For Quick Alerts
  ALLOW NOTIFICATIONS  
  For Daily Alerts

  ಅತಿಹೆಚ್ಚು ಮುಂಜಾನೆ ಪ್ರದರ್ಶನಗಳು: ಕೆಜಿಎಫ್ 1 ಹಿಂದಿಕ್ಕಿದ 'ಕ್ರಾಂತಿ' ಜೇಮ್ಸ್ ದಾಖಲೆ ಮುರಿಯುತ್ತಾ?

  |

  ಕನ್ನಡದ ಬಹು ನಿರೀಕ್ಷಿತ ಚಿತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಕ್ರಾಂತಿ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಕ್ರಾಂತಿ ಇದೇ ಗುರುವಾರ ( ಜನವರಿ 26 ) ಗಣರಾಜ್ಯೋತ್ಸವದ ಪ್ರಯುಕ್ತ ಚಿತ್ರಮಂದಿರದ ಅಂಗಳಕ್ಕೆ ಬರುತ್ತಿದೆ. ಇನ್ನು 2021ರ ಮಾರ್ಚ್ ತಿಂಗಳ ಬಳಿಕ ತೆರೆ ಕಾಣುತ್ತಿರುವ ದರ್ಶನ್ ನಟನೆಯ ಚಿತ್ರ ಇದಾಗಿದ್ದು ನಿರೀಕ್ಷೆ ದೊಡ್ಡ ಮಟ್ಟದಲ್ಲಿದೆ.

  ಬಹು ದಿನಗಳ ಬಳಿಕ ಬಿಡುಗಡೆಯಾಗುತ್ತಿರುವ ಕಾರಣದ ಜತೆಗೆ ಕರ್ನಾಟಕದ ಸುದ್ದಿ ಮಾಧ್ಯಮಗಳು ಕ್ರಾಂತಿ ಚಿತ್ರದ ಬಗ್ಗೆ ಯಾವುದೇ ಸುದ್ದಿ ಪ್ರಸಾರ ಮಾಡದೇ ಇರಲು ನಿರ್ಧರಿಸಿರುವುದೂ ಸಹ ಚಿತ್ರದ ಮೇಲೆ ದರ್ಶನ್ ಅಭಿಮಾನಿಗಳಿಗೆ ವಿಶೇಷ ಕಾಳಜಿ ಹುಟ್ಟಲು ಕಾರಣವಾಗಿದೆ. ಹೀಗಾಗಿ ಸ್ವತಃ ಅಭಿಮಾನಿಗಳೇ ಕ್ರಾಂತಿ ಚಿತ್ರದ ಪ್ರಚಾರವನ್ನು ಮಾಡಿದ್ದು, ಚಿತ್ರವನ್ನು ಗೆಲ್ಲಿಸಿ ವಿರೋಧಿಗಳನ್ನು ಸೋಲಿಸುವ ಹೊಸ್ತಿಲಲ್ಲಿದ್ದಾರೆ.

  ಇನ್ನು ಸ್ಟಾರ್ ನಟನ ಚಿತ್ರವೊಂದು ಬಿಡುಗಡೆಯಾಗುತ್ತಿದ್ದರೆ ಎಂದರೆ ಈ ಹಿಂದಿನ ಬೇರೆ ನಟರ ಚಿತ್ರಗಳ ದಾಖಲೆಗಳನ್ನು ಮುರಿದು ಹಾಕುವುದು ಹಾಗೂ ಮೈಲಿಗಲ್ಲನ್ನು ಹಿಂದಿಕ್ಕುವುದು ಸಹಜ. ಅದರಂತೆ ಕ್ರಾಂತಿ ಚಿತ್ರ ಕೂಡ ಹಲವು ಚಿತ್ರಗಳ ಹಳೆ ದಾಖಲೆಗಳನ್ನು ಮುರಿದು ಹಾಕುತ್ತಿದೆ ಹಾಗೂ ಮೈಲಿಗಲ್ಲುಗಳನ್ನು ಹಿಂದಿಕ್ಕಿ ಹೊಸ ಮೈಲಿಗಲ್ಲನ್ನು ನೆಡುತ್ತಿದೆ. ಆ ಪೈಕಿ ಬೆಂಗಳೂರು ನಗರದಲ್ಲಿ ಅತಿಹೆಚ್ಚು ಮುಂಜಾನೆ ಪ್ರದರ್ಶನಗಳ ( Early Morning Show ) ದಾಖಲೆಯೂ ಸಹ ಒಂದು. ಬೆಂಗಳೂರಿನಲ್ಲಿ ಅತಿಹೆಚ್ಚು ಮುಂಜಾನೆ ಪ್ರದರ್ಶನಗಳನ್ನು ಪಡೆದುಕೊಂಡ ಚಿತ್ರಗಳ ಪಟ್ಟಿಯಲ್ಲಿ ಸದ್ಯ ಕ್ರಾಂತಿ ಚಿತ್ರ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಈ ದಾಖಲೆಯ ಸಂಪೂರ್ಣ ಪಟ್ಟಿ ಈ ಕೆಳಕಂಡಂತಿದೆ..

  ಮುಂಜಾನೆ ಪ್ರದರ್ಶನಗಳೆಂದರೇನು?

  ಮುಂಜಾನೆ ಪ್ರದರ್ಶನಗಳೆಂದರೇನು?

  ಸಾಮಾನ್ಯವಾಗಿ ಚಿತ್ರದ ಪ್ರದರ್ಶನಗಳು ಆರಂಭವಾಗುವುದು ಬೆಳಗಿನ ಪ್ರದರ್ಶನಗಳ ಮೂಲಕ. ಎಲ್ಲೆಡೆ ಹತ್ತು ಗಂಟೆ ಅಥವಾ ಹತ್ತೂವರೆಗೆ ಈ ಬೆಳಗಿನ ಪ್ರದರ್ಶನಗಳು ಆರಂಭಗೊಳ್ಳಲಿದ್ದು, ಇದಕ್ಕೂ ಮುನ್ನ ಅಭಿಮಾನಿಗಳಿಗಾಗಿ ಬಿಡುಗಡೆ ದಿನ ನಡೆಸುವ ಹೆಚ್ಚುವರಿ ಪ್ರದರ್ಶನಗಳನ್ನು ಮುಂಜಾನೆ ಪ್ರದರ್ಶನಗಳು ಎನ್ನಲಾಗುತ್ತದೆ. ಬೆಳಗ್ಗೆ 9 ಗಂಟೆಯ ಒಳಗೆ ಆರಂಭವಾಗುವ ಪ್ರದರ್ಶನಗಳನ್ನು ಮುಂಜಾನೆ ಪ್ರದರ್ಶನಗಳ ಅಡಿಯಲ್ಲಿ ಪರಿಗಣಿಸಲಾಗುತ್ತದೆ.

  ಮೂರನೇ ಸ್ಥಾನಕ್ಕೇರಿದ ಕ್ರಾಂತಿ

  ಮೂರನೇ ಸ್ಥಾನಕ್ಕೇರಿದ ಕ್ರಾಂತಿ

  ಸದ್ಯ ಕ್ರಾಂತಿ ಚಿತ್ರ ಬೆಂಗಳೂರಿನಾದ್ಯಂತ ಬಿಡುಗಡೆ ದಿನದಂದು 108 ಮುಂಜಾನೆ ಪ್ರದರ್ಶನವನ್ನು ಪಡೆದುಕೊಂಡಿದ್ದು, 107 ಪ್ರದರ್ಶನಗಳನ್ನು ಪಡೆದುಕೊಂಡಿದ್ದ ಕೆಜಿಎಫ್ ಚಾಪ್ಟರ್ 1 ಚಿತ್ರವನ್ನು ಹಿಂದಿಕ್ಕಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಈ ಪಟ್ಟಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಜೇಮ್ಸ್ ಚಿತ್ರ 149 ಪ್ರದರ್ಶನಗಳ ಜತೆಗೆ ಎರಡನೇ ಸ್ಥಾನದಲ್ಲಿದ್ದರೆ, 255 ಮುಂಜಾನೆ ಪ್ರದರ್ಶನಗಳನ್ನು ಕಂಡಿದ್ದ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಈ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ.

  ಇಲ್ಲಿದೆ ಸಂಪೂರ್ಣ ಪಟ್ಟಿ

  ಇಲ್ಲಿದೆ ಸಂಪೂರ್ಣ ಪಟ್ಟಿ

  ಬೆಂಗಳೂರು ನಗರದಲ್ಲಿ ಅತಿಹೆಚ್ಚು ಮುಂಜಾನೆ ಪ್ರದರ್ಶನಗಳನ್ನು ಪಡೆದುಕೊಂಡ ಚಂದನವನದ ಟಾಪ್ 10 ಚಿತ್ರಗಳ ಪಟ್ಟಿ ಈ ಕೆಳಕಂಡಂತಿದೆ..

  1. ಕೆಜಿಎಫ್ ಚಾಪ್ಟರ್ 2 - 255 ಮುಂಜಾನೆ ಪ್ರದರ್ಶನಗಳು

  2. ಜೇಮ್ಸ್ - 149 ಮುಂಜಾನೆ ಪ್ರದರ್ಶನಗಳು

  3. ಕ್ರಾಂತಿ - 108 ಮುಂಜಾನೆ ಪ್ರದರ್ಶನಗಳು

  4. ಕೆಜಿಎಫ್ ಚಾಪ್ಟರ್ 1 - 107 ಮುಂಜಾನೆ ಪ್ರದರ್ಶನಗಳು

  5. ಪೈಲ್ವಾನ್ - 88 ಮುಂಜಾನೆ ಪ್ರದರ್ಶನಗಳು

  6. ಗಂಧದ ಗುಡಿ - 71 ಮುಂಜಾನೆ ಪ್ರದರ್ಶನಗಳು

  7. ಯುವರತ್ನ - 66 ಮುಂಜಾನೆ ಪ್ರದರ್ಶನಗಳು

  8. ಕುರುಕ್ಷೇತ್ರ - 63 ಮುಂಜಾನೆ ಪ್ರದರ್ಶನಗಳು

  9. ಯಜಮಾನ - 62 ಮುಂಜಾನೆ ಪ್ರದರ್ಶನಗಳು

  10. ರಾಬರ್ಟ್ - 56 ಮುಂಜಾನೆ ಪ್ರದರ್ಶನಗಳು

  English summary
  Kranti climbs to 3rd place in highest number of early morning shows at Bangalore record. Read on
  Tuesday, January 24, 2023, 12:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X