twitter
    For Quick Alerts
    ALLOW NOTIFICATIONS  
    For Daily Alerts

    Kranti Day 1 Box Office Collection : 'ಕ್ರಾಂತಿ' ಫಸ್ಟ್ ಡೇ ಕಲೆಕ್ಷನ್ ಎಷ್ಟು? ಸಿನಿಮಾ ಭವಿಷ್ಯ ಏನಾಗಲಿದೆ?

    |

    ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಗಣರಾಜ್ಯೋತ್ಸವದ ದಿನ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿದ್ದ ಕಾರಣ ಓಪನಿಂಗ್ ಕೂಡ ಜೋರಾಗಿತ್ತು. ಆದರೆ ಮುಂದಿನ ದಿನಗಳಲ್ಲಿ ಸಿನಿಮಾ ಗಳಿಕೆ ಏನಾಗುತ್ತೋ ಎನ್ನುವ ಭಯ ಕೆಲವರಿಗೆ ಶುರುವಾಗಿದೆ.

    ಒಂದೂವರೆ ವರ್ಷದಿಂದ 'ಕ್ರಾಂತಿ' ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇತ್ತು. ಲೇಟ್ ಆದರೂ ಚಾಲೆಂಜಿಂಗ್ ಸ್ಟಾರ್ ಲೇಟೆಸ್ಟ್ ಆಗಿ ಬರ್ತಾರೆ ಎನ್ನಲಾಗಿದೆ. ಚಿತ್ರದಲ್ಲಿ ಅಕ್ಷರ ಕ್ರಾಂತಿಯ ಕಥೆ ಹೇಳಲಾಗಿದೆ. ಖಾಸಗಿ ಶಾಲೆಗಳನ ಮಾಫಿಯಾ ವಿರುದ್ಧ ಹೋರಾಡುವ ನಾಯಕನಾಗಿ ದರ್ಶನ್ ಅಬ್ಬರಿಸಿದ್ದಾರೆ. ದರ್ಶನ್ ಅಭಿಮಾನಿಗಳು ಕೇಳುವ ಎಲ್ಲಾ ಕಮರ್ಷಿಯಲ್ ಅಂಶಗಳು ಚಿತ್ರದಲ್ಲಿದೆ. ದೊಡ್ಡಮಟ್ಟದಲ್ಲಿ ಸಂಭ್ರಮಾಚರಣೆ ಮಾಡಿ ಅಭಿಮಾನಿಗಳು ಚಿತ್ರವನ್ನು ಸ್ವಾಗತಿಸಿದ್ದಾರೆ. ಮೊದಲ ದಿನ ಬೆಳ್ಳ ಬೆಳಗ್ಗೆ 6 ಗಂಟೆಗೆ ಮೊದಲ ಶೋ ಆರಂಭವಾಗಿತ್ತು.

    ಕ್ರಾಂತಿ ಮೊದಲ ದಿನದ ಬುಕ್ ಮೈ ಶೋ, ಐಎಂಡಿಬಿ, ಗೂಗಲ್‌ ರೇಟಿಂಗ್; ಹಿಟ್ಟಾ, ಫ್ಲಾಪಾ?ಕ್ರಾಂತಿ ಮೊದಲ ದಿನದ ಬುಕ್ ಮೈ ಶೋ, ಐಎಂಡಿಬಿ, ಗೂಗಲ್‌ ರೇಟಿಂಗ್; ಹಿಟ್ಟಾ, ಫ್ಲಾಪಾ?

    ಫಸ್ಟ್ ಡೇ ಅಡ್ವಾನ್ಸ್ ಬುಕ್ಕಿಂಗ್‌ಗೆ ಸಿಕ್ಕ ರೆಸ್ಪಾನ್ಸ್ ನೋಡಿ ಸಿನಿಮಾ ಕಲೆಕ್ಷನ್ ಎಷ್ಟು ಎನ್ನುವ ಲೆಕ್ಕಾಚಾರ ಶುರುವಾಗಿದೆ. ಬೆಂಗಳೂರು, ಮೈಸೂರು ಸೇರದಂತೆ ಕೆಲ ಭಾಗಗಳಲ್ಲಿ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಹಾಗಾದರೆ ಫಸ್ಟ್ ಡೇ ಕಲೆಕ್ಷನ್ ಎಷ್ಟು ? ಮುಂದೆ ಓದಿ.

    ಮೊದಲ ದಿನ ₹11 ಕೋಟಿ ಗಳಿಕೆ

    ಮೊದಲ ದಿನ ₹11 ಕೋಟಿ ಗಳಿಕೆ

    'ಕ್ರಾಂತಿ' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಅಭಿಮಾನಿಗಳನ್ನು ಸಿನಿಮಾ ರಂಜಿಸಿದರೂ ಎಲ್ಲಾ ವರ್ಷದ ಪ್ರೇಕ್ಷಕರನ್ನು ತೃಪ್ತಿಪಡಿಸುವಲ್ಲಿ ಸಿನಿಮಾ ಸೋತಿದೆ. ದರ್ಶನ್ ಒನ್‌ಮ್ಯಾನ್‌ ಶೋಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನುಳಿದಂತೆ ಸಾಕಷ್ಟು ವಿಭಾಗಗಳಲ್ಲಿ ಸಿನಿಮಾ ವೀಕ್ ಎನಿಸಿಕೊಂಡಿದೆ. ಮೊದಲ ದಿನಕ್ಕೆ ಅಡ್ವಾನ್ಸ್ ಬುಕ್ಕಿಂಗ್ ಅದ್ಭುತವಾಗಿತ್ತು. ಆದರೂ ಮೊದಲ ದಿನ 600ಕ್ಕೂ ಅಧಿಕ ಶೋಗಳು ಫುಲ್ ಆಗಿತ್ತು. ಹಾಗಾಗಿ ಮೊದಲ ದಿನ ಸಿನಿಮಾ ಅಂದಾಜು 11 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನುವುದು ಬಾಕ್ಸಾಫೀಸ್‌ ಪಂಡಿತರ ಲೆಕ್ಕಾಚಾರ.

    ರಿಲೀಸ್ ಡೇ ಹೆಚ್ಚು ಗಳಿಸಿದ 5 ಕನ್ನಡ ಚಿತ್ರಗಳಾವುವು? ಕ್ರಾಂತಿ ನಂ.1 ಆಗಲು ಎಷ್ಟು ಗಳಿಸಬೇಕು?ರಿಲೀಸ್ ಡೇ ಹೆಚ್ಚು ಗಳಿಸಿದ 5 ಕನ್ನಡ ಚಿತ್ರಗಳಾವುವು? ಕ್ರಾಂತಿ ನಂ.1 ಆಗಲು ಎಷ್ಟು ಗಳಿಸಬೇಕು?

    ಮೈಸೂರಿನಲ್ಲಿ ಭರ್ಜರಿ ಕಲೆಕ್ಷನ್

    ಮೈಸೂರಿನಲ್ಲಿ ಭರ್ಜರಿ ಕಲೆಕ್ಷನ್

    ಆವರೇಟ್ ಟಾಕ್ ಬಂದಿದ್ದರೂ 'ಕ್ರಾಂತಿ' ಸಿನಿಮಾ ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಬೆಂಗಳೂರು ಬಿಟ್ಟರೆ ಮೈಸೂರಿನಲ್ಲಿ 'ಕ್ರಾಂತಿ' ಫೀವರ್ ಜೋರಾಗಿತ್ತು. ಅದಕ್ಕೆ ತಕ್ಕಂತೆ ಶೋಗಳು, ಬುಕ್ಕಿಂಗ್ ನಡೆದಿತ್ತು. ಮೊದಲ ದಿನ ಮೈಸೂರಿನಲ್ಲಿ 'ಕ್ರಾಂತಿ' ಅಂದಾಜು 83 ಲಕ್ಷಕ್ಕೂ ಅಧಿಕ ಕಲೆಕ್ಷನ್ ಮಾಡಿದೆ. ಈ ಹಿಂದೆ 'KGF- 2' ಹಾಗೂ 'ಜೇಮ್ಸ್' ಸಿನಿಮಾಗಳು ಮಾತ್ರ ಮೊದಲ ದಿನ ಮೈಸೂರಿನಲ್ಲಿ ಒಂದು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದವು. 3ನೇ ಸ್ಥಾನದಲ್ಲಿ 'ಕ್ರಾಂತಿ' ನಿಂತಿದೆ.

    2ನೇ ದಿನ ಬುಕ್ಕಿಂಗ್ ಹೇಗಿದೆ?

    2ನೇ ದಿನ ಬುಕ್ಕಿಂಗ್ ಹೇಗಿದೆ?

    ಗಣರಾಜ್ಯೋತ್ಸವ ರಜೆ ಹಿನ್ನೆಲೆಯಲ್ಲಿ ಮೊದಲ ದಿನ ಪ್ರೇಕ್ಷಕರು ದೊಡ್ಡಮಟ್ಟದಲ್ಲಿ 'ಕ್ರಾಂತಿ' ಸಿನಿಮಾ ನೋಡಲು ಮುಗಿಬಿದ್ದಿದ್ದರು. ಹಾಗಾಗಿ ಬುಕ್ಕಿಂಗ್, ಕಲೆಕ್ಷನ್ ಎಲ್ಲವೂ ಜೋರಾಗಿತ್ತು. 2ನೇ ದಿನ ಕೆಲಸದ ದಿನವಾಗಿರುವುದರಿಂದ ಬುಕ್ಕಿಂಗ್‌ಗೆ ಒಳ್ಳೆ ಪ್ರತಿಕ್ರಿಯೆ ಸಿಗುತ್ತಿಲ್ಲ. ಅಲ್ಲಲ್ಲಿ ಕೆಲ ಶೋಗಳು ಫಾಸ್ಟ್ ಫಿಲ್ಲಿಂಗ್ ಆಗ್ತಿದೆ. ಒಂದೆರಡು ಶೋಗಳು ಮಾತ್ರ ಈವರೆಗೆ ಫುಲ್ ಆಗಿದೆ. 2ನೇ ದಿನದ ಕಲೆಕ್ಷನ್ ಗಣನೀಯವಾಗಿ ಇಳಿಕೆಯಾಗುವ ಲೆಕ್ಕಾಚಾರ ನಡೀತಿದೆ.

    ವೀಕೆಂಡ್ ಮೇಲೆ 'ಕ್ರಾಂತಿ' ಕಣ್ಣು

    ವೀಕೆಂಡ್ ಮೇಲೆ 'ಕ್ರಾಂತಿ' ಕಣ್ಣು

    ಯಾವುದೇ ಚಿತ್ರದ ಭವಿಷ್ಯ ಗೊತ್ತಾಗುವುದು ಮೊದಲ ವೀಕೆಂಡ್‌ನಲ್ಲಿ. ಈ ವೀಕೆಂಡ್‌ನಲ್ಲಿ 'ಕ್ರಾಂತಿ' ಸಿನಿಮಾ ಯಾವ ರೀತಿ ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಸೆಳೆಯುತ್ತೆ ಎನ್ನುವುದರ ಮೇಲೆ ಸಿನಿಮಾ ಗೆಲ್ಲುತ್ತಾ ಸೋಲುತ್ತಾ? ಎನ್ನುವುದು ಗೊತ್ತಾಗಲಿದೆ. ಬುಕ್‌ಮೈ ಶೋ, ಐಎಂಡಿಬಿನಲ್ಲೂ ಚಿತ್ರಕ್ಕೆ ಒಳ್ಳೆ ರೇಟಿಂಗ್ ಸಿಕ್ಕಿದೆ. ಅಂದಾಜು 50 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ 'ಕ್ರಾಂತಿ' ಸಿನಿಮಾ ಗೆಲುವಿನ ದಡ ಸೇರಲು ಬಹಳ ದೂರ ಕ್ರಮಿಸಬೇಕಿದೆ. ಮುಂದಿನ ವಾರದ ವೇಳೆಗೆ ಸಿನಿಮಾ ಫಲಿತಾಂಶ ಏನಾಗುತ್ತದೆ ಎನ್ನುವುದು ಗೊತ್ತಾಗಲಿದೆ.

    English summary
    Darshan Starrer Kranti Crossed 11 crore on its first day at the box office. This figure is low considering the expectations are always high from an Darshan film. Know more.
    Friday, January 27, 2023, 8:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X