For Quick Alerts
  ALLOW NOTIFICATIONS  
  For Daily Alerts

  'ಕೋಟಿಗೊಬ್ಬ 3' ಡಬ್ಬಿಂಗ್ ಮುಗಿಸಿದ ಸುದೀಪ್: ಬಿಡುಗಡೆ ಯಾವಾಗ?

  |

  ನಟ ಸುದೀಪ್, 'ಕೋಟಿಗೊಬ್ಬ 3' ಸಿನಿಮಾದ ಡಬ್ಬಿಂಗ್ ಕಾರ್ಯ ಮುಗಿಸಿದ್ದಾರೆ. 2019 ರಲ್ಲಿ ಆರಂಭವಾದ 'ಕೋಟಿಗೊಬ್ಬ 3' ಚಿತ್ರೀಕರಣ ಇಂದು (ಜುಲೈ 22) ಅಂತ್ಯವಾಗಿದೆ! ಸಿನಿಮಾ ತಡವಾಗಲು ಮುಖ್ಯ ಕಾರಣ ಕೊರೊನಾ.

  'ಕೋಟಿಗೊಬ್ಬ 3' ಸಿನಿಮಾದ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಎಲ್ಲವೂ ಮುಗಿದಿದ್ದವು ಆದರೆ ಸುದೀಪ್ ಅವರ ಡಬ್ಬಿಂಗ್ ಮಾತ್ರವೇ ಬಾಕಿ ಇತ್ತು. ಸುದೀಪ್ ಇಂದು ಅದನ್ನೂ ಮುಗಿಸಿದ್ದು, ಸಿನಿಮಾ ಬಿಡುಗಡೆಗೆ ತಯಾರಾಗಿದೆ.

  ''ಮತ್ತೆ ಮೈಕ್‌ ಮುಂದೆ ಬಂದಿದ್ದೇನೆ. ಈ ಬಾರಿ 'ಕೋಟಿಗೊಬ್ಬ 3' ಸಿನಿಮಾದ ಡಬ್ಬಿಂಗ್ ಕಾರ್ಯಕ್ಕಾಗಿ ಮೈಕ್ ಮುಂದೆ ಬಂದಿದ್ದೇನೆ. ಎಲ್ಲರೂ ತಮ್ಮ ಪಾತ್ರಗಳಿಗೆ ಡಬ್ಬಿಂಗ್ ಮುಗಿಸಿ ಆಗಿದೆ, ಹಿನ್ನೆಲೆ ಸಂಗೀತವೂ ಪೂರ್ಣಗೊಂಡಿದೆ. ನನ್ನ ಡಬ್ಬಿಂಗ್ ಕಾರ್ಯ ಮುಗಿದರೆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಅಂತ್ಯವಾಗುತ್ತದೆ'' ಎಂದು ನಿನ್ನೆ (ಜುಲೈ 21) ರಂದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಾಕಿದ್ದರು ಸುದೀಪ್.

  ಇಂದು (ಜುಲೈ 22) ಮತ್ತೆ ಪೋಸ್ಟ್ ಹಾಕಿರುವ ಸುದೀಪ್, ''ಕೋಟಿಗೊಬ್ಬ 3' ಸಿನಿಮಾದ ಡಬ್ಬಿಂಗ್ ಕಾರ್ಯ ಪೂರ್ಣಗೊಳಿಸಿದ್ದೇನೆ. ಸತ್ಯ ಮತ್ತು ಶಿವ ಅವರುಗಳು ಶೀಘ್ರವಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ ಚಿತ್ರತಂಡದ ಎಲ್ಲರಿಗೂ ಶುಭವಾಗಲಿ'' ಎಂದಿದ್ದಾರೆ ಸುದೀಪ್.

  'ಕೋಟಿಗೊಬ್ಬ 3' ಸಿನಿಮಾದ ಡಬ್ಬಿಂಗ್ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ ಸಿನಿಮಾ ಬಿಡುಗಡೆ ಚರ್ಚೆ ಆರಂಭವಾಗಿದ್ದು, ಸಿನಿಮಾವು ಆಗಸ್ಟ್ ತಿಂಗಳ ಮಧ್ಯ ಭಾಗದಲ್ಲಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಈಗಾಗಲೇ ಹಲವು ಬಾರಿ ಸಿನಿಮಾದ ಬಿಡುಗಡೆ ಮುಂದೂಡಲಾಗಿದೆ. ಈ ಬಾರಿ ನಿಗದಿತ ದಿನಾಂಕದಲ್ಲಿಯೇ ಸಿನಿಮಾ ಬಿಡುಗಡೆ ಮಾಡುವ ಗಟ್ಟಿ ನಿಶ್ಚಯವನ್ನು ಚಿತ್ರಂಡ ಮಾಡಿದೆ. 'ಕೋಟಿಗೊಬ್ಬ 3' ಸಿನಿಮಾವನ್ನು ಸೂರಪ್ಪ ಬಾಬು ನಿರ್ಮಾಣ ಮಾಡಿದ್ದಾರೆ.

  ಪಡ್ಡೆಗಳ ನಿದ್ದೆಗೆಡಿಸಿ ವಿಚಿತ್ರ ಸ್ಟೇಟಸ್ ಹಾಕಿದ ವಿಕ್ರಾಂತ್ ರೋಣ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್

  ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾದ ಚಿತ್ರೀಕರಣ ಸಹ ಅಂತ್ಯವಾಗಿದ್ದು ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಸಹ ಕೊನೆಯ ಹಂತದಲ್ಲಿದೆ. ಹಾಗಾಗಿ ಅದಷ್ಟು ಶೀಘ್ರವಾಗಿ 'ಕೋಟಿಗೊಬ್ಬ 3' ಸಿನಿಮಾ ಬಿಡುಗಡೆ ಆಗಿ ನಂತರ 'ವಿಕ್ರಾಂತ್ ರೋಣ' ಸಿನಿಮಾವನ್ನು ಬಿಡುಗಡೆ ಮಾಡುವ ಯೋಜನೆ ಸುದೀಪ್‌ರದ್ದು.

  English summary
  Kotigobba 3 Update: Kichcha Sudeep Completes dubbing for kotigobba 3 movie. Movie may release to theaters in mid August.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X