ಯೂಟ್ಯೂಬ್ ನಲ್ಲಿ ಕನ್ನಡ ಟ್ರೇಲರ್ ಗಳ ಕಾರುಬಾರು

By Pavithra

Recommended Video

ಹೇಗಿತ್ತು ಕೋಟಿಗೊಬ್ಬ 3, ಪೈಲ್ವಾನ್ ಹಾಗೂ ಕವಲುದಾರಿ ಟೀಸರ್..! | Filmibeat Kannada

ಕನ್ನಡ ಸಿನಿಮಾರಂಗ ದೊಡ್ಡದಾಗಿ ಬೆಳೆದಿದೆ. ಇಲ್ಲಿಯ ಸಿನಿಮಾಗಳು ಬೇರೆ ಭಾಷೆಗಳಲ್ಲಿ ರೀಮೇಕ್ ಆಗುತ್ತಿವೆ. ಬಾಕ್ಸ್ ಆಫೀಸ್ ನಲ್ಲಿಯೂ ಕನ್ನಡ ಸಿನಿಮಾಗಳ ಓಟ ಜೋರಾಗಿದೆ. ಹೊಸ ಹೊಸ ನಿರ್ದೇಶಕರು ಕಲಾವಿದರು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

ಹೊಸ ರೀತಿಯ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿವೆ. ಸಾಮಾನ್ಯ ಕಮರ್ಷಿಯಲ್ ಚಿತ್ರಗಳ ಜೊತೆ ಜೊತೆಯಲ್ಲಿ ಹೆಚ್ಚಾಗಿ ಪ್ರಯೋಗಾತ್ಮಕ ಎನ್ನಿಸುವಂತಹ ಚಿತ್ರಗಳು ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಾಗಿವೆ.

ಸದ್ಯ ಯೂಟ್ಯೂಬ್ ಲೋಕದಲ್ಲಿ ಮುಂಬರುವ ಕನ್ನಡ ಸಿನಿಮಾಗಳ ಕಾರುಬಾರು ಹೆಚ್ಚಾಗಿದೆ. ಚಿತ್ರೀಕರಣ ಹಂತದಲ್ಲಿರುವ, ಶೂಟಿಂಗ್ ಮುಗಿಸಿರುವ ಸಿನಿಮಾಗಳ ಟ್ರೇಲರ್ ಗಳು ಪ್ರೇಕ್ಷಕರ ಮನ್ನಣೆ ಪಡೆದುಕೊಂಡಿವೆ. ಹಾಗಾದರೆ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ಹುಟ್ಟುಹಾಕಿರುವ ಟ್ರೇಲರ್ ಗಳು ಯಾವುವು? ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

ಟ್ರೆಂಡ್ ಸೆಟ್ ಮಾಡಿದ ಕಿಚ್ಚ ಸುದೀಪ್

ಟ್ರೆಂಡ್ ಸೆಟ್ ಮಾಡಿದ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ 3' ಸಿನಿಮಾ ಟೀಸರ್ ಸದ್ಯ ಯೂಟ್ಯೂಬ್ ನಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಲು ಸಿದ್ದವಾಗಿದೆ. ಮೂರು ದಿನಗಳಿಂದಲೂ 'ಕೋಟಿಗೊಬ್ಬ 3' ಟೀಸರ್ ನಂಬರ್ 1 ಟ್ರೆಂಡಿಂಗ್ ನಲ್ಲಿದೆ.

ಪ್ರೇಕ್ಷಕರು ಮೆಚ್ಚಿದ 'ಕವಲುದಾರಿ'

ಪ್ರೇಕ್ಷಕರು ಮೆಚ್ಚಿದ 'ಕವಲುದಾರಿ'

ನಟ ರಿಷಿ ಅಭಿನಯದ ಹೇಮಂತ್ ರಾವ್ ನಿರ್ದೇಶನದ 'ಕವಲುದಾರಿ' ಚಿತ್ರದ ಟ್ರೇಲರ್ ನಿನ್ನೆಯಷ್ಟೆ ಬಿಡುಗಡೆಯಾಗಿದ್ದು ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ಕವಲುದಾರಿ' ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅನಂತ್ ನಾಗ್, ರೋಷನಿ ಪ್ರಕಾಶ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಧನಂಜಯ ಅಭಿನಯದ 'ಭೈರವ ಗೀತ'

ಧನಂಜಯ ಅಭಿನಯದ 'ಭೈರವ ಗೀತ'

'ಟಗರು' ಸಿನಿಮಾ ಖ್ಯಾತಿಯ ಡಾಲಿ ಧನಂಜಯ ಅಭಿನಯದ ಹೊಸ ಚಿತ್ರ 'ಭೈರವ ಗೀತ' ಕೂಡ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. 'ಭೈರವ ಗೀತ' ಚಿತ್ರ ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ತೆರೆಗೆ ಬರ್ತಿದೆ.

ಟ್ರೆಂಡಿಂಗ್ ನಲ್ಲಿರಲು ಕಾರಣ

ಟ್ರೆಂಡಿಂಗ್ ನಲ್ಲಿರಲು ಕಾರಣ

ಕನ್ನಡದ ಸಿನಿಮಾ ಟ್ರೇಲರ್ ಗಳು ಎರಡು ಮೂರು ದಿನಗಳಿಂದ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿರಲು ಕಾರಣ ಸಿನಿಮಾ ಗುಣಮಟ್ಟ, ಕಲಾವಿದರು ಮತ್ತು ಇತ್ತೀಚಿಗೆ ಬರುತ್ತಿರುವ ಉತ್ತಮ ಕನ್ನಡ ಚಿತ್ರಗಳು.

More from Filmibeat

English summary
Kannada cinema Kotiagooba3, Kavaladari, and Bhairava Getha movies Tradition on youtube.The two films of Kannada are in Top Trending for the past two days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X