Darshan Birthday : ದಚ್ಚು ಬರ್ತ್‌ಡೇಗೆ RR ನಗರದ ನಿವಾಸದ ಬಳಿ ಹೇಗಿದೆ ಸಿದ್ಧತೆ? ಸಂಜೆ ಸ್ಪೆಷಲ್ ಬರ್ತ್‌ಡೇ CDP ರಿಲೀಸ್

ಅಭಿಮಾನಿಗಳ ನೆಚ್ಚಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಗುರುವಾರ 46ನೇ ವಸಂತಕ್ಕೆ ದರ್ಶನ್ ಕಾಲಿಡುತ್ತಿದ್ದಾರೆ. ಬಹಳ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಣಗೆ ಸಿದ್ಧತೆ ನಡೀತಿದೆ.

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ದರ್ಶನ್ ಅಭಿಮಾನಿಗಳನ್ನು ಭೇಟಿ ಮಾಡಲು ಕಳೆದೆರಡು ವರ್ಷಗಳಿಂದ ಸಾಧ್ಯವಾಗಿರಲಿಲ್ಲ. ಈ ಬಾರಿ ನೆಚ್ಚಿನ ನಟನನ್ನು ನೋಡಿ ಅಭಿಮಾನಿಗಳು ಕೈಕುಲುಕಿ ಶುಭಾಶಯ ಕೋರಲು ಅವಕಾಶ ಸಿಗಲಿದೆ. ಈಗಾಗಲೇ ಆರ್‌ ಆರ್‌ ನಗರದಲ್ಲಿರುವ ದರ್ಶನ್ ನಿವಾಸದ ಎದುರು ಶಾಮಿಯಾನ ಹಾಕಲಾಗುತ್ತಿದೆ. ಫೆಬ್ರವರಿ 16ರಂದು ಬಹಳ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ದರ್ಶನ್ ನಿವಾಸದ ಎದುರು ಸೇರುವ ನಿರೀಕ್ಷೆ ಇದೆ. 'ಕ್ರಾಂತಿ' ಸಿನಿಮಾ ಸಕ್ಸಸ್ ಅಭಿಮಾನಿಗಳಲ್ಲಿ ಮತ್ತಷ್ಟು ಜೋಶ್ ತುಂಬಿದೆ.

ಮತ್ತೊಂದು ಕಡೆ ಅಭಿಮಾನಿಗಳು ದರ್ಶನ್ ಹುಟ್ಟುಹಬ್ಬಕ್ಕೆ ಸ್ಪೆಷಲ್ CDP ಸಿದ್ಧಪಡಿಸುತ್ತಿದ್ದಾರೆ. ಮತ್ತಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ದರ್ಶನ್ ಹುಟ್ಟುಹಬ್ಬಕ್ಕೆ ತಯಾರಿ

ದರ್ಶನ್ ಹುಟ್ಟುಹಬ್ಬಕ್ಕೆ ತಯಾರಿ

ನಟ ದರ್ಶನ್ ತಮ್ಮ ಅಭಿಮಾನಿಗಳನ್ನು ಸೆಲೆಬ್ರೆಟೀಸ್ ಎಂದು ಕರೆಯುತ್ತಾರೆ. 'ಕ್ರಾಂತಿ' ಚಿತ್ರಕ್ಕೆ ಅಭಿಮಾನಿಗಳ ಬೆಂಬಲವನ್ನು ಮರೆಯೋಕೆ ಸಾಧ್ಯವಿಲ್ಲ ಎಂದು ಹೇಳುತ್ತಾ ಬರ್ತಿದ್ದಾರೆ. ಇತ್ತೀಚೆಗೆ 'ನನ್ನ ಪ್ರೀತಿಯ ಸೆಲೆಬ್ರೆಟೀಸ್' ತಮ್ಮ ಎದೆ ಮೇಲೆ ಹಚ್ಚೆ ಕೂಡ ಹಾಕಿಸಿಕೊಂಡಿದ್ದಾರೆ. ದರ್ಶನ್ ಟ್ಯಾಟೂ ನೋಡಿ ಅಭಿಮಾನಿಗಳು ಕೂಡ 'ಡಿ ದೇವರು' ಎಂದು ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದಾರೆ. ಇನ್ನು ಗುರುವಾರ ಹುಟ್ಟುಹಬ್ಬ ಆಚರಣೆಗೆ ದರ್ಶನ್ ನಿವಾಸದ ಬಳಿ ಸಕಲ ಸಿದ್ಧತೆಗಳು ನಡೀತಿದೆ. ಶಾಮಿಯಾನ ಹಾಕಲಾಗುತ್ತಿದೆ. ಅಂದು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಲಿದ್ದಾರೆ.

ಸಂಜೆ ಸ್ಪೆಷಲ್ CDP ರಿಲೀಸ್

ಸಂಜೆ ಸ್ಪೆಷಲ್ CDP ರಿಲೀಸ್

ಕಳೆದ ಕೆಲ ವರ್ಷಗಳಿಂದ ದರ್ಶನ್ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಕಾಮನ್ ಡಿಪಿ ಸಿದ್ಧಪಡಿಸುತ್ತಿದ್ದಾರೆ. ಇನ್ನು CDP ಟ್ರೆಂಡ್ ವಿಚಾರದಲ್ಲೂ ದರ್ಶನ್ ಅಭಿಮಾನಿಗಳು ಸದ್ದು ಮಾಡುತ್ತಿದ್ದರು. ಆದರೆ ಈ ಬಾರಿ CDP ಟ್ರೆಂಡ್ ಇಲ್ಲ. ಬದಲಿಗೆ ಬರೀ CDP ರಿಲೀಸ್ ಮಾಡಿ ಅಭಿಮಾನಿಗಳು ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಹಾಕಿಕೊಳ್ಳಲಿದ್ದಾರೆ. ಬಹಳ ವಿಶೇಷವಾಗಿ CDP ಡಿಸೈನ್ ಮಾಡಿಸಲಾಗುತ್ತಿದ್ದು ಇಂದು ಸಂಜೆಯೇ ರಿವೀಲ್ ಆಗಲಿದೆ.

ದರ್ಶನ್ ನಿವಾಸಕ್ಕೆ ಉಡುಗೊರೆ

ದರ್ಶನ್ ನಿವಾಸಕ್ಕೆ ಉಡುಗೊರೆ

ಇನ್ನು ಹುಟ್ಟುಹಬ್ಬಕ್ಕೂ ಮೊದಲೇ ದರ್ಶನ್ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ್ದಾರೆ. "ಬ್ಯಾನರ್, ಕೇಕ್ ಹಾಗೂ ಹಾರಗಳನ್ನು" ದಯಮಾಡಿ ತರಬೇಡಿ. ಅದೇ ಹಣದಲ್ಲಿ ಈ ವರ್ಷವೂ ಸಹ ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರ ದವಸ ಧಾನ್ಯಗಳನ್ನು ದಾನ ನೀಡಿ. ಅದನ್ನು ಒಗ್ಗೂಡಿಸಿ ಸೇರಿಸಬೇಕಾದ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು" ಎಂದು ಹೇಳಿದ್ದಾರೆ. ಈಗಾಗಲೇ ಸಾಕಷ್ಟು ಅಭಿಮಾನಿಗಳು ದರ್ಶನ್ ಹೇಳಿದಂತೆ ದವಸ ಧಾನ್ಯವನ್ನು ಅವರ ನಿವಾಸಕ್ಕೆ ತಲುಪಿಸುತ್ತಿದ್ದಾರೆ.

D56 ಟೈಟಲ್ ರಿವೀಲ್

D56 ಟೈಟಲ್ ರಿವೀಲ್

ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ D56 ತಂಡದಿಂದ ಅಭಿಮಾನಿಗಳಿಗೆ ವಿಶೇಷ ಗಿಫ್ಟ್ ಸಿಗುತ್ತಿದೆ. ತರುಣ್ ಸುಧೀರ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಇನ್ನು ಈ ಚಿತ್ರದ ಟೈಟಲ್ ಫೈನಲ್ ಆಗಿಲ್ಲ. ಗುರುವಾರ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲೇ ಟೈಟಲ್ ರಿವೀಲ್ ಮಾಡಲಾಗುತ್ತಿದೆ. ರಾಕ್‌ಲೈನ್‌ ವೆಂಕಟೇಶ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. 'ರಾಬರ್ಟ್' ಕಾಂಬಿನೇಷನ್‌ ಸಿನಿಮಾ ಆಗಿರುವುದರಿಂದ ಭಾರೀ ಕುತೂಹಲ ಅಭಿಮಾನಿಗಳಲ್ಲಿದೆ.

More from Filmibeat

English summary
Kranti Actor Darshan Birthday preparation: Darshan 46th Birthday CDP is going to Release today at 6pm. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X