ಸಪ್ನದಲ್ಲಿ ಕೆಜಿಎಫ್ 2, ಕ್ರಾಂತಿ ಕಥೆ ಏನು? ಬೆಂಗಳೂರಿನ ಯಾವ ಮುಖ್ಯ ಚಿತ್ರಮಂದಿರದಲ್ಲಿ ಯಾವ ಚಿತ್ರ?

ಸಿನಿ ರಸಿಕರ ನೆಚ್ಚಿನ ಮತ್ತೊಂದು ಶುಕ್ರವಾರ ಮತ್ತೆ ಬಂದಿದೆ. ಹೌದು, ಈ ವರ್ಷದ ಮೂರನೇ ತಿಂಗಳ ಎರಡನೇ ಶುಕ್ರವಾರ ಬಂದಿದ್ದು, ಕನ್ನಡದಲಲ್ಲಿ ಹಲವಾರು ಯುವ ತಂಡಗಳ ಚಿತ್ರಗಳು ತೆರೆ ಕಂಡಿವೆ. ಇಂದು ಮಾರ್ಚ್ 10ರ ಶುಕ್ರವಾರದಂದು ಕನ್ನಡದಲ್ಲಿ ಒಂದು ರಾಬರಿ ಕಥೆ, ಭಿಕ್ಷುಕ, ಚೌಕಾಬಾರ, ಗಡಿ, ಮಂಡಲ ಹಾಗೂ ಮೇರಿ ಎಂಬ ಕನ್ನಡ ಸಿನಿಮಾಗಳು ಬೆಳ್ಳಿ ತೆರೆಗೆ ಬಂದಿವೆ.‌ ಅತ್ತ ತೆಲುಗಿನಲ್ಲಿ ಸಿಬಿಐ ಸನಾತನ್, ಟ್ಯಾಕ್ಸಿ, ವಾಡೆವಡು, 65, ಪುಲಿ, ಮಿಸ್ಟರ್ ಕಲ್ಯಾಣ್, ನೇಡೆ ವಿಡುದಲ ಹಾಗೂ ದೋಚೆವರೆವರುರಾ ಚಿತ್ರಗಳು‌ ಬಿಡುಗಡೆಗೊಂಡಿವೆ.

ತಮಿಳಿನಲ್ಲಿ ಜಯಮ್ ರವಿ ನಟನೆಯ ಅಖಿಲನ್, ಕನ್ನಡದ ಆ ಕರಾಳ ರಾತ್ರಿ ಚಿತ್ರದ ರಿಮೇಕ್ ಕೊಂಡ್ರಾಲ್ ಪಾವಮ್, ಇರುಂಬನ್, ಡ್ಯಾಡ, ಮೆಮೊರಿಸ್ ಹಾಗೂ ಬ್ಯೂಟಿ ಎಂಬ ಸಿನಿಮಾಗಳು ರಿಲೀಸ್ ಆಗ್ತಿವೆ. ಬಾಲಿವುಡ್‌ನಲ್ಲಿ ಲೋಹರ್ದಗ, ಮಲಯಾಳಂನಲ್ಲಿ ದುರ್ಮುಗಂ, ಆಲಂಕಂ ಹಾಗೂ ಖಾಲಿಪರ್ಸ್ ಆಫ್ ಬಿಲಿಯನೈರ್ಸ್ ಚಿತ್ರಗಳು ಇಂದು ( ಮಾರ್ಚ್ 10 ) ತೆರೆಗೆ ಬಂದಿವೆ.

Kranti completes 44 days in main theatre and heading towards 50 days; KGF 2 re released in Sapna

ಹೀಗೆ ಈ ಹೊಸ ಚಿತ್ರಗಳ ಜತೆಗೆ ಕಳೆದ ವರ್ಷ ಬಾಕ್ಸ್ ಆಫೀಸ್‌ ಧೂಳ್ ಎಬ್ಬಿಸಿದ ಚಿತ್ರಗಳೂ ಸಹ ಈ ವಾರ ಮರುಬಿಡುಗಡೆಗೊಳ್ಳುತ್ತಿವೆ. ಹೌದು, ಕೆಜಿಎಫ್ ಚಾಪ್ಟರ್ 2 ಹಾಗೂ ಆರ್‌ ಆರ್ ಆರ್ ರೀತಿಯ ದೊಡ್ಡ ಚಿತ್ರಗಳು ಮರು ಬಿಡುಗಡೆಯಾಗಿವೆ. ಆರ್ ಆರ್ ಆರ್ ತೆಲುಗು ರಾಜ್ಯಗಳಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಗೊಂಡಿದ್ದರೆ, ಕೆಜಿಎಫ್ ಚಾಪ್ಟರ್ 2 ಚಿತ್ರ ಬೆಂಗಳೂರಿನ ಕೆಲ ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ.

ಹೀಗೆ ಹೊಸ ಹಾಗೂ ಹಳೆಯ ಚಿತ್ರಗಳು ಬಿಡುಗಡೆಯಾಗಿರುವ ಮಾರ್ಚ್ ತಿಂಗಳ ಎರಡನೇ ಶುಕ್ರವಾರದಂದು ಬೆಂಗಳೂರಿನ ಕೆಜಿ ರಸ್ತೆಯ ಯಾವ ಮುಖ್ಯ ಚಿತ್ರಮಂದಿರದಲ್ಲಿ ಯಾವ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ.

ನರ್ತಕಿ ಚಿತ್ರಮಂದಿರ, ಕೆಜಿ ರಸ್ತೆ: ತೂ ಜೂತಿ ಮೈನ್ ಮಕ್ಕಾರ್ ( ಹಿಂದಿ ) ನಾಲ್ಕು ಪ್ರದರ್ಶನಗಳು

ಸಪ್ನ ಚಿತ್ರಮಂದಿರ: ಭಿಕ್ಷುಕ ( ಕನ್ನಡ ) ಎರಡು ಪ್ರದರ್ಶನಗಳು ಹಾಗೂ ಕೆಜಿಎಫ್ ಚಾಪ್ಟರ್ 2 ( ಕನ್ನಡ ) ಎರಡು ಪ್ರದರ್ಶನಗಳು

Kranti completes 44 days in main theatre and heading towards 50 days; KGF 2 re released in Sapna

ಸಂತೋಷ್ ಚಿತ್ರಮಂದಿರ, ಕೆಜಿ ರಸ್ತೆ: ಮಂಡಲ ( ಕನ್ನಡ ) ನಾಲ್ಕು ಪ್ರದರ್ಶನಗಳು

ಅನುಪಮಾ ಚಿತ್ರಮಂದಿರ : ಕ್ರಾಂತಿ ( ಕನ್ನಡ ) ನಾಲ್ಕು ಪ್ರದರ್ಶನಗಳು

ಭೂಮಿಕಾ ಚಿತ್ರಮಂದಿರ: ಚೌಕಾಬಾರ ( ಕನ್ನಡ ) ಒಂದು ಪ್ರದರ್ಶನ ಹಾಗೂ ಸಿಂಹ ( ತೆಲುಗು ) ನಾಲ್ಕು ಪ್ರದರ್ಶನಗಳು

ತ್ರಿವೇಣಿ ಚಿತ್ರಮಂದಿರ : ಕಾಸಿನ ಸರ ( ಕನ್ನಡ ) ನಾಲ್ಕು ಪ್ರದರ್ಶನಗಳು

ವೀರೇಶ್ ಚಿತ್ರಮಂದಿರ, ಮಾಗಡಿ ರಸ್ತೆ: ಒಂದು ರಾಬರಿ ಕಥೇ ( ಕನ್ನಡ ) ಎರಡು ಪ್ರದರ್ಶನಗಳು ಹಾಗೂ 19.20.21 ( ಕನ್ನಡ ) ಎರಡು ಪ್ರದರ್ಶನಗಳು.

ಊರ್ವಶಿ ಚಿತ್ರಮಂದಿರ: ಅಖಿಲನ್ ( ತಮಿಳು ) ಎರಡು ಪ್ರದರ್ಶನಗಳು ಹಾಗೂ ತೂ ಜೂತಿ ಮೈನ್ ಮಕ್ಕಾರ್ ( ಹಿಂದಿ ) ಎರಡು ಪ್ರದರ್ಶನಗಳು

ಹೀಗೆ ಹೊಸ ಚಿತ್ರಗಳು ಬಿಡುಗಡೆಯಾದರೂ, ಓಟಿಟಿಗೆ ಬಂದರೂ ಸಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಬೆಂಗಳೂರಿನ ಮುಖ್ಯ ಚಿತ್ರಮಂದಿರ ಅನುಪಮಾದಲ್ಲಿ ತನ್ನ ಓಟವನ್ನು ಮುಂದುವರಿಸಿದ್ದು, ಇಂದಿಗೆ 44 ದಿನಗಳನ್ನು ಚಿತ್ರ ಪೂರೈಸಿದೆ. ಈ ಮೂಲಕ ಕ್ರಾಂತಿ ಮುಖ್ಯ ಚಿತ್ರಮಂದಿರದಲ್ಲಿ ಐವತ್ತು ದಿನಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಲಿದ್ದು, ಓಟಿಟಿ ಯುಗ ಆರಂಭವಾದ ನಂತರವೂ ಕಾಂತಾರ ಹಾಗೂ ವೇದ ಚಿತ್ರಗಳ ಬಳಿಕ ಬೆಂಗಳೂರಿನ ಕೆಜಿ ರಸ್ತೆಯ ಮುಖ್ಯ ಚಿತ್ರಮಂದಿರಲ್ಲಿ ಐವತ್ತು ದಿನಗಳನ್ನು ಪೂರೈಸಿದ ಚಿತ್ರ ಎನಿಸಿಕೊಳ್ಳಲಿದೆ.

More from Filmibeat

English summary
Kranti completes 44 days in main theatre and KGF 2 re released in Sapna theatre. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X