'ಕೋಟಿಗೊಬ್ಬ 3' ಕಲರ್ ಫುಲ್ ಹಾಡು: ಕಿಚ್ಚನ ಜೊತೆ ಯಂಗ್ ಸ್ಟಾರ್ಸ್
ನಟ ಸುದೀಪ್ 'ಕೋಟಿಗೊಬ್ಬ 3' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಸಿನಿಮಾದ ಹಾಡಿನ ಶೂಟಿಂಗ್ ಇದೀಗ ನಡೆಯುತ್ತಿದೆ.
ಸಿನಿಮಾದ ಟೈಟಲ್ ಹಾಡು ಇದಾಗಿದೆ. ಈ ಹಾಡಿನಲ್ಲಿ ಕನ್ನಡದ ಇಬ್ಬರು ಯಂಗ್ ಸ್ಟಾರ್ ಗಳು ಕಾಣಿಸಿಕೊಳ್ಳುತ್ತಿದ್ದಾರೆ. ಸುದೀಪ್ ಆಪ್ತ, ನಟ ಪ್ರದೀಪ್ ಹಾಗೂ ನಟ ಡಾರ್ಲಿಂಗ್ ಕೃಷ್ಣ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ.
ಇದೇ ಮೊದಲ ಬಾರಿಗೆ ಡಾರ್ಲಿಂಗ್ ಕೃಷ್ಣ ಸುದೀಪ್ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಈ ಸಂತಸವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಚಿತ್ರೀಕರಣದ ಫೋಟೋವನ್ನು ಶೇರ್ ಮಾಡಿದ್ದಾರೆ.

ಕಲರ್ ಫುಲ್ ಲೈಟ್ ಗಳ ಜೊತೆಗೆ ಅದ್ದೂರಿ ಸೆಟ್ ನಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗುತ್ತಿದೆ. ಸಿಂಪಲ್ ಕಾಸ್ಟೂಮ್ ನಲ್ಲಿ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಡ್ಯಾನ್ಸರ್ ಗಳ ಜೊತೆಗೆ ಸುದೀಪ್ ಹಾಡಿಗೆ ಸ್ಟೆಪ್ ಹಾಕಿದ್ದಾರೆ.
'ಕೋಟಿಗೊಬ್ಬ 3' ಶಿವ ಕಾರ್ತಿಕ್ ನಿರ್ದೇಶನದ ಸಿನಿಮಾ. ಸೂರಪ್ಪ ಬಾಬು ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಮಡೋನಾ ಸೆಬಾಸ್ಟಿಯನ್ ಹಾಗೂ ಶ್ರದ್ಧಾ ದಾಸ್ ಸಿನಿಮಾದ ನಾಯಕಿಯರಾಗಿದ್ದಾರೆ. ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.


Click it and Unblock the Notifications











