twitter
    For Quick Alerts
    ALLOW NOTIFICATIONS  
    For Daily Alerts

    'ಸುಮ್ಮನೆ ಮನೆಯಲ್ಲಿರಿ' ಸ್ಟಾರ್ ನಟರಿಗೆ ಎಚ್ಚರಿಕೆ ನೀಡಿದ ಕೆ.ಆರ್ ಪೇಟೆ ಶಾಸಕ

    |

    Recommended Video

    Lok Sabha Elections 2019 : ಸುಮಲತಾ ಪರ ಪ್ರಚಾರ: ನಟರಿಗೆ ಎಚ್ಚರಿಕೆ ನೀಡಿದ ಕೆ.ಆರ್. ಪೇಟೆ ಶಾಸಕ

    ಮಂಡ್ಯ ಚುನಾವಣಾ ಅಖಾಡಕ್ಕೆ ಸ್ಟಾರ್ ನಟ ದರ್ಶನ್ ಮತ್ತು ಯಶ್ ಧುಮುಕಿರುವುದು ಮಂಡ್ಯ ರಾಜಕೀಯ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಸ್ವತಂತ್ರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡುವುದಾಗಿ ದರ್ಶನ್ ಮತ್ತು ಯಶ್ ಹೇಳಿದ್ದು, ಇದು ಜೆಡಿಎಸ್ ಬೆಂಬಲಿಗರಿಗೆ ನುಂಗಲಾರದ ತುತ್ತಾಗಿದೆ.

    ಸ್ಟಾರ್ ನಟರು ಮಂಡ್ಯಕ್ಕೆ ಎಂಟ್ರಿ ಕೊಟ್ಟಿರುವ ಹಿನ್ನೆಲೆ ಕೆ.ಆರ್ ಪೇಟೆ ಶಾಸಕ ನಾರಾಯಣ ಗೌಡ ''ಮರ್ಯಾದೆಯಾಗಿ ಮನೆಯಲ್ಲಿರಿ, ಇಲ್ಲವಾದಲ್ಲಿ ನಿಮ್ಮ ಆಸ್ತಿ ಪರಿಶೀಲನೆ ಮಾಡಬೇಕಾಗುತ್ತೆ'' ಎಂದು ಎಚ್ಚರಿಕೆ ನೀಡಿದ್ದಾರೆ. ಜೆಡಿಎಸ್ ಶಾಸಕರ ಈ ಹೇಳಿಕೆ ಈಗ ಬಹುದೊಡ್ಡ ಚರ್ಚೆಗೆ ಕಾರಣವಾಗಿದೆ.

    ಅಂದು ಸುದೀಪ್ ತೆಗೆದುಕೊಂಡ ನಿರ್ಧಾರ ಸುಮಲತಾ ಪರ ಪ್ರಚಾರಕ್ಕೆ ಹೋಗದಂತೆ ಕೈ ಕಟ್ಟಿಹಾಕಿದ್ಯಾ?ಅಂದು ಸುದೀಪ್ ತೆಗೆದುಕೊಂಡ ನಿರ್ಧಾರ ಸುಮಲತಾ ಪರ ಪ್ರಚಾರಕ್ಕೆ ಹೋಗದಂತೆ ಕೈ ಕಟ್ಟಿಹಾಕಿದ್ಯಾ?

    ಇದು ಸ್ಟಾರ್ ನಟರಿಗೆ ಎಚ್ಚರಿಕೆನಾ ಅಥವಾ ಬ್ಲಾಕ್ ಮೇಲ್ ಮಾಡುವ ತಂತ್ರನಾ ಎಂಬ ಅನುಮಾನ ಶುರುವಾಗಿದೆ. ಯಾಕಂದ್ರೆ, 'ಸರ್ಕಾರ ನಮ್ದೆ ಇದೆ, ಸುಮ್ಮನಿದ್ರೆ ಒಳ್ಳೆಯದು' ಎಂದು ಪರೋಕ್ಷವಾಗಿ ವಾರ್ನ್ ಮಾಡಿದ್ದಾರೆ. ಅಷ್ಟಕ್ಕೂ, ಶಾಸಕ ನಾರಾಯಣ ಗೌಡ ಹೇಳಿದ್ದೇನು? ಮುಂದೆ ಓದಿ....

    ರಾಜಕೀಯದ ಬಗ್ಗೆ ಮಾತನಾಡುವ ಹಕ್ಕಿಲ್ಲ

    ರಾಜಕೀಯದ ಬಗ್ಗೆ ಮಾತನಾಡುವ ಹಕ್ಕಿಲ್ಲ

    ''ನೀವು ಸಿನಿಮಾದವರು. ಚಿತ್ರರಂಗದ ಬಗ್ಗೆ ಮಾತಾನಾಡಿ. ನಿಮಗೆ ರಾಜಕೀಯದ ಬಗ್ಗೆ ಮಾತನಾಡುವ ಹಕ್ಕಿಲ್ಲ. ದೇವೇಗೌಡರ ಬಗ್ಗೆ ಅಥವಾ ಕುಮಾರಸ್ವಾಮಿ ಅವರ ಬಗ್ಗೆಯೂ ಮಾತನಾಡುವಂತಿಲ್ಲ. ನಮ್ಮ ಸಿನಿಮಾ ನೋಡಿ, ನಮಗೆ ಸಹಕಾರ ನೀಡಿ ಎಂದು ಕೇಳಿಕೊಳ್ಳಬೇಕು. ನಾವೆಲ್ಲ ಇರೋದ್ರಿಂದ ನೀವು ಇರೋದು'' ಎಂದು ಕಿಡಿ ಕಾರಿದ್ದಾರೆ.

    ಸುಮಲತಾ ಪರ ನಿಂತಿರುವ ಸ್ಟಾರ್ ನಟರ ನಡೆ ಪ್ರಶ್ನಿಸಿದ ನಟ ಚೇತನ್ಸುಮಲತಾ ಪರ ನಿಂತಿರುವ ಸ್ಟಾರ್ ನಟರ ನಡೆ ಪ್ರಶ್ನಿಸಿದ ನಟ ಚೇತನ್

    ಆಸ್ತಿ ಪರಿಶೀಲನೆ ಮಾಡಬೇಕಾಗುತ್ತೆ

    ಆಸ್ತಿ ಪರಿಶೀಲನೆ ಮಾಡಬೇಕಾಗುತ್ತೆ

    ''ನೀವು ಗೌರವದಿಂದ ಇದ್ದರೇ ಒಳಿತು. ನಾಳೆ ದಿನ ನೀವು ಮಾಡಿರುವ ಆಸ್ತಿ ಬಗ್ಗೆ ಪರಿಶೀಲನೆ ಮಾಡಬೇಕಾಗುತ್ತೆ. ಸರ್ಕಾರ ನಮ್ದೆ ಇದೆ. ಸೋ, ಸುಮ್ಮನೆ ಮನೆಯಲ್ಲಿದ್ರೆ ಒಳ್ಳೆಯದು'' ಎಂದು ಹೆಸರು ಹೇಳದೇ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

    ಸುದ್ದಿಗೋಷ್ಠಿ ಬಳಿಕ ಸುಮಲತಾಗೆ ಟ್ವೀಟ್ ಮಾಡಿದ ಸುದೀಪ್ ಸುದ್ದಿಗೋಷ್ಠಿ ಬಳಿಕ ಸುಮಲತಾಗೆ ಟ್ವೀಟ್ ಮಾಡಿದ ಸುದೀಪ್

    ಮಂಡ್ಯ ಜನರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ

    ಮಂಡ್ಯ ಜನರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ

    ಶಾಸಕ ನಾರಾಯಣ ಗೌಡ ಅವರು ಹೇಳುವ ಪ್ರಕಾರ, ''ನಟ ದರ್ಶನ್ ಅವರು ಮಂಡ್ಯ ಜನರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಮಂಡ್ಯ ಜನರ ಬಗ್ಗೆ ಏಕವಚನದಲ್ಲಿ ನಿಂದಿಸಿದ್ದಾರೆ. ಇದು ಸಹಜವಾಗಿ ನಮ್ಮ ತಾಳ್ಮೆಯನ್ನ ಕೆರಳಿಸಿದೆ. ಹಾಗಾಗಿ, ನಾವು ಹಾಗೆ ಮಾತನಾಡಿದ್ದೇವೆ'' ಎಂದು ಹೇಳಿದ್ದಾರೆ.

    ನಾವಿಬ್ಬರು ಜೋಡಿ ಎತ್ತು: ಸುದೀಪ್ ಹೇಳಿಕೆಗೆ ದರ್ಶನ್ ಪ್ರತಿಕ್ರಿಯೆ ಹೀಗಿತ್ತುನಾವಿಬ್ಬರು ಜೋಡಿ ಎತ್ತು: ಸುದೀಪ್ ಹೇಳಿಕೆಗೆ ದರ್ಶನ್ ಪ್ರತಿಕ್ರಿಯೆ ಹೀಗಿತ್ತು

    ಆಸ್ತಿ ಬಗ್ಗೆ ಹೇಳಿದ್ದಕ್ಕೆ ಕ್ಷಮೆ ಕೇಳುತ್ತೇನೆ

    ಆಸ್ತಿ ಬಗ್ಗೆ ಹೇಳಿದ್ದಕ್ಕೆ ಕ್ಷಮೆ ಕೇಳುತ್ತೇನೆ

    ಇನ್ನು ಈ ಬಗ್ಗೆ ಟಿವಿ ಮಾಧ್ಯಮದಲ್ಲಿ ಮಾತನಾಡಿದ ಶಾಸಕ ನಾರಾಯಣ ಗೌಡ ಅವರು ''ಮಂಡ್ಯ ಜನರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಕೋಪ ಬಂತು. ಹಾಗಾಗಿ, ಆಸ್ತಿ ಪರಿಶೀಲನೆ ಮಾಡಿಸ್ತೀವಿ ಎಂದು ಹೇಳಿದೆ. ಅದು ಆಕ್ರೋಶದಲ್ಲಿ ಮಾತನಾಡಿದ್ದೆ. ಅದಕ್ಕೆ ಕ್ಷಮೆ ಇರಲಿ. ಅವರ ಆಸ್ತಿಯನ್ನ ಕಟ್ಕೊಂಡು ನಾವೇನು ಮಾಡಲಿ'' ಎಂದು ಕ್ಷಮೆ ಕೇಳಿದ್ದಾರೆ.

    'ಸುಮಲತಾ ಹಿಂದೆ ನಾನು' ಎಂದ ದರ್ಶನ್: ನಿಖಿಲ್ ಬಗ್ಗೆ ದಾಸ ಏನಂದ್ರು?'ಸುಮಲತಾ ಹಿಂದೆ ನಾನು' ಎಂದ ದರ್ಶನ್: ನಿಖಿಲ್ ಬಗ್ಗೆ ದಾಸ ಏನಂದ್ರು?

    English summary
    KR Pete MLA Narayana gowda warned to Challenging star darshan and yash in mandya.
    Wednesday, March 20, 2019, 11:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X