ಸುದೀಪ್ ಬರ್ತಡೇ ದಿನ ನಿರೀಕ್ಷೆ ಮಾಡಬಹುದಾದ ಸರ್ಪ್ರೈಸ್‌ಗಳು!

ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಒಂದೇ ದಿನ ಬಾಕಿ ಇರೋದು. ಪ್ರತಿವರ್ಷದಿಂದ ಈ ವರ್ಷ ದೊಡ್ಡ ಸಂಭ್ರಮಾಚರಣೆ ಇರುವುದಿಲ್ಲ. ಕೊರೊನಾ ವೈರಸ್ ಭೀತಿಯಿಂದ ಹುಟ್ಟುಹಬ್ಬ ಆಚರಣೆ ಬೇಡ ಎಂದು ತಮ್ಮ ಅಭಿಮಾನಿಗಳಿಗೆ ನಟ ಸುದೀಪ್ ವಿನಂತಿಸಿಕೊಂಡಿದ್ದಾರೆ.

Recommended Video

ಅದ್ದೂರಿಯಾಗಿ ನಡೀತು ಯಶ್ ಮಗನ ನಾಮಕರಣ | Filmibeat Kannada

ಸುದೀಪ್ ಅವರ ಹುಟ್ಟುಹಬ್ಬ ಅಂದ್ಮೇಲೆ ಸ್ಯಾಂಡಲ್‌ವುಡ್ ಇಂಡಸ್ಟ್ರಿ ಕಡೆಯಿಂದ ಹಲವು ಸರ್ಪ್ರೈಸ್‌ಗಳು ಬರುವುದು ಸಹಜ. ಈ ವರ್ಷವೂ ಅಂತಹ ಸರ್ಪ್ರೈಸ್‌ಗಳನ್ನು ಅಭಿಮಾನಿಗಳು ನಿರೀಕ್ಷೆ ಮಾಡಬಹುದು. ಕಿಚ್ಚನ ಹುಟ್ಟುಹಬ್ಬಕ್ಕೆ ಕಾಮನ್ ಡಿಪಿ ಬಿಡುಗೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಇನ್ನು ಸೆಪ್ಟೆಂಬರ್ 2 ರಂದು ಏನು ಸಿಗಬಹುದು ಎಂದು ಕಾದು ನೋಡುತ್ತಿದ್ದಾರೆ. ಮುಂದೆ ಓದಿ...

'ಫ್ಯಾಂಟಮ್' ಪೋಸ್ಟರ್!

'ಫ್ಯಾಂಟಮ್' ಪೋಸ್ಟರ್!

ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ಫ್ಯಾಂಟಮ್ ಚಿತ್ರತಂಡದಿಂದ ಹೊಸ ಪೋಸ್ಟರ್ ಬರಬಹುದು ಎಂಬ ನಿರೀಕ್ಷೆ ಇದೆ. ಆದರೆ, ಅಧಿಕೃತವಾಗಿ ಈ ಬಗ್ಗೆ ಹೇಳಿಲ್ಲ, ಆದರೂ ಸರ್ಪ್ರೈಸ್ ಎನ್ನುವಂತೆ ಕಿಚ್ಚನ ಹೊಸ ಲುಕ್, ಗೆಟಪ್ ಅಥವಾ ಪೋಸ್ಟರ್ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ. ಫ್ಯಾಂಟಮ್ ಚಿತ್ರದ ಫ್ಯಾನ್ ಮೇಡ್ ಪೋಸ್ಟರ್ ಸದ್ಯಕ್ಕೆ ಸದ್ದು ಮಾಡ್ತಿದೆ.

ಕೋಟಿಗೊಬ್ಬ-3 ಟೀಸರ್

ಕೋಟಿಗೊಬ್ಬ-3 ಟೀಸರ್

ಸುದೀಪ್ ನಟಿಸಿರುವ ಕೋಟಿಗೊಬ್ಬ 3 ಚಿತ್ರದಿಂದ ಬರ್ತಡೇ ಟೀಸರ್ ಬರಲಿದೆ. ಈ ಕುರಿತು ಅಧಿಕೃತ ಪ್ರಕಟವಾಗಿದ್ದು, ಸೆಪ್ಟೆಂಬರ್ 2 ರಂದು ಬೆಳಗ್ಗೆ 11 ಗಂಟೆಗೆ ಆನಂದ್ ಆಡಿಯೋ ಚಾನಲ್‌ನಲ್ಲಿ ಹೊಸ ಟೀಸರ್ ಬಿಡುಗಡೆಯಾಗಲಿದೆ.

ಕಿಚ್ಚನ ಬಯೋಗ್ರಫಿ

ಕಿಚ್ಚನ ಬಯೋಗ್ರಫಿ

ಈ ವರ್ಷ ಸುದೀಪ್ ಅಭಿಮಾನಿಗಳಿಗೆ ಅತಿ ದೊಡ್ಡ ಉಡುಗೊರೆ ಅಂದ್ರೆ ಕಿಚ್ಚನ ಬಯೋಗ್ರಫಿ ಪುಸ್ತಕ. ಪತ್ರಕರ್ತ ಶರಣು ಹುಲ್ಲೂರು ರಚಿಸಿರುವ ಸುದೀಪ್ ಅವರ ಬಯೋಗ್ರಫಿ ಪುಸ್ತಕ ಸೆಪ್ಟೆಂಬರ್ 2 ರಂದು ಅನಾವರಣಗೊಳ್ಳುತ್ತಿದ್ದು, ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಲಿದ್ದಾರೆ.

ಹೊಸ ಸಿನಿಮಾ ಘೋಷಣೆ!

ಹೊಸ ಸಿನಿಮಾ ಘೋಷಣೆ!

ಸದ್ಯಕ್ಕೆ ಫ್ಯಾಂಟಮ್ ಮತ್ತು ಕೋಟಿಗೊಬ್ಬ 3 ಚಿತ್ರಗಳು ಕಿಚ್ಚನ ಪಾಕೇಟ್‌ನಲ್ಲಿದೆ. ಫ್ಯಾಂಟಮ್ ಚಿತ್ರೀಕರಣ ಆಗ್ತಿದೆ, ಕೋಟಿಗೊಬ್ಬ 3 ಬಿಡುಗಡೆಗೆ ಸಜ್ಜಾಗುತ್ತಿದೆ. ಈ ನಡುವೆ ಕಿಚ್ಚನ ಹುಟ್ಟುಹಬ್ಬದಂದು ಯಾವುದಾದರೂ ಹೊಸ ಸಿನಿಮಾ ಘೋಷಣೆ ಆದರೂ ಆಗಬಹುದು.

ವಿಷ್ಣು ಅಭಿಮಾನಿಗಳಿಂದ ಮೋಷನ್ ಪೋಸ್ಟರ್

ವಿಷ್ಣು ಅಭಿಮಾನಿಗಳಿಂದ ಮೋಷನ್ ಪೋಸ್ಟರ್

ಅಭಿನಯ ಚಕ್ರವರ್ತಿಯ ಹುಟ್ಟುಹಬ್ಬದ ವಿಶೇಷವಾಗಿ 'ಡಾ ವಿಷ್ಣು ಸುದೀಪ್ ಸೇನೆ' ವಿಶೇಷವಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಮೋಷನ್ ಪೋಸ್ಟರ್‌ನಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಸುದೀಪ್ ಅವರ ಕಟೌಟ್ ಗಮನ ಸೆಳೆಯುತ್ತಿದೆ.

More from Filmibeat

English summary
Kotigobba 3 teaser and Kiccha biography book will release on Sudeep birthday. then, what is the surprise gift from sandalwood?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X