Don't Miss!
- Sports
IND vs NZ 2nd T20: ಭಾರತ vs ನ್ಯೂಜಿಲೆಂಡ್ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- News
ಫೇಸ್ಬುಕ್ ಪ್ರೀತಿ: ಉತ್ತರ ಪ್ರದೇಶದ ಯುವಕನನ್ನು ಮದುವೆಯಾಗಲು ಸ್ವೀಡನ್ನಿಂದ ಬಂದ ಯುವತಿ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ಹೌದು ನಾನು ಬಾವಿಯಲ್ಲಿರುವ ಕಪ್ಪೆನೇ.. ನನಗೆ ಮಾತೃಭೂಮಿ ಮೊದಲು": ದರ್ಶನ್
ನಟ ದರ್ಶನ್ ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಬಗ್ಗೆ ಮತ್ತೊಮ್ಮೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂತಹ ಸಿನಿಮಾ ಮಾಡಲು ಹೋದರೆ ನಮ್ಮ ಕಥೆ ಹೇಳಲು ಸಾಧ್ಯವಾಗಲ್ಲ. ನ್ಯಾಷನಲ್ ಇಶ್ಯೂ ಬಗ್ಗೆ ಮಾತನಾಡಬೇಕು. ಮಾತೃಭೂಮಿ ಮೊದಲು. ಉಳಿದಿದ್ದು ಆಮೇಲೆ ನೋಡೋಣ ಎಂದಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗ್ತಿದೆ. ಆದರೆ ದರ್ಶನ್ "ನಾನು ಕರ್ನಾಟಕ ಬಿಟ್ಟು ಬೇರೆ ಕಡೆ ಹೋಗಿ ಪ್ರಚಾರ ಮಾಡಲ್ಲ. ಮೇರಾ ಕುತ್ತಾ ಮೇರಾ ಗಲಿ ಶೇರ್ ಹೈ' ಅನ್ನೋ ಗಾದೆ ಇದೆ. ಅಂದರೆ ನಮ್ಮ ಬೀದಿಗೆ ನಮ್ಮ ನಾಯಿನೇ ಅಂತ. ಇದು ನನ್ನ ಟೆರಿಟರಿ. ಇಲ್ಲಿಗೆ ಸಿನಿಮಾ ಮಾಡುತ್ತೀನಿ. ಬೇರೆ ಭಾಷೆಗೆ ಡಬ್ ಮಾಡಿ ಕೊಡ್ತೀನಿ. ಅವರು ಹಾಕಿದ್ರು ಖುಷಿ ಹಾಕದೇ ಇದ್ದರೂ ಖುಷಿ" ಎಂದು ದರ್ಶನ್ ಹೇಳಿದ್ದರು. ಯಾಕೆ ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ ಅನ್ನೋದ್ರ ಬಗ್ಗೆ ಮತ್ತೆ ಮಾತನಾಡಿದ್ದಾರೆ.
ಬಾಯ್ತಪ್ಪಿ
'ಕ್ರಾಂತಿ'
ಸಿನಿಮಾ
ಬಜೆಟ್
ಎಷ್ಟು
ಎಂದು
ಹೇಳಿಬಿಟ್ಟರು
ಚಾಲೆಂಜಿಂಗ್
ಸ್ಟಾರ್
ದರ್ಶನ್!
ನಿಮಗಿರುವ ಕ್ರೇಜ್‌ಗೆ ನೆಕ್ಸ್ಟ್ ಲೆವೆಲ್‌ನಲ್ಲಿ ಸಿನಿಮಾ ಮಾಡಬಹುದು. ಇನ್ನು ದೊಡ್ಡಮಟ್ಟಕ್ಕೆ ಹೋಗಬಹುದು. ನಿಮ್ಮ ಅಭಿಮಾನಿಗಳು ಇದನ್ನೇ ಹೇಳುತ್ತಿರುತ್ತಾರೆ. ದೊಡ್ಡಮಟ್ಟದಲ್ಲಿ ಯಾಕೆ ಸಿನಿಮಾಗಳನ್ನು ಮಾಡುವುದಿಲ್ಲ ಎನ್ನುವ ನಿರೂಪನ ಪ್ರಶ್ನೆಗೆ ದರ್ಶನ್ ಉತ್ತರ ಕೊಟ್ಟಿದ್ದಾರೆ. ಅಪ್‌ಡೇಟ್ ಮಗ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಹೌದು ನಾನು ಬಾವಿಯಲ್ಲಿರುವ ಕಪ್ಪೆ
"ಈಗ ಇರುವ ಲೆವೆಲ್ ಚೆನ್ನಾಗಿದೆ ಅಲ್ವಾ. ದೊಡ್ಡ ಲೆವೆಲ್ ಅಂದರೆ ಏನು? ಸಾಮಾನ್ಯವಾಗಿ ಅಂದುಕೊಳ್ಳಬಹುದು. ನಾನು ಬಾವಿಯಲ್ಲಿರುವ ಕಪ್ಪೆ ಅಂತ. ಹೌದು ನಾನು ಬಾವಿಯಲ್ಲಿರುವ ಕಪ್ಪೆನೇ. ಪ್ಯಾನ್ ಇಂಡಿಯಾ ಸಿನಿಮಾ ಅಂದರೆ ನ್ಯಾಷನಲ್ ಇಶ್ಯೂ ತೆಗೆದುಕೊಳ್ಳಬೇಕು. ಆಗ ಕರ್ನಾಟಕದ ವಿಚಾರ ಹೇಳಲು ಸಾಧ್ಯವಿಲ್ಲ. ನಾರ್ಥ್ ಅವರಿಗೆ ಕನೆಕ್ಟ್ ಮಾಡಬೇಕು, ಈ ಕಡೆ ಮತ್ಯಾರಿಗೋ ಕನೆಕ್ಟ್ ಮಾಡಬೇಕು ಎಂದಾಗ ನ್ಯಾಷನಲ್ ಇಶ್ಯುಗೆ ಹೋಗಬೇಕು. ಎಷ್ಟೋ ಜನಕ್ಕೆ ನ್ಯಾಷನಲ್ ಇಶ್ಯುಗಳೇ ಗೊತ್ತಿರಲ್ಲ"
'ಧರಣಿ'
ಸಾಂಗ್
ಝಲಕ್
ಹೇಗಿದೆ?
ಚಾಲೆಂಜಿಂಗ್
ಸ್ಟಾರ್
ದರ್ಶನ್
ಸೆಲೆಬ್ರೆಟಿಗಳಲ್ಲಿ
ಮನವಿ
ಮಾಡಿದ್ದೇನು?

ಮಾತೃಭೂಮಿ ಮೊದಲು
ಇತ್ತೀಚೆಗೆ ದೆಹಲಿ ಸರ್ಕಾರಿ ಶಾಲೆಗಳ ಬಗ್ಗೆ ವಿಡಿಯೋ ನೋಡ್ತಿದ್ದೆ. ತುಂಬಾ ಚೆನ್ನಾಗಿದೆ. ಅಲ್ಲಿ ಸರ್ಕಾರಿ ಶಾಲೆಗಳೆಲ್ಲಾ ಅಪ್‌ಗ್ರೇಡ್ ಆಗಿದೆ. ತುಂಬಾ ಚೆನ್ನಾಗಿದೆ. ಹೈಟೆಕ್ ಶಾಲೆಗಳ ರೀತಿ ಇದೆ. 'ಕ್ರಾಂತಿ' ಸಿನಿಮಾ ಕೊಟ್ಟರೆ ಅಲ್ಲಿ ನೋಡುತ್ತಾರಾ? ಅವರು ಅಯ್ಯೋ ನಮ್ಮ ಶಾಲೆಗಳು ಇದಕ್ಕಿಂತ ಚೆನ್ನಾಗಿದೆ. ಇವನೇನು ಹೇಳೋಕೆ ಹೋಗ್ತಿದ್ದಾನೆ ಅಂತಾರೆ. ನಾನು ಮಾಡುತ್ತಿರುವುದು ಕನ್ನಡ ಸಿನಿಮಾ. ಕನ್ನಡ ಪ್ರೇಕ್ಷಕರು ಕನೆಕ್ಟ್ ಆಗುತ್ತಾರೆ. ಮಾತೃಭೂಮಿ ಮೊದಲು. ಉಳಿದಿದ್ದೆಲ್ಲಾ ಆಮೇಲೆ ನೋಡಿಕೊಳ್ಳೋಣ" ಎಂದು ದರ್ಶನ್ ಹೇಳಿದ್ದಾರೆ.

ಕಲಿಕೆ ನಿರಂತರ
ಮತ್ತೊಂದು ಪ್ರಶ್ನೆಗೆ "ಕಲಿಕೆ ವಿಚಾರದಲ್ಲಿ ಪ್ರತಿ ದಿನ ಅಪ್‌ಗ್ರೇಡ್ ಆಗುತ್ತಿರಬೇಕು. ಮತ್ತೊಬ್ಬರ ನಟನೆ ನೋಡಿದಾಗ ಅರೇ ತುಂಬಾ ಚೆನ್ನಾಗಿ ಮಾಡಿದ್ದಾರೆ. ನಾವು ಮಾಡಬೇಕು ಎಂದು ಹುಡುಕಾಡುತ್ತಿರುತ್ತೇನೆ. ನಿಜ ಜೀವನದಲ್ಲಿ ನಟಿಸಿ, ತೆರೆಮೇಲೂ ನಟಿಸಿದರೆ ಎರಡು ಒಂದೇ ಅನಿಸುತ್ತಿದೆ. ಸ್ಕ್ರೀನ್ ಮೇಲೆ ನಟಿಸ್ಬೇಕು. ಇವತ್ತು ಪ್ರೇಕ್ಷಕರು ಏನು ನೋಡಲು ಇಷ್ಟಪಡುತ್ತಾರೋ ಅದನ್ನು ಮಾಡಬೇಕು. ಜನ ದುಡ್ಡು ಕೊಟ್ಟು ಸಿನಿಮಾ ನೋಡುತ್ತಾರೆ. ಫ್ರೀಯಾಗಿ ಅಲ್ಲ. ಅದಕ್ಕೆ ನಮ್ಮ ಶ್ರಮ ಇರಲೇಬೇಕು."

ಇತ್ತೀಚಿಗೆ ನೋಡಿದ ಸಿನ್ಮಾ ಯಾವ್ದು?
ಇನ್ನು ಎಲ್ಲಾ ಭಾಷೆಯ ಸಿನಿಮಾಗಳನ್ನು ನೋಡುತ್ತೀರಾ? ಇತ್ತೀಚೆಗೆ ನೋಡಿದ ಸಿನಿಮಾ ಯಾವುದು ಎನ್ನುವ ಪ್ರಶ್ನಗೆ ಉತ್ತರಿಸಿದ ದರ್ಶನ್, "ಎಲ್ಲಾ ಸಿನಿಮಾಗಳನ್ನು ನೋಡುವುದಿಲ್ಲ. ಭಾಷೆ ಅರ್ಥ ಆದರೆ ಮಾತ್ರ ನೋಡುತ್ತೇನೆ. ಸಬ್‌ಟೈಟಲ್ ಓದುತ್ತಾ ಸಿನಿಮಾ ನೋಡಲ್ಲ. ಸಬ್‌ಟೈಟಲ್ ಓದುತ್ತಿದ್ದರೆ ಸರಿಯಾಗಿ ಸಿನಿಮಾ ನೋಡುವುದಕ್ಕೆ ಆಗುವುದಿಲ್ಲ. ಇತ್ತೀಚೆಗೆ ಧನುಷ್ ನಟನೆಯ 'ತಿರುಚಿತ್ರಾಂಬಲಂ' ಸಿನಿಮಾ ನೋಡ್ದೆ" ಎಂದಿದ್ದಾರೆ.