ಘರ್ಜಿಸಿದ 'ಕೋಟಿಗೊಬ್ಬ': ಮೋಷನ್ ಪೋಸ್ಟರ್ ಗೆ ಭರ್ಜರಿ ಪ್ರತಿಕ್ರಿಯೆ

ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 3 ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಬಹುನಿರೀಕ್ಷೆಯಿಂದ ಕಾಯುತ್ತಿದ್ದ ಕಿಚ್ಚನ ಅಭಿಮಾನಿಗಳಿಗೆ ಸುಗ್ಗಿ ಹಬ್ಬದ ಪ್ರಯುಕ್ತ ಭರ್ಜರಿ ಗಿಫ್ಟ್ ಸಿಕ್ಕಿದೆ.

ನಿರೀಕ್ಷೆಯಂತೆ ಮೋಷನ್ ಪೋಸ್ಟರ್ ಗೆ ಮೆಚ್ಚುಗೆ ವ್ಯಕ್ತವಾಗಿದೆ. ಸುದೀಪ್ ಅವರ ಸ್ಟೈಲಿಶ್ ಲುಕ್ ಗೆ ಸ್ಯಾಂಡಲ್ವುಡ್ ಭಕ್ತಗಣ ಫಿದಾ ಆಗಿದ್ದಾರೆ. ಈ ಪೋಸ್ಟರ್ ನೋಡಿ ಖುಷಿಯಾಗಿರುವ ಕನ್ನಡ ಸಿನಿಮಾ ಪ್ರೇಮಿಗಳು ಈ ಸಲದ ಸಂಕ್ರಾಂತಿ ಹಬ್ಬವನ್ನು ಜೋರಾಗಿ ಆಚರಿಸಲು ಸಜ್ಜಾಗುತ್ತಿದ್ದಾರೆ..

ಇಂದು ಸಂಜೆ ಆರು ಗಂಟೆಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಪೋಸ್ಟರ್ ಬಿಡುಗಡೆಯಾಗಿದ್ದು, ರಿಲೀಸ್ ಆದ ಒಂದು ಗಂಟೆಯಲ್ಲಿ ಸುಮಾರು 2 ಲಕ್ಷಕ್ಕೂ (205k) ಅಧಿಕ ವೀಕ್ಷಣೆ, 29k ಲೈಕ್ಸ್, 10k ಕಾಮೆಂಟ್ಸ್ ಬಂದಿದೆ.

Kotigobba 3 Motion Poster Updates

1 ನಿಮಿಷ 10 ಸೆಕೆಂಡ್ ಮೋಷನ್ ಪೋಸ್ಟರ್ ಗೆ ತಕ್ಕಂತೆ ಹಿನ್ನೆಲೆ ಸಂಗೀತವಿದ್ದು, ಪ್ರೇಕ್ಷಕರ ಜೋಶ್ ಹೆಚ್ಚಿಸಿದೆ. ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

ಇನ್ನುಳಿದಂತೆ ಶಿವಕಾರ್ತಿಕ್ ಈ ಸಿನಿಮಾ ನಿರ್ದೇಶಿಸುತ್ತಿದ್ದು, ಸೂರಪ್ಪ ಬಾಬು ನಿರ್ಮಾಣ ಮಾಡುತ್ತಿದ್ದಾರೆ. ಮಡೋನಾ ಸೆಬಾಸ್ಟಿಯನ್ ಮತ್ತು ಶ್ರದ್ಧಾ ದಾಸ್ ಇಬ್ಬರು ಸುದೀಪ್ ಗೆ ಸಾಥ್ ನೀಡಿದ್ದಾರೆ. ಬಾಲಿವುಡ್ ನಟ ಅಫ್ತಾಬ್ ಶಿವದಾಸಾನಿ ಮೊದಲ ಸಲ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Kiccha sudeep starrer Kotigobba 3 movie motion poster has released. the movie directed by shiva karthik.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X