿದ ಬಳಿಕ ದಸರಾ ಹಬ್ಬದ ಸಂದರ್ಭದಲ್ಲಿ ಕೊನೆಗೂ 'ಕೋಟಿಗೊಬ್ಬ 3' ಸಿನಿಮಾ ಬಿಡುಗಡೆ ಕಾಣುತ್ತಿದೆ.

More from Filmibeat

English summary
Kotigobba 3 did not makes 70 crore rs pre release business said producer Soorappa Babu. I am still in debts and struggling to pay interest on loan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X