For Quick Alerts
  ALLOW NOTIFICATIONS  
  For Daily Alerts

  ಕೋಟಿಗೊಬ್ಬ-3: ಚಂದ್ರೋದಯ ಥಿಯೇಟರ್ ಬಳಿ ಫಿಲ್ಮಿಬೀಟ್‌ಗೆ ಫ್ಯಾನ್ಸ್ ರಿಯಾಕ್ಷನ್

  By ರವೀಂದ್ರ ಕೊಟಕಿ
  |

  ಕಿಚ್ಚ ಸುದೀಪ್ ಅಭಿಮಾನಿಗಳು ಬಹಳ ಕಾತುರದಿಂದ ಎದುರುನೋಡುತ್ತಿದ್ದ ಬಹುನಿರೀಕ್ಷಿತ 'ಕೋಟಿಗೊಬ್ಬ-3' ವಿಜಯದಶಮಿಯ ಶುಭ ಸಮಯದ ಈ ದಿನ ರಾಜ್ಯಾದ್ಯಂತ ದೊಡ್ಡ ಪರದೆಯ ಮೇಲೆ ಸುನಾಮಿಯಂತೆ ಅಪ್ಪಳಿಸಿದೆ.

  ಇಷ್ಟು ದಿನ ಕಾದಿದಕ್ಕೂ ಸಾರ್ಥಕ ಆಯ್ತು

  ನಿನ್ನೆ ಬಿಡುಗಡೆಯಾಗಬೇಕಿದ್ದ 'ಕೋಟಿಗೊಬ್ಬ-3' ತಾಂತ್ರಿಕ ಕಾರಣಗಳಿಂದ ಇಂದು ಬೆಳಗ್ಗೆ ಬಿಡುಗಡೆಯಾಗಿದೆ. ನಿನ್ನೆ ಥಿಯೇಟರ್‌ಗಳಿಗೆ ಲಗ್ಗೆ ಇಟ್ಟಿದ್ದ ಅಭಿಮಾನಿಗಳು ನಿರಾಸೆಯಿಂದ ಮನೆ ಕಡೆ ಮುಖ ಮಾಡಿದ್ದರು ಆದರೆ ಇಂದು ಅಷ್ಟೇ ಉತ್ಸಾಹದಿಂದ ಮತ್ತೆ ತಮ್ಮ ನೆಚ್ಚಿನ ನಾಯಕ ನಟನ ಚಿತ್ರ ನೋಡಲು ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದ್ದಾರೆ.

  ಚಿತ್ರಮಂದಿರಗಳಿಗೆ ಹಾನಿ ಮಾಡದಂತೆ ನಟ ಸುದೀಪ್ ಮನವಿಚಿತ್ರಮಂದಿರಗಳಿಗೆ ಹಾನಿ ಮಾಡದಂತೆ ನಟ ಸುದೀಪ್ ಮನವಿ

  ಅನೇಕ ಕಡೆ ಬೆಳಗ್ಗೆ ಆರು ಗಂಟೆಗೆ ಮೊದಲ ಶೋ ಪ್ರದರ್ಶನಗೊಂಡಿದೆ. ಬಿಡುಗಡೆಯಾಗಿರುವ ಎಲ್ಲಾ ಕೇಂದ್ರಗಳಲ್ಲಿ ಕೂಡ ಚಿತ್ರ ಇಂದು ಬಹುತೇಕ ಹೌಸ್ ಫುಲ್ ಪ್ರದರ್ಶನಗಳನ್ನು ಕಾಣುತ್ತಿದೆ. ನಿರ್ಮಾಪಕ ಸೂರಪ್ಪ ಬಾಬು ಅವರು ವ್ಯಯ-ಪ್ರಯಾಸದಿಂದ ನಿರ್ಮಿಸಿರುವ, ಶಿವ ಕಾರ್ತಿಕ್ ನಿರ್ದೇಶನದ ಈ ಚಿತ್ರ ಸುದೀಪ್ ಅವರ ಇದುವರೆಗಿನ ಚಿತ್ರಗಳಲ್ಲಿ ಅತಿ ದೊಡ್ಡ ಬಜೆಟ್ಟಿನ ಚಿತ್ರವಾಗಿದೆ.

  ಅಭಿಮಾನಿಗಳಿಗೆ ವಿಜಯದಶಮಿಯ ಶುಭ ಸಂದರ್ಭದಲ್ಲಿ ರಸದೌತಣ ಉಣಬಡಿಸಲು ಬರುತ್ತಿರುವ ಈ ಚಿತ್ರದ ಮೇಲೆ ನಿರೀಕ್ಷೆಗಳು ಕೂಡ ದೊಡ್ಡದಾಗಿದೆ.

  'ಕೋಟಿಗೊಬ್ಬ 3' ವಿರುದ್ಧ ಷಡ್ಯಂತ್ರ: ಎಳೆ-ಎಳೆಯಾಗಿ ಬಿಚ್ಚಿಟ್ಟ ಸುದೀಪ್ ಆಪ್ತ ಜಾಕ್ ಮಂಜು'ಕೋಟಿಗೊಬ್ಬ 3' ವಿರುದ್ಧ ಷಡ್ಯಂತ್ರ: ಎಳೆ-ಎಳೆಯಾಗಿ ಬಿಚ್ಚಿಟ್ಟ ಸುದೀಪ್ ಆಪ್ತ ಜಾಕ್ ಮಂಜು

  ನಗರದ ವಿದ್ಯಾಪೀಠ ಸರ್ಕಲ್ ನಲ್ಲಿರುವ ಚಂದ್ರೋದಯ ಚಿತ್ರಮಂದಿರದಲ್ಲಿ ಸುದೀಪ್ ಅಭಿಮಾನಿಗಳು ಈ ಚಿತ್ರವನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ. ತೆಲುಗು ಚಿತ್ರಗಳೇ ಹೆಚ್ಚಾಗಿ ಪ್ರದರ್ಶನ ಕಾಣುವ ಈ ಚಿತ್ರಮಂದಿರದಲ್ಲಿ 'ಕೋಟಿಗೊಬ್ಬ-3' ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಚಂದ್ರೋದಯ ಥಿಯೇಟರ್ ನಲ್ಲಿ ಬೆಳಗ್ಗೆ 11 ಗಂಟೆ ಶೋ ನೋಡಿ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ಫಿಲ್ಮಿಬೀಟ್ ಕನ್ನಡ ಜೊತೆ ಅನಿಸಿಕೆಗಳನ್ನು ಹಂಚಿಕೊಂಡಿದ್ದು ಹೀಗೆ...

   ಇವತ್ತೇ ನಿಜವಾದ ಹಬ್ಬ ಸರ್

  ಇವತ್ತೇ ನಿಜವಾದ ಹಬ್ಬ ಸರ್

  ನಿನ್ನೆ ಅಣ್ಣನ ಸಿನಿಮಾ ರಿಲೀಸ್ ಆಗದೆ ತುಂಬಾ ನಿರಾಸೆ ಆಗಿತ್ತು. ಆದರೆ ಈಗ ಸಿನಿಮಾ ಕಣ್ತುಂಬಿಕೊಂಡು ಮೇಲೆ ಆ ನೋವೆಲ್ಲಾ ಮರೆಯಾಯ್ತು. ಅಭಿಮಾನಿಗಳಿಗೆ ನಿಜವಾದ ಹಬ್ಬ ಇವತ್ತು ಸರ್.

  -ಮಲ್ಲೇಶ್ ಕತ್ರಿಗುಪ್ಪೆ ನಿವಾಸಿ. ಕಿಚ್ಚ ಅಭಿಮಾನಿಗಳ ಸಂಘದ ಸದಸ್ಯ.

   ಒಳ್ಳೆ ಸಸ್ಪೆನ್ಸ್ ಜೊತೆಗೆ ಒಳ್ಳೆ ಕಿಕ್ ಇದೆ ಸಿನಿಮಾದಲ್ಲಿ

  ಒಳ್ಳೆ ಸಸ್ಪೆನ್ಸ್ ಜೊತೆಗೆ ಒಳ್ಳೆ ಕಿಕ್ ಇದೆ ಸಿನಿಮಾದಲ್ಲಿ

  ಸಿನಿಮಾ ಒಂದು ಮಾತಲ್ಲಿ ಹೇಳಬೇಕು ಅಂದ್ರೆ ಸಕ್ಕತ್ತಾಗಿದೆ, ಒಳ್ಳೆ ಸಸ್ಪೆನ್ಸ್ ಫಿಲಂ. ಇಡೀ ಫಿಲಂ ಜನಕ್ಕೆ ಕಿಕ್ ಕೊಡುತ್ತದೆ. ರೀಸೆಂಟ್ ಡೈಸ್ ಲ್ಲಿ ಬಂದ ಬೆಸ್ಟ್ ಕನ್ನಡ ಸಿನಿಮಾ ಇದೆ ನೋಡಿ. ಹಬ್ಬದ ದಿನ ಒಂದೊಳ್ಳೆ ಸಿನಿಮಾ ನೋಡಿದ ತೃಪ್ತಿ ಸಿಕ್ತು

  - ಶ್ರೀನಿವಾಸ್. ಗೌಡನಪಾಳ್ಯ ನಿವಾಸಿ...ಕನ್ನಡ ಸಿನಿಮಾಗಳ ಅಪ್ಪಟ ಅಭಿಮಾನಿ.

   ಫ್ಯಾಮಿಲಿ ಜೊತೆ ಬಂದು ಸಿನಿಮಾ ನೋಡಿದೀನಿ

  ಫ್ಯಾಮಿಲಿ ಜೊತೆ ಬಂದು ಸಿನಿಮಾ ನೋಡಿದೀನಿ

  ನಾನು ಯಾವುದೇ ಸಿನಿಮಾ ನಟನ ಅಭಿಮಾನಿ ಅಲ್ಲ,ನಾನು ಕನ್ನಡ ಸಿನಿಮಾಗಳ ಅಭಿಮಾನಿ. ಅದರಲ್ಲೂ ಎಲ್ಲಾ ಕನ್ನಡ ಸಿನಿಮಾಗಳನ್ನು ನಾನು ಚಿತ್ರಮಂದಿರದಲ್ಲೇ ನೋಡುವುದು. ಇವತ್ತು ಹಬ್ಬ ನೋಡಿ ಅದಕ್ಕೆ ಇಡೀ ಕುಟುಂಬ ಸಿನಿಮಾ ನೋಡೋದಕ್ಕೆ ಬಂದಿದ್ದೇವೆ. ಚಿತ್ರ ತುಂಬಾ ಚೆನ್ನಾಗಿದೆ. ಸುದೀಪ್ ಅವರ ರೋಲ್ ಸಕ್ಕತ್ತು ಸಸ್ಪೆನ್ಸ್ ಆಗಿದೆ. ಡೈರೆಕ್ಷನ್ ಚೆನ್ನಾಗಿದೆ ಜೊತೆಗೆ ಅರ್ಜುನ್ ಜನ್ಯರ ಬ್ಯಾಗ್ರೌಂಡ್ ಸ್ಕೋರ್ ತುಂಬಾ ಇಷ್ಟ ಆಯ್ತು.

  -ಕಾಂತರಾಜ್, ಹೊಸಕೆರೆಹಳ್ಳಿ.

   ವಿ ಆಲ್ವೇಸ್ ಲವ್ ಸುದೀಪ್

  ವಿ ಆಲ್ವೇಸ್ ಲವ್ ಸುದೀಪ್

  ನಾವು ಮೊದಲಿಂದಲೂ ಕಿಚ್ಚ ಫ್ಯಾನ್ಸ್. ಅವರ ಒಂದೇ ಒಂದು ಫಿಲಂ ಮಿಸ್ ಮಾಡ್ಕೊಳ್ಳಲ್ಲ. ಅದ್ರಲ್ಲೂ ಸಿಂಗಲ್ ಥಿಯೇಟರಲ್ಲಿ ಫಸ್ಟ್ ಡೇ ಶೋ ನೋಡುವುದರಲ್ಲಿ ಸಕ್ಕತ್ ಥ್ರಿಲ್ ಇದೆ. ಆ ಥ್ರಿಲ್ ಕಳ್ಕೋಬಾರದು ಅಂತಲೇ ಇಲ್ಲಿವರೆಗೂ ಬಂದಿದ್ದೇವೆ.
  ರಿಯಲಿ ಸೂಪರಾಗಿದೆ ಸಿನಿಮಾ. ವಿ ಎಂಜಾಯ್ಡ್ ಲಾಟ್

  - ಸುಮಾರು 15 ಮಂದಿ ಸಾಫ್ಟ್ ವೇರ್ ಇಂಜಿನಿಯರ್‌ಗಳ ಹುಡುಗ ಮತ್ತು ಹುಡುಗಿಯರ ತಂಡ.

   ಸ್ಟಾರ್ಟಿಂಗ್ ಸ್ವಲ್ಪ ಬೋರು ಆಮೇಲೆ ಸಕತ್ತಾಗಿದೆ...

  ಸ್ಟಾರ್ಟಿಂಗ್ ಸ್ವಲ್ಪ ಬೋರು ಆಮೇಲೆ ಸಕತ್ತಾಗಿದೆ...

  ಸರ್ ಸ್ಟಾರ್ಟಿಂಗ್ 15 ನಿಮಿಷ ಸ್ಲೋ ಆಗಿದೆ ಸಿನಿಮಾ, ಆಮೇಲೆ ಸೂಪರ್ ಫಾಸ್ಟ್, ಎಲ್ಲೂ ಕೂಡ ನಿಲ್ಲಲ್ಲ. ಸ್ಕ್ರೀನ್ ಪ್ಲೇ ಚಿಂದಿಯಾಗಿದೆ. ಕೊಟ್ಟ ಕಾಸಿಗೆ ಮೋಸ ಇಲ್ಲ

  - ಗೋವಿಂದನಾಯ್ಕ. ಕಿಚ್ಚ ಅಪ್ಪಟ ಅಭಿಮಾನಿ

   ಒನ್ ಮ್ಯಾನ್ ಶೋ

  ಒನ್ ಮ್ಯಾನ್ ಶೋ

  ಸಿನಿಮಾದೊಳಗೆ, ಮೇಕಿಂಗ್‌ನಲ್ಲೂ ಎಲ್ಲಾ ಕಡೆ ಅಭಿನಯ ಚಕ್ರವರ್ತಿ ಕಿಚ್ಚ ಅವ್ರೆ ಕಾಣ್ತಾರೆ. ಅಭಿಮಾನಿಗಳು ಅವರಿಂದ ಇಂಥ ಸಿನಿಮಾ ನಿರೀಕ್ಷೆ ಮಾಡುವುದು.ನಿನ್ನೆಲ್ಲ ನಿದ್ದೆ ಬಂದಿಲ್ಲ ಇವತ್ತು ಸಿನಿಮಾ ನೋಡಿದ ಖುಷಿಗೆ ನಿದ್ದೆ ಬರಲ್ಲ...ಸಾರ್ ಒಂದು ಮಾತಲ್ಲಿ ಹೇಳಬೇಕು ಅಂದ್ರೆ 'ಕೋಟಿಗೊಬ್ಬ-3' ಸುದೀಪ್ ಅವರ ಒನ್ ಮ್ಯಾನ್ ಶೋ.

  -ಶೇಖರ್ ಗುಟ್ಟಳ್ಳಿ, ಖಾಸಗಿ ಕಂಪನಿಯೊಂದರಲ್ಲಿ ಟೆಕ್ನಿಷಿಯನ್.

  ಒಟ್ಟಾರೆ ಸುದೀಪ್ ಅವರ ಅಭಿನಯದ 'ಕೋಟಿಗೊಬ್ಬ-3' ಮೊದಲ ದಿನದ ಮೊದಲ ಶೋ ನೋಡಿದವರ ಅಭಿಪ್ರಾಯದಲ್ಲಿ ಸಿನಿಮಾ ಸಕ್ಕತ್ತಾಗಿದೆ. ನಿಮ್ಮ ಅಭಿಪ್ರಾಯದಲ್ಲಿ ಸಿನಿಮಾ ಹೇಗಿದೆ?

  English summary
  Kiccha Sudeep starrer Kotigobba 3 Movie gets huge response from audience. Here is fans reaction from Chandrodaya Chitra Mandira, Banashankari, Bengaluru

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X