twitter
    For Quick Alerts
    ALLOW NOTIFICATIONS  
    For Daily Alerts

    'ಕೋಟಿಗೊಬ್ಬ 3' ಟೀಸರ್ ಹೀಗೆ ಬಂದು ಮತ್ತೆ ವಾಪಸ್ ಹೋಯ್ತು: ಕಿಚ್ಚ ಫ್ಯಾನ್ಸ್‌ಗೆ ನಿರಾಶೆ

    |

    ಯೂಟ್ಯೂಬ್‌ನಿಂದ ಇದ್ದಕ್ಕಿದ್ದಂತೆ ಮಾಯವಾಗಿದ್ದ ಬಹು ನಿರೀಕ್ಷಿತ 'ಕೋಟಿಗೊಬ್ಬ 3' ಚಿತ್ರದ ಟೀಸರ್ ಮತ್ತೆ ಮರಳಿ ಬಂದಿದೆ. ಬೇಸರದಲ್ಲಿದ್ದ ಅಭಿಮಾನಿಗಳೊಂದಿಗೆ ಕಿಚ್ಚ ಸುದೀಪ್ ಈ ಖುಷಿಯನ್ನು ಹಂಚಿಕೊಂಡಿದ್ದರು. ಟೀಸರ್ ಡಿಲೀಟ್ ಆಗಿದ್ದರಿಂದ ಬೇಸರದಲ್ಲಿದ್ದ ಅಭಿಮಾನಿಗಳಿಗೆ ಈ ಸುದ್ದಿ ಖುಷಿ ನೀಡಿತ್ತು. ಆದರೆ ಅವರು ಹೊಸ ಲಿಂಕ್ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಮತ್ತೆ ಟೀಸರ್ ಮಾಯವಾಗಿದೆ.

    ಕೋಟಿಗೊಬ್ಬ 3 ಚಿತ್ರಕ್ಕಾಗಿ ಪೋಲೆಂಡ್‌ನಲ್ಲಿ ಚಿತ್ರೀಕರಿಸಲಾದ ದೃಶ್ಯಗಳು ವೈಬ್ರೆಂಟ್ ಲಿಮಿಟೆಡ್ ಕಂಪನಿಯ ಮಾಲಿಕ ಅಜಯ್ ಪಾಲ್ ಮತ್ತು ಸಂಜಯ್ ಪಾಲ್ ಹೆಸರಿನಲ್ಲಿದೆ. ಚಿತ್ರತಂಡ ಬಾಕಿ ಹಣ ನೀಡದೆ ಟೀಸರ್ ರಿಲೀಸ್ ಮಾಡಿದೆ ಎನ್ನುವ ಕಾರಣಕ್ಕೆ ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿದ್ದ ಟೀಸರ್ ಅನ್ನು ಡಿಲೀಟ್ ಮಾಡಿಸಲಾಗಿದೆ ಎಂದು ಹೇಳಲಾಗಿತ್ತು. ಇದಕ್ಕೆ ನಿರ್ಮಾಪಕ ಸೂರಪ್ಪ ಬಾಬು ಸ್ಪಷ್ಟೀಕರಣ ನೀಡಿದ್ದರು. ಕಾನೂನು ಹೋರಾಟ ಮಾಡುವುದಾಗಿಯೂ ಅವರು ತಿಳಿಸಿದ್ದರು.

    ಟೀಸರ್ ವಾಪಸ್ ಬಂದಿದೆ

    ಟೀಸರ್ ವಾಪಸ್ ಬಂದಿದೆ

    ಈ ನಡುವೆ ಕಿಚ್ಚ ಸುದೀಪ್ ಶುಕ್ರವಾರ ಬೆಳಿಗ್ಗೆ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. 'ನಮ್ಮಲ್ಲಿ ನಂಬಿಕೆ ಇರಿಸಿರುವ ನಮ್ಮ ಎಲ್ಲ ಗೆಳೆಯರಿಗೂ ಧನ್ಯವಾದಗಳು' ಎಂದು ಟ್ವಿಟ್ಟರ್‌ನಲ್ಲಿ ಹೇಳಿದ್ದ ಸುದೀಪ್, ಕೋಟಿಗೊಬ್ಬ 3 ಟೀಸರ್ ವಾಪಸ್ ಬಂದಿದೆ ಎಂದು ಹ್ಯಾಷ್ ಟ್ಯಾಗ್ ಮೂಲಕ ತಿಳಿಸಿದ್ದರು.

    'ಕೋಟಿಗೊಬ್ಬ-3' ಟೀಸರ್ ಡಿಲೀಟ್: ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದೇನು?'ಕೋಟಿಗೊಬ್ಬ-3' ಟೀಸರ್ ಡಿಲೀಟ್: ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದೇನು?

    ಖುಷಿಯಾಗಿದ್ದ ಅಭಿಮಾನಿಗಳು

    ಖುಷಿಯಾಗಿದ್ದ ಅಭಿಮಾನಿಗಳು

    ಸುದೀಪ್ ತಮ್ಮ ಟ್ವೀಟ್ ಜತೆಗೆ ಕೋಟಿಗೊಬ್ಬ 3 ಯೂ ಟ್ಯೂಬ್ ಟೀಸರ್‌ ಲಿಂಕ್‌ಅನ್ನು ಕೂಡ ಶೇರ್ ಮಾಡಿದ್ದರು. ಇದರಿಂದ ಪುಳಕಿತರಾದ ಅಭಿಮಾನಿಗಳು #K3TeaserIsBack ಎಂಬ ಹ್ಯಾಷ್‌ಟ್ಯಾಗ್‌ಅನ್ನು ಟ್ರೆಂಡ್ ಮಾಡಿದ್ದರು. ಮತ್ತೆ ಎಲ್ಲರೂ ಟೀಸರ್ ನೋಡಿ ಮಿಲಿಯನ್‌ಗಟ್ಟಲೆ ವೀವ್ಸ್ ತರೋಣ ಎಂದು ಹೇಳಿದ್ದರು.

    ಮತ್ತೆ ವಿಡಿಯೋ ಮಾಯ

    ಮತ್ತೆ ವಿಡಿಯೋ ಮಾಯ

    ಆದರೆ ಅಭಿಮಾನಿಗಳ ಖುಷಿ ಹೆಚ್ಚು ಸಮಯ ಉಳಿಯಲಿಲ್ಲ. ಸುದೀಪ್ ಈ ಲಿಂಕ್ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಟೀಸರ್ ಪುನಃ ನಾಪತ್ತೆಯಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಈ ವಿಡಿಯೋದ ಮಾಲೀಕರು ನಿಮಗೆ ಅನುಮತಿ ನೀಡಿದರೆ ದಯವಿಟ್ಟು ಸೈನ್ ಇನ್ ಆಗಿ ಎಂದು ತಿಳಿಸುತ್ತದೆ. ಯೂಟ್ಯೂಬ್‌ನಲ್ಲಿ 'ಖಾಸಗಿ ವಿಡಿಯೋ' ಎಂದು ತೋರಿಸುತ್ತದೆ.

    ಕಾನೂನು ಹೋರಾಟದ ಕ್ರಮ

    ಕಾನೂನು ಹೋರಾಟದ ಕ್ರಮ

    ಮುಂಬೈ ಮೂಲದ ಅಜಯ್ ಪಾಲ್ ಸಹೋದರರಿಗೆ ಕೊಡಬೇಕಾದ ಹಣ ಕೊಟ್ಟಿದ್ದೇನೆ. ಅದಕ್ಕೆಲ್ಲ ನನ್ನ ಬಳಿ ದಾಖಲೆ ಇದೆ. ಈಗ ಕಾನೂನು ಪ್ರಕಾರ ಹೋರಾಡಲು ನಾನು ರೆಡಿ ಇದ್ದೀನಿ. ಯೂಟ್ಯೂಬ್ ವಿರುದ್ಧ ಯಾರೆ ದೂರು ಕೊಟ್ಟರೊ ಆ ವಿಡಿಯೋ ಡಿಲೀಟ್ ಆಗುತ್ತೆ. ಅದರ ವಿರುದ್ಧ ಈಗಾಗಲೆ ಆನಂದ್ ಆಡಿಯೋದ ಮುಖ್ಯಸ್ಥ ಶ್ಯಾಮ್ ಲೀಗಲ್ ಆಕ್ಷನ್ ತೆಗೆದುಕೊಂಡಿದ್ದಾರೆ ಎಂದು ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದರು.

    'ಕೋಟಿಗೊಬ್ಬ-3' ಟೀಸರ್ ಯೂಟ್ಯೂಬ್ ನಿಂದ ಡಿಲೀಟ್: ಕಾರಣವೇನು?'ಕೋಟಿಗೊಬ್ಬ-3' ಟೀಸರ್ ಯೂಟ್ಯೂಬ್ ನಿಂದ ಡಿಲೀಟ್: ಕಾರಣವೇನು?

    ಪೋಲೆಂಡ್‌ನಲ್ಲಿ ಸಮಸ್ಯೆ

    ಪೋಲೆಂಡ್‌ನಲ್ಲಿ ಸಮಸ್ಯೆ

    ಕೋಟಿಗೊಬ್ಬ 3 ಚಿತ್ರ ಆರಂಭವಾದ ಸಂದರ್ಭದಿಂದಲೂ ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸುತ್ತಲೇ ಇದೆ. ಪೋಲೆಂಡ್ ಚಿತ್ರೀಕರಣಕ್ಕೆ ತೆರಳಿದ್ದಾಗ ಚಿತ್ರತಂಡ 50 ಲಕ್ಷ ರೂ ಹಣ ಕೊಡಬೇಕು ಎಂದು ಅಜಯ್ ಪಾಲ್ ಬೇಡಿಕೆ ಇರಿಸಿದ್ದರು. ಇದಕ್ಕೆ ಒಪ್ಪದ ಚಿತ್ರತಂಡ ಪೋಲೆಂಡ್‌ನಿಂದ ವಾಪಸ್ ಆಗಿತ್ತು. ಆಗ ಚಿತ್ರತಂಡದ ಅಕೌಂಟೆಂಟ್ ಅನ್ನು ಒತ್ತೆ ಇರಿಸಿಕೊಳ್ಳಲಾಗಿತ್ತು. ಕೊನೆಗೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರ ನೆರವಿನಿಂದ ಅವರನ್ನು ಬಿಡಿಸಿಕೊಂಡು ಬರಲಾಗಿತ್ತು.

    English summary
    Kichcha Sudeep has shared a link of his Kotigobba 3 teaser and said K3 teaser is back. But in a few hours the teaser was disappeared again.
    Friday, March 13, 2020, 16:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X