ಭಿನ್ನಮತ ಸ್ಫೋಟ: ಕೆಪಿಜೆಪಿ ಪಕ್ಷದಿಂದ ಹೊರಬರ್ತಾರಾ ಉಪೇಂದ್ರ.?
Recommended Video

ಕನಸಿನ ಕರ್ನಾಟಕ, ಭವ್ಯ ಭಾರತ ನಿರ್ಮಾಣ ಮಾಡುವ ಆಸೆಯಿಂದ ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ ಧುಮುಕಿದರು. 'ಪ್ರಜಾಕೀಯ'ದ ಮೂಲಕ ಪ್ರಜಾಪ್ರಭುತ್ವಕ್ಕೆ ಹಾಗೂ ಪ್ರಜೆಗಳಿಗೆ ಮಹತ್ವ ಕೊಡಲು ಉಪೇಂದ್ರ ಮುಂದಾದರು.
ಸ್ವತಂತ್ರ ಪಕ್ಷ ಸ್ಥಾಪನೆ ಮಾಡುವುದಾಗಿ ಮೊದಲು ಉಪೇಂದ್ರ ಘೋಷಿಸಿದ್ದರು. ಆದ್ರೆ, ಕಳೆದ ವರ್ಷದ ಅಕ್ಟೋಬರ್ 31 ರಂದು 'ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ'ದ ಮೂಲಕ ಉಪೇಂದ್ರ 'ಪ್ರಜಾಕಾರಣ'ಕ್ಕೆ ಇಳಿದರು.
ಎಲ್ಲರಿಗೂ ಗೊತ್ತಿರುವ ಹಾಗೆ, 'ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ' ಉಪೇಂದ್ರ ಸ್ಥಾಪಿಸಿದ ಪಕ್ಷ ಅಲ್ಲ. ಕಾರ್ಖಾನೆಯೊಂದರ ಮಾಲೀಕರಾಗಿರುವ ಮಹೇಶ್ ಗೌಡ ಎಂಬುವರು 'ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ'ದ ಸಂಸ್ಥಾಪಕ.
2015 ರಲ್ಲಿ ನೋಂದಣಿ ಆಗಿದ್ದ ಕೆ.ಪಿ.ಜೆ.ಪಿ ಪಕ್ಷ ಸೇರಿದ ಉಪೇಂದ್ರ, ಅದಕ್ಕೆ ಸಾರಥಿ ಆದರು. ಜೊತೆಗೆ 'ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ'ದ ರಾಷ್ಟ್ರೀಯ ಅಧ್ಯಕ್ಷದ ಹುದ್ದೆ ಅಲಂಕರಿಸಿದರು ಉಪೇಂದ್ರ.
ಇನ್ನೇನು ಎಲೆಕ್ಷನ್ ಹತ್ತಿರ ಬಂತು. ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವಾಗಲೇ, ಕೆ.ಪಿ.ಜೆ.ಪಿ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದೆ. ಸೈನ್ನಿಂಗ್ ಅಥಾರಿಟಿ ವಿಷಯವಾಗಿ ಕೆ.ಪಿ.ಜೆ.ಪಿ ಪಕ್ಷದ ಸಮಿತಿ ಹಾಗೂ ಉಪೇಂದ್ರ ನಡುವೆ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ. 'ಕೆ.ಪಿ.ಜೆ.ಪಿ'ಯಿಂದ ಉಪೇಂದ್ರ ಹೊರಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಮುಂದೆ ಓದಿರಿ...

'ಕೆ.ಪಿ.ಜೆ.ಪಿ'ಯಲ್ಲಿ ಭಿನ್ನಮತ ಸ್ಫೋಟ
ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸೈನ್ನಿಂಗ್ ಅಥಾರಿಟಿ ನೀಡುವ ಸಲುವಾಗಿ 'ಕೆ.ಪಿ.ಜೆ.ಪಿ'ಯ ಸಂಸ್ಥಾಪಕ ಹಾಗೂ ಮುಖ್ಯ ಪ್ರಧಾನ ಕಾರ್ಯದರ್ಶಿ ಆಗಿರುವ ಮಹೇಶ್ ಗೌಡ ಮತ್ತು ರಾಷ್ಟ್ರೀಯ ಅಧ್ಯಕ್ಷ ಉಪೇಂದ್ರ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ.

ಭಿನ್ನಮತ ಮೂಡಲು ಕಾರಣ ಏನು.?
''ಮಾರ್ಚ್ 3 ರಂದು ನ್ಯಾಷನಲ್ ಕಮಿಟಿ ಮೀಟಿಂಗ್ ನಡೆದಿತ್ತು. ಎಲೆಕ್ಷನ್ ಹತ್ತಿರ ಬರುತ್ತಿದೆ. ಅಭ್ಯರ್ಥಿ ಆಯ್ಕೆ ಇನ್ನೂ ಆಗಿಲ್ಲ. ಇದರ ಬಗ್ಗೆ ಸಂಸ್ಥಾಪಕ ಮಹೇಶ್ ಗೌಡ ಸಭೆ ಕರೆದಿದ್ದರು. ಉಪೇಂದ್ರ ಬಂದಿರಲಿಲ್ಲ. ಉಪೇಂದ್ರ ಸಹೋದರ ಮಾತ್ರ ಬಂದಿದ್ದರು. ಅಭ್ಯರ್ಥಿಗಳಿಗೆ ನಾನೊಬ್ನೇ ಸಿಗ್ನೇಟರಿ (ಸೈನ್ನಿಂಗ್ ಅಥಾರಿಟಿ) ಆಗಬೇಕು ಎಂಬ ಪ್ರಸ್ತಾಪವನ್ನ ಉಪೇಂದ್ರ ಪರವಾಗಿ ಅವರ ಸಹೋದರ ಮುಂದಿಟ್ಟರು. ಆದ್ರೆ, ಅದಕ್ಕೆ ಕಮಿಟಿ ಒಪ್ಪಿಕೊಳ್ಳಲಿಲ್ಲ. ಪ್ರಜಾಕೀಯವಾಗಿ ನಡೆಸಿಕೊಂಡು ಹೋಗಬೇಕಾದ ಕಾರಣ, ಒಬ್ಬರಿಗೆ ಅಧಿಕಾರ ಬೇಡ. ಎಲ್ಲರಿಗೂ ಅಧಿಕಾರ ಕೊಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು'' - ಶಿವಕುಮಾರ್, ಕೆ.ಪಿ.ಜೆ.ಪಿ ಉಪಾಧ್ಯಕ್ಷ

ಆಟೋ, ಪ್ರಜಾಕೀಯ, ಉಪೇಂದ್ರ
''ಇಲ್ಲಿಯವರೆಗೂ ಕೆ.ಪಿ.ಜೆ.ಪಿ ಸಮಿತಿಯಲ್ಲಿ ಯಾರೆಲ್ಲ ಇದ್ದಾರೆ ಅಂತ ಯಾರಿಗೂ ಗೊತ್ತಿಲ್ಲ. ಸೈನ್ನಿಂಗ್ ಅಥಾರಿಟಿ ಬರೆದು ಕೊಡಿ ಅಂತಿದ್ದಾರೆ. ಒಬ್ಬರಿಗೆ ಅಧಿಕಾರ ಬೇಡ, ಕನಿಷ್ಟ ಇಬ್ಬರಿಗೆ ಸೈನ್ನಿಂಗ್ ಅಥಾರಿಟಿ ಇರಲಿ ಎಂಬುದು ಕಮಿಟಿ ಅಭಿಪ್ರಾಯ. ನಮ್ಮ ಪಕ್ಷದಲ್ಲಿ ಯಾರೂ ಸುಪ್ರೀಂ ಅಲ್ಲ. 2/3rd ಮೆಜಾರಿಟಿ ಬಂದ್ರೆ, ಅದೇ ನಿರ್ಧಾರ ನಮ್ಮಲ್ಲಿ. ಇಲ್ಲಿ, ಆಟೋ, ಪ್ರಜಾಕೀಯ ಹಾಗೂ ಉಪೇಂದ್ರ... ಈ ಮೂರು ಮಾತ್ರ ಇರಬೇಕು ಅಂತ ಉಪೇಂದ್ರ ಕ್ಲಿಯರ್ ಆಗಿ ಹೇಳಿದ್ದಾರೆ. ಈ ಮಾತು ನಮ್ಮ ಸಮಿತಿಯವರಿಗೆ ತುಂಬಾ ನೋವಾಗಿದೆ'' - ಮಹೇಶ್ ಗೌಡ, ಕೆ.ಪಿ.ಜೆ.ಪಿ ಸಂಸ್ಥಾಪಕ ಹಾಗೂ ಮುಖ್ಯ ಪ್ರಧಾನ ಕಾರ್ಯದರ್ಶಿ

ಸಿಹಿ ಮಾಡುವ ಅಧಿಕಾರ ಕೊಟ್ರೆ ಮಾತ್ರ ಬರುವೆ!
''ನಿನ್ನೆಯೂ ಉಪೇಂದ್ರ ಮನವೊಲಿಸಲು ಮಹೇಶ್ ಗೌಡ ಪ್ರಯತ್ನ ಪಟ್ಟರು. ಸಿಗ್ನೇಟರಿ ಕೊಟ್ಟಿಲ್ಲ ಅಂದ್ರೆ ಪಾರ್ಟಿ ಬಿಟ್ಟು ಹೋಗ್ತೀನಿ ಅಂತಿದ್ದಾರೆ ಉಪೇಂದ್ರ'' - ಶಿವಕುಮಾರ್, ಕೆ.ಪಿ.ಜೆ.ಪಿ ಉಪಾಧ್ಯಕ್ಷ

ಸಂಬಂಧ ಮುಗಿದು ಹೋಗಿದೆ
''ನನ್ನ-ನಿಮ್ಮ ಸಂಬಂಧ ಮುಗಿದು ಹೋಗಿದೆ. ಸಿಗ್ನೇಟರಿ ಅಥಾರಿಟಿ ಕೊಟ್ಟರೆ ಬರ್ತೀನಿ, ಇಲ್ಲಾಂದ್ರೆ ಇಲ್ಲ ಅಂತ ಉಪೇಂದ್ರ ಹೇಳಿದ್ದಾರೆ'' - ಶಿವಕುಮಾರ್, ಕೆ.ಪಿ.ಜೆ.ಪಿ ಉಪಾಧ್ಯಕ್ಷ

ಪ್ರಚಾರ ವಿಷಯದಲ್ಲೂ ಕಿರಿಕ್
''ಅಭ್ಯರ್ಥಿಗಳ ಆಯ್ಕೆ ನಿಧಾನಕ್ಕೆ ಆಗ್ತಾಯಿತ್ತು. ಮನೆಯಲ್ಲೇ ಕೂತು ಸೋಷಿಯಲ್ ಮೀಡಿಯಾದ ಮೂಲಕ ಪ್ರಚಾರ ಮಾಡುವೆ ಅಂತಿದ್ದರು ಉಪೇಂದ್ರ. ಆದ್ರೆ, ವಾಸ್ತವಕ್ಕೆ ಇಳಿಯಬೇಕು ಎಂಬುದು ನಮ್ಮ ಬಯಕೆ. ಜನರ ಮುಂದೆ ನಾವು ಹೋಗಬೇಕು ಎಂದು ಕಮಿಟಿಯಲ್ಲಿ ನಿರ್ಧಾರ ಆಗಿತ್ತು'' - ಶಿವಕುಮಾರ್, ಕೆ.ಪಿ.ಜೆ.ಪಿ ಉಪಾಧ್ಯಕ್ಷ

ಸಮಿತಿಯಲ್ಲಿ ನಿರ್ಧಾರ
''ಉಪೇಂದ್ರ ಇರುವಿಕೆ ಬಗ್ಗೆ ಸಭೆ ಕರೆದಿದ್ದೇವೆ. ಸಭೆಯಲ್ಲಿ ಕಮಿಟಿ ಏನು ನಿರ್ಧಾರ ತೆಗೆದುಕೊಳ್ಳುತ್ತದೋ, ನೋಡಬೇಕು'' - ಶಿವಕುಮಾರ್, ಕೆ.ಪಿ.ಜೆ.ಪಿ ಉಪಾಧ್ಯಕ್ಷ


Click it and Unblock the Notifications











