ಮಲಯಾಳಂ ಸಿನಿಮಾ ರಿಲೀಸ್, ಮುಖ್ಯ ಚಿತ್ರಮಂದಿರದಲ್ಲಿ ಕ್ರಾಂತಿ ಓಟ ಅಂತ್ಯ; ಈ 2 ಕಡೆ ಮಾತ್ರ ಇನ್ನೂ ಪ್ರದರ್ಶನ!

ನಿನ್ನೆ ( ಮಾರ್ಚ್ 24 ) ಶುಕ್ರವಾರ ಹಾಗೂ ಮಾರ್ಚ್ 22ರ ಬುಧವಾರ ಯುಗಾದಿ ಹಬ್ಬದ ಪ್ರಯುಕ್ತ ವಿವಿಧ ಭಾಷೆಗಳ ಹಲವಾರು ಚಿತ್ರಗಳು ಬಿಡುಗಡೆಯಾಗಿವೆ. ಅದರ ಹಿಂದಿನ ವಾರದ ಶುಕ್ರವಾರದಂದೂ ಸಹ ಯುಗಾದಿ ಹಬ್ಬದ ಪ್ರಯುಕ್ತವೆಂದೇ ಹಲವಾರು ಚಿತ್ರಗಳು ಚಿತ್ರಮಂದಿರಗಳ ಅಂಗಳಕ್ಕೆ ಕಾಲಿಟ್ಟಿವೆ.

ಕನ್ನಡದಲ್ಲಿ ಮಲಯಾಳಂ ಡಬಿಂಗ್ ಸಿನಿಮಾ ಮಾಳಿಕಪುರಂ ಐವತ್ತಕ್ಕೂ ಹೆಚ್ಚಿನ ಚಿತ್ರಮಂದಿರಗಳನ್ನು ಪಡೆದುಕೊಂಡು ಬಿಡುಗಡೆಯಾಗಿದೆ. ಈ ಮೂಲಕ ಮಲಯಾಳಂ ಸಿನಿಮಾ ಇತಿಹಾಸದಲ್ಲಿಯೇ ಮಲಯಾಳಂನಿಂದ ಕನ್ನಡದಕ್ಕೆ ಡಬ್ ಆಗಿ ದೊಡ್ಡ ಬಿಡುಗಡೆ ಕಂಡ ಚಿತ್ರ ಎನಿಸಿಕೊಂಡಿದೆ. ಈ ಚಿತ್ರವನ್ನು ಹೊರತುಪಡಿಸಿ ಕನ್ನಡದ ಯಾವ ಹೊಸ ಚಿತ್ರಗಳೂ ಈ ವಾರ ತೆರೆಗೆ ಬಂದಿಲ್ಲ. ಇನ್ನು ಮರು ಬಿಡುಗಡೆಯಲ್ಲಿ ಸಾರ್ವಕಾಲಿಕ ದಾಖಲೆಯನ್ನು ಬರೆದಿರುವ ಶಿವ ರಾಜ್‌ಕುಮಾರ್ ನಟನೆಯ ಓಂ ಸಿನಿಮಾ ಸಹ ಈ ವಾರ ಚಿತ್ರಮಂದಿರಗಳಿಗೆ ಬಂದಿದೆ.

Kranti ends its run in Anupama theatre as Malayalams Mallikapuram released there

ಹೀಗೆ ಹೊಸ ಚಿತ್ರಗಳ ಆಗಮನವಾದಾಗ ಹಳೆಯ ಚಿತ್ರಗಳು ಚಿತ್ರಮಂದಿರಗಳನ್ನು ಬಿಟ್ಟುಕೊಡುವುದು ಕಾಮನ್. ಅದೇ ರೀತಿ ಈ ವಾರ ಬಿಡುಗಡೆಗೊಂಡ ಹೊಸ ಚಿತ್ರಗಳಿಂದಾಗಿ ಹಳೆಯ ಚಿತ್ರಗಳು ತಮ್ಮ ಓಟವನ್ನು ಹಲವು ಚಿತ್ರಮಂದಿರಗಳಲ್ಲಿ ನಿಲ್ಲಿಸಿವೆ. ಅದರಲ್ಲೂ ವಿಶೇಷವಾಗಿ ಅದೆಷ್ಟೋ ದೊಡ್ಡ ದೊಡ್ಡ್ ಚಿತ್ರಗಳು ಬಿಡುಗಡೆಯಾದಾಗಲೂ ಮುಖ್ಯ ಚಿತ್ರಮಂದಿರದಿಂದ ಅಲ್ಲಾಡದೇ ಇದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾ ಈ ವಾರ ಬಿಡುಗಡೆಯಾದ ಮಲಯಾಳಂ ಚಿತ್ರ ಮಾಳಿಕಪುರಂನ ಕನ್ನಡ ಡಬ್ ವರ್ಷನ್‌ನಿಂದಾಗಿ ಮುಖ್ಯ ಚಿತ್ರಮಂದಿರದಲ್ಲಿ ತನ್ನ ಓಟವನ್ನು ನಿಲ್ಲಿಸಿದೆ.

ಹೌದು, ಮಲಯಾಳಂನಲ್ಲಿ ಸೂಪರ್ ಬ್ಲಾಕ್‌ಬಸ್ಟರ್ ಆಗಿ ಓಟಿಟಿಯಲ್ಲಿಯೂ ಲಭ್ಯವಿರುವ ಮಾಳಿಕಪುರಂ ಅನ್ನು ಇದೀಗ ಕನ್ನಡಕ್ಕೆ ಡಬ್ ಮಾಡಿ ರಿಲೀಸ್ ಮಾಡಲಾಗಿದ್ದು, ಬೆಂಗಳೂರಿನ ಕೆಜಿ ರಸ್ತೆಯ ಮುಖ್ಯ ಚಿತ್ರಮಂದಿರ ಅನುಪಮಾದಲ್ಲಿಯೂ ಸಹ ಈ ಚಿತ್ರ ಬಿಡುಗಡೆಗೊಂಡಿದೆ. ಹೀಗಾಗಿ ಕ್ರಾಂತಿ ಸಿನಿಮಾ ಮಾರ್ಚ್ 23ಕ್ಕೆ ಅನುಪಮಾ ಚಿತ್ರಮಂದಿರದಲ್ಲಿ ತನ್ನ ಓಟವನ್ನು ಮುಕ್ತಾಯಗೊಳಿಸಿದೆ. ಈ ಮೂಲಕ 57 ದಿನಗಳ ಪ್ರದರ್ಶನದ ಬಳಿಕ ಕ್ರಾಂತಿ ಬೆಂಗಳೂರಿನಲ್ಲಿ ತನ್ನ ಓಟವನ್ನು ಸಂಪೂರ್ಣವಾಗಿ ಅಂತ್ಯಗೊಳಿಸಿದೆ. ನಗರದ ಯಾವ ಚಿತ್ರಮಂದಿರದಲ್ಲಿಯೂ ಸಹ ಕ್ರಾಂತಿ ಪ್ರದರ್ಶನಗೊಳ್ಳುತ್ತಿಲ್ಲ.

ಆದರೆ ರಾಜ್ಯದ ಉಳಿದ ಎರಡು ಪ್ರಮುಖ ನಗರಗಳಲ್ಲಿ ಮಾತ್ರ ಕ್ರಾಂತಿ ಚಿತ್ರ ಇನ್ನೂ ಪ್ರದರ್ಶನಗೊಳ್ಳುತ್ತಿದೆ. ಹೌದು, ಹುಬ್ಬಳ್ಳಿಯ ಅಪ್ಸರ ಚಿತ್ರಮಂದಿರದಲ್ಲಿ ಕ್ರಾಂತಿ ಚಿತ್ರ ಇನ್ನೂ ಪ್ರದರ್ಶನಗೊಳ್ಳುತ್ತಿದೆ. ಬಿಡುಗಡೆಯಾದಾಗಿನಿಂದ ಇಲ್ಲಿ ಚಿತ್ರ ಸತತವಾಗಿ ಪ್ರದರ್ಶನ ಕಾಣುತ್ತಿದೆ. ಇನ್ನು ಬೆಳಗಾವಿಯ ಪ್ರಕಾಶ್ ಚಿತ್ರಮಂದಿರದಲ್ಲಿಯೂ ಸಹ ಕ್ರಾಂತಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಮೊದಲಿಗೆ ಬೆಳಗಾವಿಯ ಗ್ಲೋಬ್ ಸಿನಿಮಾಸ್‌ನಲ್ಲಿ ಬಿಡುಗಡೆಯಾಗಿದ್ದ ಕ್ರಾಂತಿ ಐವತ್ತು ದಿನಗಳನ್ನು ಪೂರೈಸಿದ ಬಳಿಕ ಪ್ರಕಾಶ್ ಚಿತ್ರಮಂದಿರಕ್ಕೆ ವರ್ಗಾವಣೆಗೊಂಡು ಪ್ರದರ್ಶನ ಕಾಣುತ್ತಿದೆ.

Kranti ends its run in Anupama theatre as Malayalams Mallikapuram released there

ಇನ್ನು ಇಂದು ( ಮಾರ್ಚ್ 25 ) ಬೆಂಗಳೂರಿನ ಯಾವ ಮುಖ್ಯ ಚಿತ್ರಮಂದಿರದಲ್ಲಿ ಯಾವ ಚಿತ್ರ ಪ್ರದರ್ಶನಗೊಳ್ಳುತ್ತಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ನರ್ತಕಿ ಚಿತ್ರಮಂದಿರ, ಕೆಜಿ ರಸ್ತೆ: ಕಬ್ಜ ( ಕನ್ನಡ ) ಐದು ಪ್ರದರ್ಶನಗಳು

ಸಪ್ನ ಚಿತ್ರಮಂದಿರ: ಆರೆಂಜ್ ( ತೆಲುಗು ) ನಾಲ್ಕು ಪ್ರದರ್ಶನಗಳು

ಸಂತೋಷ್ ಚಿತ್ರಮಂದಿರ, ಕೆಜಿ ರಸ್ತೆ: ಯಾವ ಚಿತ್ರವೂ ಪ್ರದರ್ಶನಗೊಳ್ಳುತ್ತಿಲ್ಲ. ಮುಂದಿನ ವಾರ ಗುರುದೇವ್ ಹೊಯ್ಸಳ ಬಿಡುಗಡೆ

ಅನುಪಮಾ ಚಿತ್ರಮಂದಿರ : ಮಾಳಿಕಪುರಂ ( ಕನ್ನಡ ) ನಾಲ್ಕು ಪ್ರದರ್ಶನಗಳು

ಭೂಮಿಕಾ ಚಿತ್ರಮಂದಿರ: ಫಲನ ಅಬ್ಬಾಯಿ ಫಲನ ಅಮ್ಮಾಯಿ ( ತೆಲುಗು ) ಒಂದು ಪ್ರದರ್ಶನ ಹಾಗೂ ದಾಸ್ ಕಾ ಧಮ್ಕಿ ( ತೆಲುಗು ) ನಾಲ್ಕು ಪ್ರದರ್ಶನಗಳು

ತ್ರಿವೇಣಿ ಚಿತ್ರಮಂದಿರ : ಯಾವ ಚಿತ್ರವೂ ಪ್ರದರ್ಶನಗೊಳ್ಳುತ್ತಿಲ್ಲ

ವೀರೇಶ್ ಚಿತ್ರಮಂದಿರ, ಮಾಗಡಿ ರಸ್ತೆ: ಮಾಳಿಕಪುರಂ ( ಕನ್ನಡ ) ನಾಲ್ಕು ಪ್ರದರ್ಶನಗಳು ಹಾಗೂ ಓಂ ( ಕನ್ನಡ ) ನಾಲ್ಕು ಪ್ರದರ್ಶನಗಳು.

ಊರ್ವಶಿ ಚಿತ್ರಮಂದಿರ: ಕಬ್ಜ ( ಕನ್ನಡ ) ನಾಲ್ಕು ಪ್ರದರ್ಶನಗಳು

More from Filmibeat

English summary
Kranti ends it's run in Anupama theatre as Malayalam's Mallikapuram released there. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X