Don't Miss!
- Sports
IND vs NZ 3rd T20: ಶುಭ್ಮನ್ ಗಿಲ್ ಸ್ಫೋಟಕ ಶತಕ; ಕಿವೀಸ್ ವಿರುದ್ಧ ಬೃಹತ್ ಮೊತ್ತ ದಾಖಲಿಸಿದ ಭಾರತ
- Lifestyle
ಬಜೆಟ್‌ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?
- News
Assembly election 2023: ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಇಲ್ಲ: ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಸ್ಪಷ್ಟನೆ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Kranti Advance Booking : 3 ಗಂಟೆಗಳಲ್ಲಿ 25,000 ಟಿಕೆಟ್ ಮಾರಾಟ: ಫಸ್ಟ್ ಡೇ ಬಾಕ್ಸಾಫೀಸ್ ಧೂಳಿಪಟ!
'ಕ್ರಾಂತಿ' ಚಿತ್ರದ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಜೋರಾಗಿದ್ದು ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡುವ ಸುಳಿವು ಸಿಕ್ತಿದೆ. ಬೆಳಗ್ಗೆಯಿಂದಲೇ ಅಭಿಮಾನಿಗಳು ಟಿಕೆಟ್ ಬುಕ್ ಮಾಡಲು ಮುಗಿಬಿದ್ದಿದ್ದು ಈಗಾಗಲೇ ಕೆಲ ಶೋಗಳ ಟಿಕೆಟ್ಸ್ ಸೋಲ್ಡೌಟ್ ಆಗಿದೆ. ಹಲವು ಶೋಗಳು ಫಾಸ್ಟ್ ಫಿಲ್ಲಿಂಗ್ ಆಗ್ತಿದೆ.
ಸ್ಯಾಂಡಲ್‌ವುಡ್‌ನಲ್ಲಿ 'ಕ್ರಾಂತಿ' ಫೀವರ್ ಶುರುವಾಗಿದೆ. ಸಿನಿಮಾ ಬಿಡುಗಡೆಗೆ 3 ದಿನಗಳು ಮಾತ್ರ ಬಾಕಿಯಿದೆ. ಈಗಾಗಲೇ ಆನ್‌ಲೈನ್‌ನಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಅಭಿಮಾನಿಗಳು ಈಗಾಗಲೇ ಟಿಕೆಟ್ ಬುಕ್ ಮಾಡಿಕೊಂಡು ಫಸ್ಟ್ ಡೇ ಸಿನಿಮಾ ನೋಡಲು ಕಾದು ಕೂತಿದ್ದಾರೆ. ಮತ್ತೊಂದು ಕಡೆ ಕಟೌಟ್‌ಗಳನ್ನು ಸಿದ್ಧಪಡಿಸ್ತಿದ್ದಾರೆ. ಗುರುವಾರ ಥಿಯೇಟರ್‌ಗಳ ಅಂಗಳದಲ್ಲಿ ದೊಡ್ಡಮಟ್ಟದಲ್ಲಿ ಸೆಲೆಬ್ರೇಷನ್ ಪ್ಲ್ಯಾನ್ ಮಾಡ್ತಿದ್ದಾರೆ. ಮಾಸ್ ಎಂಟರ್‌ಟೈನರ್ 'ಕ್ರಾಂತಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡಮಟ್ಟದಲ್ಲಿ ಓಪನಿಂಗ್ ಪಡೆದುಕೊಳ್ಳುವ ಸಾಧ್ಯತೆಯಿದೆ.
ವಿ. ಹರಿಕೃಷ್ಣ ನಿರ್ದೇಶನ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ಮಿಂಚಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್, ಸುಮಲತಾ ಅಂಬರೀಶ್, ಆರ್ಮುಗ ರವಿಶಂಕರ್ ತಾರಾಗಣದಲ್ಲಿದ್ದಾರೆ. ಜನವರಿ 26ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ.

3 ಗಂಟೆಗೆ 25,000 ಟಿಕೆಟ್ಸ್ ಸೋಲ್ಡ್
ಬೆಳಗ್ಗೆ ಅಡ್ವಾನ್ಸ್ ಬುಕ್ಕಿಂಗ್ ಓಪನ್ ಆಗುತ್ತಿದ್ದಂತೆ ಅಭಿಮಾನಿಗಳು ಟಿಕೆಟ್ ಬುಕ್ ಮಾಡಲು ಮುಂದಾಗಿದ್ದರು. ಕೆಲವೇ ನಿಮಿಷಗಳಲ್ಲಿ 2 ಅರ್ಲಿ ಮಾರ್ನಿಂಗ್ ಶೋಗಳು ಸೋಲ್ಡೌಟ್ ಆಗಿತ್ತು. 3 ಗಂಟೆಗಳಲ್ಲಿ 25, 000 ಸಾವಿರ ಟಿಕೆಟ್‌ಗಳು ಮಾರಾಟವಾಗಿ ದಾಖಲೆ ಬರೆದಿದೆ. ಟಿಕೆಟ್ ಬುಕ್ಕಿಂಗ್ ಕ್ರೇಜ್ ನೋಡ್ತಿದ್ರೆ, ಸಿನಿಮಾ ಫಸ್ಟ್ ಡೇ ದೊಡ್ಡಮಟ್ಟದಲ್ಲಿ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ. ರಾಜ್ಯಾದ್ಯಂತ ಸಿನಿಮಾ ಭಾರೀ ಓಪನಿಂಗ್ ಸಿಗುವ ಲಕ್ಷಣಗಳು ಕಾಣಿಸ್ತಿದೆ.

13 ಶೋಗಳು ಸೋಲ್ಡೌಟ್
ಈಗಾಗಲೇ 13ಕ್ಕೂ ಹೆಚ್ಚು ಶೋಗಳ ಟಿಕೆಟ್ ಸೋಲ್ಡೌಟ್ ಆಗಿದೆ. ಬೆಳ್ಳಂ ಬೆಳಗ್ಗೆ 5.50, ಹಾಗೂ 6 ಗಂಟೆಗೆ ಮೊದಲ ಪ್ರದರ್ಶನ ಶುರುವಾಗಲಿದೆ. ಸೂರ್ಯ ಹುಟ್ಟುವ ಸಮಯಕ್ಕೆ ತೆರೆಮೇಲೆ 'ಕ್ರಾಂತಿ' ದರ್ಶನವಾಗಲಿದೆ. ಕೆಜಿ ರಸ್ತೆಯ ಅನುಪಮಾ ಹಾಗೂ ಮಾಗಡಿ ರಸ್ತೆಯ ವೀರೇಶ್ ಥಿಯೇಟರ್‌ನಲ್ಲಿ ಬೆಳಗಿನ 2 ಶೋಗಳು ಹೌಸ್‌ಫುಲ್ ಆಗೋಗಿದೆ. ಇನ್ನುಳಿದಂತೆ ಮೋಹನ್, ಉಲ್ಲಾಸ್, ಪ್ರಸನ್ನ, ಸಿದ್ದಲಿಂಗೇಶ್ವರ ಸೇರಿದಂತೆ ಹಲವೆಡೆ ಅರ್ಲಿ ಮಾರ್ನಿಂಗ್ ಶೋಗಳು ಫುಲ್ ಆಗಿದೆ.

ಪ್ರೀಮಿಯರ್ ಶೋಗಳು ಇಲ್ಲ
ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾಗಳ ಪ್ರೀಮಿಯರ್ ಶೋಗಳು ನಡೀತಿವೆ. ಒಂದು ದಿನ ಮೊದಲೇ ಸ್ಪೆಷಲ್ ಶೋಗಳನ್ನು ಏರ್ಪಡಿಸಲಾಗುತ್ತಿದೆ. 777 ಚಾರ್ಲಿ, ಗಂಧದಗುಡಿ ಸೇರಿದಂತೆ ಹಲವು ಸಿನಿಮಾಗಳ ಪ್ರೀಮಿಯರ್ ಶೋಗಳು ಯಶಸ್ವಿಯಾಗಿತ್ತು. ಆದರೆ 'ಕ್ರಾಂತಿ' ತಂಡ ಪ್ರೀಮಿಯರ್ ಶೋ ಮಾಡ್ತಿಲ್ಲ. ಗುರುವಾರ ಬೆಳ್ಳಂ ಬೆಳಗ್ಗೆ ಸಿನಿಮಾ ರಿಲೀಸ್ ಮಾಡಲಾಗುತ್ತಿದೆ. ಹಾಗಾಗಿ ಅರ್ಲಿ ಮಾರ್ನಿಂಗ್ ಶೋ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

ಅಕ್ಷರ 'ಕ್ರಾಂತಿ'ಯ ಕಥೆ
ಒಂದೊಳ್ಳೆ ಸಂದೇಶದ ಜೊತೆಗೆ ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಬೆರಸಿ 'ಕ್ರಾಂತಿ' ಸಿನಿಮಾ ಕಟ್ಟಿಕೊಡಲಾಗಿದೆ. ಈಗಾಗಲೇ ಚಿತ್ರದ 4 ಸಾಂಗ್ಸ್, ಟ್ರೈಲರ್ ರಿಲೀಸ್ ಆಗಿ ಹಿಟ್ ಆಗಿದೆ. ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿಗತಿ ಬಗ್ಗೆ ಚಿತ್ರದಲ್ಲಿ ಚರ್ಚಿಸಲಾಗಿದ್ದು. ದರ್ಶನ್ ಚಿತ್ರದಲ್ಲಿ ಎನ್‌ಆರ್‌ಐ ಕ್ರಾಂತಿ ರಾಯಣ್ಣ ಎನ್ನುವ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಅಂದಾಜು 50 ಕೋಟಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ.