twitter
    For Quick Alerts
    ALLOW NOTIFICATIONS  
    For Daily Alerts

    "ಲೆಗಸಿ ನಮಗೆ ದೊಡ್ಡ ಪ್ರಾಬ್ಲಂ": ಯಶ್ ಉದಾಹರಣೆ ಕೊಟ್ಟು ದರ್ಶನ್ ಹೇಳಿದ್ದೇನು?

    |

    ಚಿತ್ರರಂಗದ ಹಿನ್ನಲೆ ಇದ್ದವರು ಚಿತ್ರರಂಗದಲ್ಲಿ ಗೆಲ್ಲೋದು ಸುಲಭ ಎನ್ನುವ ಮಾತಿದೆ. ಆದರೆ ಈ ಮಾತನ್ನು ನಟ ದರ್ಶನ್ ಒಪ್ಪುವುದಿಲ್ಲ. ಇದಕ್ಕೆ ರಾಕಿಂಗ್ ಸ್ಟಾರ್ ಯಶ್ ಉದಾಹರಣೆ ಕೊಟ್ಟು ವಿವರಿಸಿದ್ದಾರೆ. ಒಬ್ಬ ಹೀರೊ ಮಗನೋ ಇಂಡಸ್ಟ್ರಿಯಲ್ಲಿರುವವರ ಮಕ್ಕಳೋ ಚಿತ್ರರಂಗಕ್ಕೆ ಬಂದರೆ ಬಹಳ ಕಷ್ಟ ಎಂದಿದ್ದಾರೆ.

    ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ಮಗನಾದರೂ ದರ್ಶನ್ ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳಲು ಬಹಳ ಕಷ್ಟಪಡಬೇಕಾಯಿತು. ಈ ಬಗ್ಗೆ ಅವರು ಬಹಳ ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಅವಮಾನ, ಅಪಮಾನ ಎದುರಿಸಿ ಬಾಕ್ಸಾಫೀಸ್ ಸುಲ್ತಾನ್ ಪಟ್ಟಕ್ಕೆ ಏರಿದವರು ದರ್ಶನ್. ಸಾಕಷ್ಟು ಏಳುಬೀಳು ಕಂಡು ಇವತ್ತು ಕನ್ನಡದ ಟಾಪ್ ನಟರ ಸಾಲಿನಲ್ಲಿ ನಿಂತಿದ್ದಾರೆ. ದೊಡ್ಡ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದಾರೆ. ಆದರೆ ಆರಂಭದ ದಿನಗಳಲ್ಲಿ ಪರಿಸ್ಥಿತಿ ಈ ರೀತಿ ಇರಲಿಲ್ಲ. ತಮ್ಮನ್ನು ತಾವು ಸಾಬೀತು ಪಡಿಸಿಕೊಳ್ಳಲು ಪಟ್ಟ ಪಾಡು ಅಷ್ಟಿಷ್ಟಲ್ಲ.

    ದರ್ಶನ್‌ಗೆ ಸುಳ್ಳು ಹೇಳಿ ರೀಮೆಕ್ ಮಾಡಿದ್ದ ಚಾಲಾಕಿ ನಿರ್ದೇಶಕ ಯಾರು? ಸಿಕ್ಕಿ ಬಿದ್ದಿದ್ಹೇಗೆ?ದರ್ಶನ್‌ಗೆ ಸುಳ್ಳು ಹೇಳಿ ರೀಮೆಕ್ ಮಾಡಿದ್ದ ಚಾಲಾಕಿ ನಿರ್ದೇಶಕ ಯಾರು? ಸಿಕ್ಕಿ ಬಿದ್ದಿದ್ಹೇಗೆ?

    'ಮೆಜಿಸ್ಟಿಕ್' ಚಿತ್ರದಲ್ಲಿ ಹೀರೊ ಆಗಿ ನಟಿಸಿದ ಮೇಲೆ ಮತ್ತೆ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಗೆದ್ದರು. ತಂದೆ ತೂಗುದೀಪ ಶ್ರೀನಿವಾಸ್ ಅವರನ್ನು ಮೀರಿಸಿ ಗೆದ್ದು ತೋರಿಸಿದ್ದಾರೆ. ತೂಗುದೀಪ ಲೆಗಸಿಯನ್ನು ಮುಂದುವರೆಸಿಕೊಂಡು ಬರ್ತಿದ್ದಾರೆ. ಆದರೆ ಆ ಲೆಗಸಿಯೇ ನನಗೆ ಕಷ್ಟ ಆಯಿತು ಎಂದು ಗೌರಿಶ್ ಅಕ್ಕಿ ಸ್ಟುಡಿಯೋ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಹೇಳಿದ್ದಾರೆ.

    ತೂಗುದೀಪ ಲೆಗಸಿಯೇ ಪ್ರಾಬ್ಲಂ

    ತೂಗುದೀಪ ಲೆಗಸಿಯೇ ಪ್ರಾಬ್ಲಂ

    ಕಳೆದ 20 ವರ್ಷಗಳಿಂದ ನಿರಂತರವಾಗಿ ಹಿಟ್ ಸಿನಿಮಾಗಳನ್ನು ನೀಡುತ್ತಾ ಚಿತ್ರರಂಗದಲ್ಲಿ ಸ್ಟಾರ್ ನಟನಾಗಿ ಮೆರೆಯುತ್ತಿದ್ದೀರಾ. ತೂಗುದೀಪ ಲೆಗಸಿಯನ್ನು ಮುಂದುವರೆಸುತ್ತಿದ್ದೀರಾ ಎನ್ನುವ ಪ್ರಶ್ನೆಗೆ ದರ್ಶನ್ "ಅದೇ ನಮಗೆ ಪ್ರಾಬ್ಲಂ. ಕಲಾವಿದರ ಮಕ್ಕಳಿಗೆ ಇದು ದೊಡ್ಡ ಪ್ರಾಬ್ಲಂ. ಯಾಕಂದರೆ ಹೋಲಿಕೆ ಶುರುವಾಗುತ್ತದೆ. ನಾನು ನಟಿಸುತ್ತಿದ್ದರೆ ಜನ ನನ್ನನ್ನು ನೋಡುವುದಿಲ್ಲ. ಇವರ ತಂದೆ ಅಷ್ಟು ಚೆನ್ನಾಗಿ ನಟಿಸುತ್ತಿದ್ದರು. ಇವನು ಯಾಕೆ ಹಿಂಗೆ ಎಂದು ಹೋಲಿಕೆ ಮಾಡಿ ನೋಡುತ್ತಾರೆ. ಅದನ್ನು ಮೀರಿ ಮುಂದೆ ಬರುವುದು ಬಹಳ ಕಷ್ಟ" ಎಂದಿದ್ದಾರೆ.

    ಯಶ್ ಏನು ಮಾಡಿದರೂ ನಡೆಯುತ್ತೆ

    ಯಶ್ ಏನು ಮಾಡಿದರೂ ನಡೆಯುತ್ತೆ

    ಲೆಗಸಿಯಿಂದ ಆಗುವ ಸಮಸ್ಯೆ ಬಗ್ಗೆ ಮಾತನಾಡುತ್ತಾ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಉದಾಹರಣೆ ತೆಗೆದುಕೊಂಡಿದ್ದಾರೆ. "ಲೆಗಸಿ ಇದ್ದರೆ ರೆಡ್ ಕಾರ್ಪೆಟ್, ಬಹಳ ಸುಲಭ ಅಂತ ಎಲ್ಲಾ ಅಂದುಕೊಳ್ಳುತ್ತಾರೆ. ಖಂಡಿತ ಇಲ್ಲ. ಉದಾಹರಣೆ ಯಶ್ ಅವರನ್ನು ತೆಗೆದುಕೊಂಡರೆ ಅವರ ತಂದೆಯವರು ಯಾರು ಇಂಡಸ್ಟ್ರಿಗೆ ಸಂಬಂಧಿಸಿದವರು ಅಲ್ಲ. ಅವರು ಏನು ಮಾಡಿದರೂ ನಡೆಯುತ್ತದೆ. ಯಾಕಂದರೆ ಇವರಿಗೆ ಇಂಡಸ್ಟ್ರಿ ಗೊತ್ತಿಲ್ಲ. ಏನೋ ಮಾಡುತ್ತಿದ್ದಾನೆ ಎಂದು ನೋಡುತ್ತಾರೆ. ಆದರೆ ಒಬ್ಬ ಹೀರೊ ಮಗನೋ, ಇಂಡಸ್ಟ್ರಿಯಲ್ಲಿ ಇರುವವರ ಮಕ್ಕಳೋ ಬಂದರೆ ಬಹಳ ಡೇಂಜರ್. ಇದೆಲ್ಲ ನನ್ನ ಸೆಲೆಬ್ರೆಟಿಗಳ ಭಿಕ್ಷೆ" ಎಂದು ದರ್ಶನ್ ಹೇಳಿದ್ದಾರೆ.

    ಜೋಡೆತ್ತುಗಳಾಗಿದ್ದ ದರ್ಶನ್- ಯಶ್

    ಜೋಡೆತ್ತುಗಳಾಗಿದ್ದ ದರ್ಶನ್- ಯಶ್

    ತಾನು ಬೆಳೆದು ತನ್ನವರನ್ನು ಬೆಳೆಸುವ ಗುಣ ದರ್ಶನ್ ಅವರಿಗಿದೆ. ಯಶ್ ಅವರ ಆರಂಭದ ದಿನದಿಂದಲೂ ದರ್ಶನ್ ಬೆಂಬಲವಾಗಿ ನಿಂತಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ದರ್ಶನ್ ಹಾಗೂ ಯಶ್ ಜೋಡೆತ್ತುಗಳಾಗಿ ಸುಮಲತಾ ಅಂಬರೀಶ್ ಪರ ನಿಂತಿದ್ದರು. ಮಂಡ್ಯದ ಮೂಲೆ ಮೂಲೆ ಸುತ್ತಿ ಇವರಿಬ್ಬರು ಸುಮಲತಾ ಪರ ಪ್ರಚಾರ ನಡೆಸಿದ್ದರು. ಇದರ ಬಲದೊಂದಿಗೆ ಅವರು ಚುನಾವಣೆಯಲ್ಲಿ ಗೆದ್ದು ಸಂಸದೆ ಆದರು. ಆ ನಂತರ ದರ್ಶನ್- ಯಶ್ ನಡುವೆ ಆತ್ಮೀಯ ಒಡನಾಟ ಮುಂದುವರೆದಿದೆ.

    ಜನವರಿ 26ಕ್ಕೆ 'ಕ್ರಾಂತಿ' ರಿಲೀಸ್

    ಜನವರಿ 26ಕ್ಕೆ 'ಕ್ರಾಂತಿ' ರಿಲೀಸ್

    ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ವಿ. ಹರಿಕೃಷ್ಣ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ರಚಿತಾ ರಾಮ್ ಮಿಂಚಿದ್ದಾರೆ. ಚಿತ್ರದಲ್ಲಿ ಅಕ್ಷರಕ್ರಾಂತಿಯ ಕಥೆ ಹೇಳಲಾಗುತ್ತಿದೆ. ಶೈಲಜಾ ನಾಗ್ ಹಾಗೂ ಬಿ. ಸುರೇಶ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಜನವರಿ 26ಕ್ಕೆ ಸಿನಿಮಾ 5 ಭಾಷೆಗಳಲ್ಲಿ ತೆರೆಗಪ್ಪಳಿಸಲಿದೆ. ಈಗಾಗಲೇ ಚಿತ್ರತಂಡ ಪ್ರಚಾರ ಶುರು ಮಾಡಿದ್ದು ದರ್ಶನ್ ಕೂಡ ಭಾಗಿ ಆಗಿದ್ದಾರೆ.

    English summary
    Kranti actor Challenging Star Darshan About Kgf Actor Yash Success. Darshan Says Some Time Lagacy will Problem For New commerce. and He Said That He Faced that Problem in initial days. Know.
    Wednesday, November 23, 2022, 9:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X