ಸ್ಯಾಂಡಲ್‌ವುಡ್‌ನಲ್ಲಿ ಕಳೆಗಟ್ಟಿದ ಗಣೇಶ ಹಬ್ಬದ ಸಂಭ್ರಮ!

ಈ ಬಾರಿಯ ಗಣೇಶ ಹಬ್ಬ ಬಹಳ ವಿಶೇಷ. ಎಲ್ಲೆಡೆ ಹಬ್ಬದ ಸಂಭ್ರಮ ಕಳೆಗಟ್ಟುತ್ತಿದೆ. ಕೊರೋನಾ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ಬಾರಿಯ ಗಣೇಶ ಹಬ್ಬ ಎಲ್ಲರಿಗೂ ಅತ್ಯಂತ ವಿಶೇಷವಾಗಿ ಇರಲಿದೆ.

ಈಗಾಗಲೇ ಮಾರುಕಟ್ಟೆಗೆ ಗಣೇಶನ ಮೂರ್ತಿಗಳು ಬಂದು ಬಿಟ್ಟಿವೆ. ನಾನಾ ವಿನ್ಯಾಸದ, ಹಲವು ರೀತಿಯ, ಹಲವು ಬಣ್ಣಗಳ ಗಣೇಶ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದ್ದಾನೆ. ಮನೆಮನೆಗಳಲ್ಲಿ ಮಾತ್ರವಲ್ಲದೆ ಬೀದಿಬೀದಿಗಳಲ್ಲಿ ಗಣೇಶನ ಮಹೋತ್ಸವ ನಡೆಯಲಿದೆ.

ಹಬ್ಬ ಬಂತೂ ಅಂದ್ರೆ ಸಿನಿಮಾರಂಗದಲ್ಲಿ ವಿಶೇಷ ಸಂಭ್ರಮ ಕಳೆಗಟ್ಟುತ್ತದೆ. ಸಿನಮಾ ಮಂದಿ, ಹಬ್ಬದ ಪ್ರಯುಕ್ತ ಫೋಟೋ ಶೂಟ್ ಮಾಡಿಸಿ, ಹಬ್ಬ ಆಚರಿಸಿ ಸಂಭ್ರಮಿಸುತ್ತಾರೆ. ಜೊತೆಗೆ ತಮ್ಮ ಅಭಿಮಾನಿಗಳಿಗಾಗಿ ವಿಶ್ ಮಾಡುತ್ತಾರೆ.

ಹಬ್ಬಕ್ಕೆ ಸಿನಿಮಂದಿಯ ಸರ್ಪೈಸ್!

ಹಬ್ಬಕ್ಕೆ ಸಿನಿಮಂದಿಯ ಸರ್ಪೈಸ್!

ಈ ಬಾರಿಯ ಗಣೇಶ ಹಬ್ಬಕ್ಕೂ ಕೂಡ ಹಲವು ಸಿನಿಮಾ ತಾರೆಯರು ತಮ್ಮ ಅಭಿಮಾನಿಗಳಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಪೋಸ್ಟ್‌ ಮೂಲಕ ಸಂದೇಶವನ್ನೂ ಕೊಟ್ಟಿದ್ದಾರೆ. ಜೊತೆಗೆ ಹಲವಾರು ಸಿನಿಮಾಗಳ ಹೊಸ ಪೋಸ್ಟರ್‌ಗಳು ರಿಲೀಸ್ ಆಗಿವೆ. ಡಾರ್ಲಿಂಗ್ ಕೃಷ್ಣ ಅಭಿನಯದ ಶುಗರ್‌ಲೆಸ್ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಇನ್ನು ನಿರ್ದೇಶಕ

ಕ್ರಾಂತಿ ಪೋಸ್ಟರ್ ರಿಲೀಸ್!

ಕ್ರಾಂತಿ ಪೋಸ್ಟರ್ ರಿಲೀಸ್!

ಗಣೇಶ ಹಬ್ಬದ ಪ್ರಯುಕ್ತ ನಟ ದರ್ಶನ್ ಅಭಿನಯದ ಕ್ರಾಂತಿ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಇದರಲ್ಲಿ ನಟ ದರ್ಶನ್ ಹೊಸ ಲುಕ್ ರಿವೀಲ್ ಆಗಿದೆ. ಹಬ್ಬಕ್ಕೆ ಕ್ರಾಂತಿ ಚಿತ್ರದ ಹಾಡು ಬೇಕೆಂದು ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು. ಆದರೆ ಚಿತ್ರತಂಡ ಪೋಸ್ಟರ್ ಮಾತ್ರ ರಿಲೀಸ್ ಮಾಡಿದ್ದಾರೆ. ನಟ ದರ್ಶನ್ ಸೂಟು, ಬೂಟು ತೊಟ್ಟು ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಸ್ಟರನ್ನು ನಟ ದರ್ಸನ್ ಹಂಚಿಕೊಂಡಿದ್ದಾರೆ.

ಅಪ್ಪು ಜೊತೆ ಜಗ!

ಅಪ್ಪು ಜೊತೆ ಜಗ!

ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಕೊನೆಯ ಸಾಕ್ಷ್ಯಚಿತ್ರ 'ಗಂಧದ ಗುಡಿ' ಪೋಸ್ಟರ್ ಕೂಡ ರಿಲೀಸ್ ಆಗಿದೆ. ಈ ಪೋಸ್ಟರ್‌ನಲ್ಲಿ ಅಪ್ಪು ಜೊತೆಗೆ ಗಜರಾಜ ಇದ್ದಾರೆ. ಪುನೀತ್ ರಾಜ್‌ಕುಮಾರ್ ಆನೆಯ ಸೊಂಡಿಲು ಹಿಡಿದು ನಿಂತಿರುವ ಮಾದರಿಯ ಪೋಸ್ಟರ್ ರಿಲೀಸ್ ಇದು. ಗಂಧದ ಗುಡಿ ರಿಲೀಸ್‌ಗೆ ದಿನಾಂಕ ನಿಗದಿಯಾಗಿದೆ. ಇದೇ ವರ್ಷ ಅಕ್ಟೋಬರ್ 28ಕ್ಕೆ ಈ ಸಾಕ್ಷ್ಯಚಿತ್ರ ತೆರೆಗೆ ಬರುತ್ತಿದೆ. ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ.

ಡೋಲು ಬಾರಿಸಿದ ರಚಿತಾ ರಾಮ್!

ಡೋಲು ಬಾರಿಸಿದ ರಚಿತಾ ರಾಮ್!

ನಟಿ ರಚಿತಾ ರಾಮ್ ವಿಶೇಷ ಫೋಟೋ ಹಂಚಿಕೊಳ್ಳುವುದರ ಮೂಲಕ ಗಣೇಶ್ ಹಬ್ಬಕ್ಕೆ ಶುಭಕೋರಿದ್ದಾರೆ. ರಚಿತಾ ರಾಮ್ ಸೀತೆಯುಟ್ಟು, ಸಿಂಗಾರ ಮಾಡಿಕೊಂಡು ಗಣೇಶನ ಮುಂದೆ ನಿಂತು ಡೋಲು ಬಾರಿಸುತ್ತಿರುವ ಫೊಟೋ ಇದು. ಹಾಗೆ ನಟ ಗಣೇಶ್ ಅಭಿನಯದ ಬಾನದಾರಿಯಲಿ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಕಾಡಿನಲ್ಲಿ ಕೂತ ಚಿತ್ರತಂಡದ ಜೊತೆಗೆ ಗಜರಾಜ ಆನೆ ಕೂಡ ಇದೆ.

More from Filmibeat

English summary
Kranti Film New Poster Release On Ganesha Festival, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X