For Quick Alerts
  ALLOW NOTIFICATIONS  
  For Daily Alerts

  ಟಗರು ಶತದಿನೋತ್ಸವದ ಸಂಭ್ರಮದಲ್ಲಿ ಹೊಸ ಚಿತ್ರ ಅನೌನ್ಸ್

  By Pavithra
  |

  'ಟಗರು' ಈ ವರ್ಷದ ಹಿಟ್ ಲೀಸ್ಟ್ ನಲ್ಲಿ ಸೇರಿಕೊಂಡಿರುವ ಸಿನಿಮಾ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ದುನಿಯಾ ಸೂರಿ ಕಾಂಬಿನೇಶನ್ ಅನ್ನು ಮನಸ್ಸಾರೇ ಕನ್ನಡ ಸಿನಿಮಾ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

  75 ದಿನಗಳನ್ನ ಪೂರೈಸಿ ನೂರುದಿನಗಳತ್ತ ಸಾಗುತ್ತಿರುವ ಟಗರು ಸಿನಿಮಾ ತಂಡ ಚಿತ್ರ ಶತದಿನೋತ್ಸವ ಪೂರೈಸುತ್ತಿರುವ ಸಮಯದಲ್ಲಿ ಸಿನಿಪ್ರಿಯರಿಗೆ ಮತ್ತೊಂದು ಸುದ್ದಿಕೊಟ್ಟಿದೆ. ಅದೇನಪ್ಪಾ ಅಂದರೆ ಟಗರು ಚಿತ್ರತಂಡ ಮತ್ತೆ ಒಂದಾಗಿ ವೀಕ್ಷರ ಮುಂದೆ ಬರಲಿದ್ಯಂತೆ.

  ಜಗತ್ತಿನಲ್ಲಿರುವ ತಾಯಂದಿರಿಗೆ ಡಾಲಿಯ ಪ್ರೀತಿಯ ಉಡುಗೊರೆಜಗತ್ತಿನಲ್ಲಿರುವ ತಾಯಂದಿರಿಗೆ ಡಾಲಿಯ ಪ್ರೀತಿಯ ಉಡುಗೊರೆ

  ಹೌದು ನಿರ್ಮಾಪಕ ಕೆ ಪಿ ಶ್ರೀಕಾಂತ್ ದುನಿಯಾ ಸೂರಿ ಅವರ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಆದರೆ ಚಿತ್ರದಲ್ಲಿ ನಾಯಕ ಮಾತ್ರ ಕನ್ನಡ ಸಿನಿಮಾರಂಗದ ನಟ ರಾಕ್ಷಸ ಅಂತ ಖ್ಯಾತಿ ಪಡೆದುಕೊಂಡಿರುವ ಸ್ಪೆಷಲ್ ಹೀರೋ ಧನಂಜಯ.

  'ಕಾಗೆ ಬಂಗಾರ' ಸಿನಿಮಾ ಪಕ್ಕಕ್ಕಿಟ್ಟು ನಟ ಧನಂಜಯ ಅವರಿಗೆ ದುನಿಯಾ ಸೂರಿ ಚಿತ್ರ ಡೈರೆಕ್ಟ್ ಮಾಡಲು ಮುಂದಾಗಿದ್ದಾರೆ. ಡಾಲಿ ಕೂಡ ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದರ ಬೆನ್ನಲ್ಲೇ ಮತ್ತೊಂದು ಚಿತ್ರ ನಿರ್ಮಾಣ ಮಾಡಲು ಕೆ ಪಿ ಶ್ರೀಕಾಂತ್ ಮನಸ್ಸು ಮಾಡಿದ್ದಾರೆ. ಸದ್ಯ ಧನಂಜಯ ಹಾಗೂ ದುನಿಯಾ ಸೂರಿ ಯಾವ ಚಿತ್ರದಲ್ಲಿ ಭಾಗಿ ಆಗುತ್ತಾರೆ ಎನ್ನುವುದೇ ಕುತೂಹಲ.

  English summary
  Kannada producer KP Srikanth will be producing the next film of Kannada actor Dhananjaya. The film is directed by Duniya Suri.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X