For Quick Alerts
  ALLOW NOTIFICATIONS  
  For Daily Alerts

  ಸುದೀಪ್, ಪುನೀತ್ ಚಿತ್ರಗಳ ನಿರ್ಮಾಪಕರಿಗೆ ಮತ್ತೆ ಹೆಚ್ಚಾಯ್ತು ಆತಂಕ?

  |

  ಕೊರೊನಾ ವೈರಸ್ ಹೊಡೆತಕ್ಕೆ ಸಿಲುಕಿದ್ದ ಚಿತ್ರರಂಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ದೊಡ್ಡ ನಟರ ಸಿನಿಮಾಗಳು ಒಂದೊಂದೆ ತೆರೆಗೆ ಬರ್ತಿದೆ. ಧ್ರುವ ಸರ್ಜಾ ನಟನೆಯ ಪೊಗರು ಹಾಗೂ ದರ್ಶನ್ ನಟನೆಯ ರಾಬರ್ಟ್ ಚಿತ್ರಗಳಿಗೆ ಭರ್ಜರಿ ಓಪನಿಂಗ್ ಸಿಕ್ಕಿದ್ದು, ಸ್ಯಾಂಡಲ್‌ವುಡ್‌ ಮೊದಲಿನ ಸ್ಥಿತಿ ತಲುಪಿದೆ ಎಂದು ಚಿತ್ರೋದ್ಯಮಿಗಳು ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ.

  ಹೀಗಿರುವಾಗ, ಸಿನಿಮಾ ಇಂಡಸ್ಟ್ರಿಗೆ ಮತ್ತೆ ಆತಂಕ ಎದುರಾಗಿದೆ. ಮತ್ತೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವುದು ಹಾಗೂ ಮತ್ತೆ ಲಾಕ್‌ಡೌನ್ ಕುರಿತು ಚರ್ಚೆಯಾಗುತ್ತಿರುವುದು ಸ್ಟಾರ್ ನಟರ ತಲೆಕೆಡಿಸಿದೆ. ರಿಲೀಸ್ ದಿನಾಂಕ ಘೋಷಣೆ ಮಾಡಿ ಬಿಡುಗಡೆಗೆ ಎಲ್ಲಾ ತಯಾರಿ ನಡೆಸುತ್ತಿರುವ ಈ ಸಂದರ್ಭದಲ್ಲಿ ಲಾಕ್‌ಡೌನ್ ಅಥವಾ ಕಠಿಣ ನಿಯಮಗಳು ಜಾರಿಯಾದರೆ ಹೇಗೆ ಎಂಬ ಭಯ ಎದುರಾಗಿದೆ. ಮುಂದೆ ಓದಿ...

  ಸಿಎಂಗೆ ಮನವಿ ಮಾಡಿದ ಸುದೀಪ್

  ಸಿಎಂಗೆ ಮನವಿ ಮಾಡಿದ ಸುದೀಪ್

  ಬೆಂಗಳೂರಿನಲ್ಲಿ ನಡೆದ ಸುದೀಪ್ ಬೆಳ್ಳಿ ಸಂಭ್ರಮದಲ್ಲಿ ಸಿಎಂ ಯಡಿಯೂರಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ ಸುದೀಪ್ ''ಸರ್ ದಯವಿಟ್ಟು ಚಿತ್ರಮಂದಿರಗಳಲ್ಲಿ ಮತ್ತೆ 50 ಪರ್ಸೆಂಟ್ ಮಾಡಬೇಡಿ, ನಮ್ಮ ಸಿನಿಮಾಗಳಿಗೆ ಕಷ್ಟ ಆಗುತ್ತೆ'' ಎಂದು ವಿನಂತಿಸಿಕೊಂಡರು.

  ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಕುರಿತು ತಜ್ಞರ ಜತೆ ಸಿಎಂ ಯಡಿಯೂರಪ್ಪ ಸಭೆ: ಪ್ರಮುಖಾಂಶಗಳು

  ಬೆಂಗಳೂರು ಚಿತ್ರೋತ್ಸವ ಮುಂದೂಡಿಕೆ

  ಬೆಂಗಳೂರು ಚಿತ್ರೋತ್ಸವ ಮುಂದೂಡಿಕೆ

  ಮಾರ್ಚ್ 24 ರಂದು ನಡೆಯಬೇಕಿದ್ದ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಂದೂಡಲಾಗಿದೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆಯ ತಾಂತ್ರಿಕ ಸಲಹಾ ಸಮಿತಿ ನೀಡಿರುವ ಮಾರ್ಗದರ್ಶನದಂತೆ ಚಿತ್ರೋತ್ಸವ ಮುಂದೂಡಲಾಗಿದೆ ಎಂದು ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

  ನಿಯಮ ಪಾಲಿಸದಿದ್ದರೆ ಲಾಕ್‌ಡೌನ್ ಎಚ್ಚರಿಕೆ?

  ನಿಯಮ ಪಾಲಿಸದಿದ್ದರೆ ಲಾಕ್‌ಡೌನ್ ಎಚ್ಚರಿಕೆ?

  ದೇಶದ ಇತರೆ ಭಾಗಗಳಲ್ಲಿ ಕೊರೊನಾ ಸೋಂಕು ಮತ್ತೆ ಹೆಚ್ಚಾಗುತ್ತಿದೆ. ರಾಜ್ಯದಲ್ಲೂ ಸೋಂಕು ಹರಡುವಿಕೆ ಅಧಿಕವಾಗಬಹುದು ಎಂಬ ಆತಂಕ ಕಾಡ್ತಿದೆ. ಮಾರ್ಚ್ 17 ರಂದು ಪ್ರಧಾನಿ ಮೋದಿ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಏಳು ದಿನಗಳ ಕಾಲ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಕರ್ನಾಟಕದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ, ಜನರು ಕಟ್ಟುನಿಟ್ಟಾಗಿ ನಿಯಮ ಪಾಲನೆ ಮಾಡಬೇಕಾಗಿದೆ. ಇಲ್ಲವಾದಲ್ಲಿ ಲಾಕ್‌ಡೌನ್ ಜಾರಿ ಮಾಡುವ ಅನಿವಾರ್ಯ ಎದುರಾಗುತ್ತದೆ ಎಂದು ಸಿಎಂ ಈ ಹಿಂದೆಯೇ ಎಚ್ಚರಿಕೆ ಕೊಟ್ಟಿದ್ದಾರೆ.

  ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳ: ಮುಖ್ಯಮಂತ್ರಿಗಳ ಜತೆ ಪ್ರಧಾನಿ ಮೋದಿ ಸಭೆ

  Sudeep's Silver Jubilee:ಕಿಚ್ಚನ ಸಾಧನೆಯನ್ನು ಕೊಂಡಾಡಿದ ಶಿವಣ್ಣ, ರವಿಚಂದ್ರನ್, ಯಡಿಯೂರಪ್ಪ | Filmibeat Kannada
  ಯುವರತ್ನ, ಕೋಟಿಗೊಬ್ಬ 3?

  ಯುವರತ್ನ, ಕೋಟಿಗೊಬ್ಬ 3?

  ಪೊಗರು ಹಾಗೂ ರಾಬರ್ಟ್ ಸಿನಿಮಾದ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣ್ತಿದೆ. ಏಪ್ರಿಲ್ 1 ರಂದು ಪುನೀತ್ ರಾಜ್ ಕುಮಾರ್ ಅವರ ಯುವರತ್ನ ಸಿನಿಮಾ ರಿಲೀಸ್ ಆಗುತ್ತಿದೆ. ಏಪ್ರಿಲ್ ಕೊನೆಯಲ್ಲಿ ಕೋಟಿಗೊಬ್ಬ 3 ಸಿನಿಮಾ ಬಿಡುಗಡೆಯಾಗಬೇಕಿದೆ. ಇದರ ಜೊತೆಗೆ ದುನಿಯಾ ವಿಜಯ್ ಅವರ ಸಲಗ, ಶಿವಣ್ಣ ಭಜರಂಗಿ 2 ಚಿತ್ರಗಳು ಸಾಲಿನಲ್ಲಿದೆ. ಒಂದು ವೇಳೆ ಲಾಕ್‌ಡೌನ್ ಅಥವಾ ಚಿತ್ರಮಂದಿರಗಳಲ್ಲಿ 50 ಪರ್ಸೆಂಟ್ ನಿಯಮ ಜಾರಿಯಾದರೆ ನಿಜಕ್ಕೂ ಈ ಚಿತ್ರಗಳಿಗೆ ಹಿನ್ನಡೆಯಾಗಲಿದೆ. ಹಾಗಾಗಿ, ಸರ್ಕಾರದ ನಿರ್ಧಾರದ ಬಗ್ಗೆ ಹೆಚ್ಚು ಚಿಂತಿಸುತ್ತಿವೆ ಚಿತ್ರತಂಡಗಳು.

  English summary
  Yuvarathnaa and Kotigobba 3 Movie Producers are in fear of 50% attendance in movie theatres due to rise in covid cases.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X