ಬಾಂಬೆವಾಲನಿಂದ 'ಕೋಟಿಗೊಬ್ಬ'ನಿಗೆ ಮೋಸ: ನಿರ್ಮಾಪಕರ ಆರೋಪ
Recommended Video
ನಟ ಸುದೀಪ್ ಅಭಿನಯದ 'ಕೋಟಿಗೊಬ್ಬ 3' ಚಿತ್ರತಂಡಕ್ಕೆ ಮೋಸ ಆಗಿದೆ. ಚಿತ್ರೀಕರಣದ ಹೆಸರಿನಲ್ಲಿ ಮುಂಬೈ ಮೂಲದ ಏಜೆನ್ಸಿ ಬ್ಲಾಕ್ ಮೇಲ್ ಮಾಡುತ್ತಿದೆ ಎಂದು ನಿರ್ಮಾಪಕ ಸೂರಪ್ಪ ಬಾಬು ಆರೋಪ ಮಾಡಿದ್ದಾರೆ.
'ಕೋಟಿಗೊಬ್ಬ 3' ಸಿನಿಮಾದ ಶೂಟಿಂಗ್ ಪೊಲ್ಯಾಂಡ್ ನಲ್ಲಿ ನಡೆಯಬೇಕಾಗಿತ್ತು. ಹೀಗಾಗಿ ಮುಂಬೈ ಮೂಲದ ಏಜೆಂಟ್ ಸಂಜಯ್ ಪಾಲ್ ಎಂಬುವವನನ್ನು ಚಿತ್ರತಂಡ ಸಂಪರ್ಕ ಮಾಡಿತ್ತು. ಚಿತ್ರೀಕರಣಕ್ಕೆ ಮೊದಲೇ ನೀಡಬೇಕಾದ ಹಣದ ಮೊತ್ತದ ಬಗ್ಗೆ ಮಾತುಕತೆ ಮಾಡಿತ್ತು. ಆದರೆ, ಚಿತ್ರೀಕರಣದ ನಂತರ ಅದಕ್ಕಿಂತ ಹೆಚ್ಚಿನ ಹಣವನ್ನು ಕೇಳುತ್ತಿದ್ದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಮಾತುಕತೆಗಿಂತ ಹೆಚ್ಚಿನ ಹಣ ಡಿಮ್ಯಾಂಡ್ ಮಾಡಿದ್ದು, ಚಿತ್ರೀಕರಣದ ಕೊನೆಯ ದಿನ 50 ಲಕ್ಷ ನೀಡಿಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದರೆ, ಅದನ್ನು ನೀಡಲು ಸೂರಪ್ಪ ಬಾಬು ಒಪ್ಪಲಿಲ್ಲ. ಹೀಗಾಗಿ ಚಿತ್ರತಂಡವನ್ನು ಪೊಲ್ಯಾಂಡ್ ನಿಂದ ಹೋಗಲು ಬಿಡುವುದಿಲ್ಲ ಎಂದು ಬ್ಲಾಕ್ ಮೇಲ್ ಮಾಡಿತ್ತು.

ಕೊನೆಗೆ ಹೇಗೊ ಕಷ್ಟಪಟ್ಟು ಚಿತ್ರತಂಡವನ್ನು ಭಾರತಕ್ಕೆ ಕರೆದುಕೊಂಡು ಬಂದರು. ಆದರೆ, ಸದ್ಯ, ಸೂರಪ್ಪ ಬಾಬು ಅಕೌಂಟೆಂಟ್ ಪೋಲ್ಯಾಂಡ್ ನಲ್ಲೇ ಇದ್ದಾರೆ. ಸಂಜಯ್ ಪೌಲ್ ವಶದಲ್ಲಿ ಇರುವ ಅಕೌಂಟೆಂಟ್ ಅನ್ನು ಕರೆಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ.
ಹೀಗಾಗಿ, ಬೆಂಗಳೂರು ಪೊಲೀಸ್ ಕಮಿಷನರ್ ಬಳಿ ಸೂರಪ್ಪ ಬಾಬು ದೂರು ನೀಡಿದ್ದಾರೆ. ಜೊತೆಗೆ ಭಾರತದ ರಾಯಬಾರಿಗಳ ಸಹಾಯವನ್ನು ಪಡೆಯಲಾಗುತ್ತಿದೆ.


Click it and Unblock the Notifications











