For Quick Alerts
  ALLOW NOTIFICATIONS  
  For Daily Alerts

  ಕಿಚ್ಚನ ಹುಟ್ಟುಹಬ್ಬಕ್ಕೆ 'ಕೋಟಿಗೊಬ್ಬ 3' ತಂಡದಿಂದ ಉಡುಗೊರೆ

  By Naveen
  |
  ಕಿಚ್ಚನ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ಕೊಡ್ತಿರೋ ಕೋಟಿಗೊಬ್ಬ 3 ಟೀಂ..! | Filmibeat Kannada

  ನಟ ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಇನ್ನು ಒಂದು ತಿಂಗಳು ಬಾಕಿ ಇದೆ. ಇದೀಗ ಅವರ ಹುಟ್ಟುಹಬ್ಬದ ತಯಾರಿಗಳು ಶುರು ಆಗಿದ್ದು, ಈ ಬಾರಿ 'ಕೋಟಿಗೊಬ್ಬ 3' ಚಿತ್ರತಂಡದಿಂದ ಕಿಚ್ಚನಿಗೆ ಒಂದು ಉಡುಗೊರೆ ಸಿಗಲಿದೆ.

  ಸುದೀಪ್ ಸದ್ಯ ಮೂರ್ನಾಲ್ಕು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಈ ಪೈಕಿ 'ಕೋಟಿಗೊಬ್ಬ 3' ಚಿತ್ರ ಕೂಡ ಒಂದಾಗಿದೆ. ಇನ್ನು ಈ ಸಿನಿಮಾದ ಮೊದಲ ಟೀಸರ್ ಸುದೀಪ್ ಹುಟ್ಟುಹಬ್ಬದ ದಿನ ಅಂದರೆ ಸಪ್ಟೆಂಬರ್ 2 ರಂದು ಬಿಡುಗಡೆಯಾಗಲಿದೆ.

  'ಕೋಟಿಗೊಬ್ಬ' ಸುದೀಪ್ ಗಾಗಿ ಬಂದಳು ಸೌತ್ ಸ್ಟಾರ್ ನಟಿ 'ಕೋಟಿಗೊಬ್ಬ' ಸುದೀಪ್ ಗಾಗಿ ಬಂದಳು ಸೌತ್ ಸ್ಟಾರ್ ನಟಿ

  ಸುದೀಪ್ ಬರ್ತ್ ಡೇ ವಿಶೇಷವಾಗಿ ಚಿತ್ರದ ಮೊದಲ ಟೀಸರ್ ಅನ್ನು ಚಿತ್ರತಂಡ ರಿಲೀಸ್ ಮಾಡಲಿದೆ. ಅಂತಾರಾಷ್ಟ್ರೀಯ ಮಟ್ಟದ ಕ್ರೈಂ ಕಥೆ ಕುರಿತಾದ ಚಿತ್ರ ಇದಾಗಿದೆ. ಇದೇ ಕಾರಣಕ್ಕೆ ವಿದೇಶದಲ್ಲಿಯೇ ಹೆಚ್ಚು ಭಾಗ ಶೂಟಿಂಗ್ ಮಾಡಲಾಗಿದೆ. ಶಿವ ಕಾರ್ತಿಕ್ ಎಂಬುವರು 'ಕೋಟಿಗೊಬ್ಬ-3' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

  ಕಾಲಿವುಡ್ ಹಾಗೂ ಮಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದ ಮಡೋನಾ ಸೆಬಾಸ್ಟಿಯನ್ ಈ ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಡುತ್ತಿದ್ದಾರೆ. ಪೊಲೀಸ್ ಅಧಿಕಾರಿ (ಇಂಟರ್ ಪೋಲ್ ಆಫೀಸರ್ ) ಪಾತ್ರವನ್ನು ಟಾಲಿವುಡ್ ನಟಿ ಶ್ರದ್ಧಾ ದಾಸ್ ನಿರ್ವಹಿಸಿದ್ದಾರೆ.

  English summary
  'Kotigobba 3' kannada movie will releasing on the occasion of sudeep birthday (September 2nd). Mollywood actress Madonna Sebastian playing lead role opposite sudeep.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X