ರಾಬರ್ಟ್ ಬಿಡುಗಡೆ ಮುಹೂರ್ತ ಫಿಕ್ಸ್, ಕೋಟಿಗೊಬ್ಬ-3 ಬಿಡುಗಡೆ ಯಾವಾಗ?
ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾದ ಬಿಡುಗಡೆ ಬಹುತೇಕ ನಿಗದಿಯಾಗಿದೆ. ರಾಬರ್ಟ್ ಸಿನಿಮಾ ಡಿಸೆಂಬರ್ ಅಂತ್ಯಕ್ಕೆ ತೆರೆಗೆ ಅಪ್ಪಳಿಸಲಿದೆ.
ರಾಬರ್ಟ್ ಮಾತ್ರವಲ್ಲ, ವಿಜಯ್ ಅಭಿನಯದ ಸಲಗ, ಧೃವ ಸರ್ಜಾ ರ ಪೊಗರು ಇನ್ನೂ ಕೆಲವು ಸಿನಿಮಾಗಳು ತಮ್ಮ-ತಮ್ಮ ಸಿನಿಮಾಗಳ ಬಿಡುಗಡೆಗೆ ದಿನಾಂಕ ನಿಗದಿಗೊಳಿಸಿಕೊಂಡಿದ್ದಾರೆ. ಆದರೆ ಸುದೀಪ್ ಅಭಿನಯದ ಕೋಟಿಗೊಬ್ಬ-3 ಬಿಡುಗಡೆ ಬಗ್ಗೆ ಮಾತ್ರವೇ ಯಾಕೋ ಸುದ್ದಿಯೇ ಇಲ್ಲ.
ಸ್ಟಾರ್ ನಟರ ಸಿನಿಮಾಗಳ ಬಿಡುಗಡೆಗೆ ಈಗಾಗಲೇ ಸರದಿ ಸಾಲು ಏರ್ಪಟ್ಟಿದೆ, ಒಂದರ ಹಿಂದೆ ಒಂದು ಸಾಲು-ಸಾಳು ಸಿನಿಮಾಗಳು ತೆರೆಗೆ ಅಪ್ಪಳಿಸಲಿವೆ. ಆದರೆ ಕೋಟಿಗೊಬ್ಬ-3 ಚಿತ್ರತಂಡ ಕಾಯ್ದು ನೋಡುವ ತಂತ್ರಕ್ಕೆ ಮೊರೆ ಹೋದಂತಿದೆ.
Recommended Video

ತಡವಾಗಿ ಬಿಡುಗಡೆ ಆಗಲಿದೆಯಾ ಕೋಟಿಗೊಬ್ಬ-3?
ನವೆಂಬರ್ ನಿಂದ ಹೊಸ ಸಿನಿಮಾಗಳ ಬಿಡುಗಡೆ ಆರಂಭವಾಗುವ ಸಾಧ್ಯತೆ ಇದ್ದು, ಒಂದಾದ ನಂತರ ಒಂದು ಸಿನಿಮಾಗಳು ತೆರೆಗೆ ಬರಲಿವೆ. ಆದರೆ ಕೋಟಿಗೊಬ್ಬ-3 ಸಿನಿಮಾವನ್ನು ತುಸು ನಿಧಾನವಾಗಿ ತೆರೆಗೆ ತರಲು ಚಿತ್ರತಂಡ ಯೋಚಿಸಿದೆ.

ಮುಂದಿನ ವರ್ಷ ಜನವರಿಯಲ್ಲಿ ಸಿನಿಮಾ ಬಿಡುಗಡೆ?
ಎಲ್ಲಾ ಪ್ರಮುಖ ಸಿನಿಮಾಗಳ ಬಿಡುಗಡೆ ಬಳಿಕ ಅಂದರೆ ಮುಂದಿನ ವರ್ಷ ಜನವರಿ ಅಂತ್ಯದ ವೇಳೆಗೆ ಸಿನಿಮಾವನ್ನು ತೆರೆಗೆ ತರುವ ಯೋಚನೆಯಲ್ಲಿದ್ದಾರೆ ನಿರ್ಮಾಪಕ ಸೂರಪ್ಪ ಬಾಬು. ಸಿನಿಮಾಗಳ 'ರಶ್' ಸಹ ಆ ಸಮಯಕ್ಕೆ ಇರುವುದಿಲ್ಲ ಎಂಬ ಲೆಕ್ಕಾಚಾರವೂ ಇದರ ಹಿಂದಿದೆ.

ಸಿನಿಮಾಗಳ ನಡುವೆ ಸ್ಪರ್ಧೆ ಹೆಚ್ಚಲಿದೆ
ಸಾಲು-ಸಾಲು ಸಿನಿಮಾಗಳು ಸರತಿ ಸಾಲಿನಲ್ಲಿರುವ ಕಾರಣ, ಸಿನಿಮಾಗಳ ನಡುವೆ ತುಸು ಹೆಚ್ಚಿಗೆ ಸ್ಪರ್ಧೆ ಬೀಳಲಿದೆ, ಇದು ಕೆಲವು ಒಳ್ಳೆಯ ಸಿನಿಮಾಗಳಿಗೆ ಮಾರಕವೂ ಆಗಬಹುದು ಹಾಗಾಗಿ ಕೋಟಿಗೊಬ್ಬ-3 ಸಿನಿಮಾದ ಬಿಡುಗಡೆಯನ್ನು ನಿಧಾನ ಮಾಡಲಾಗಿದೆ ಎನ್ನಲಾಗುತ್ತಿದೆ.

ಜನವರಿಯಲ್ಲಿ ಕೊರೊನಾ ಅಬ್ಬರ ತಗ್ಗುವ ಸಾಧ್ಯತೆ
ಜನವರಿ ವೇಳೆಗೆ ಕೊರೊನಾ ಅಬ್ಬರವೂ ಕಡಿಮೆ ಆಗುವ ನಿರೀಕ್ಷೆ ಇದೆ, ಪ್ರೇಕ್ಷಕರು ಮುಕ್ತವಾಗಿ ಸಿನಿಮಾ ಮಂದಿರಗಳಿಗೆ ಬರುವ ಸಾಧ್ಯತೆ ದಟ್ಟವಾಗಿದೆ, ಹಾಗಾಗಿ ಮುಂದಿನ ವರ್ಷದ ಜನವರಿ ಸಿನಿಮಾ ಬಿಡುಗಡೆಗೆ ಸೂಕ್ತ ಎಂದು ನಿರ್ಧರಿಸಿದಂತಿದೆ ಚಿತ್ರತಂಡ.


Click it and Unblock the Notifications











