ರಿಲೀಸ್ ದಿನ ಅಬ್ಬರಿಸಿದ್ದ ಕ್ರಾಂತಿ ನಂತರದ 3 ದಿನಗಳಲ್ಲಿ ಗಳಿಸಿದ್ದೆಷ್ಟು? ಇಲ್ಲಿದೆ ವೀಕೆಂಡ್ ಕಲೆಕ್ಷನ್ ರಿಪೋರ್ಟ್

By ಫಿಲ್ಮಿಬೀಟ್ ಡೆಸ್ಕ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಕಳೆದ ಗುರುವಾರ ( ಜನವರಿ 26 ) ಗಣರಾಜ್ಯೋತ್ಸವದ ರಜಾ ದಿನದಂದು ಭರ್ಜರಿಯಾಗಿ ಬಿಡುಗಡೆಗೊಂಡಿತ್ತು. ಮಾಧ್ಯಮಗಳ ವಿರೋಧ ಕಟ್ಟಿಕೊಂಡು ಯಾವುದೇ ಪ್ರಚಾರವಿಲ್ಲದೇ ಬಿಡುಗಡೆಯಾದ ಕ್ರಾಂತಿ ಚಿತ್ರ ಅಬ್ಬರದ ಓಪನಿಂಗ್ ಪಡೆದುಕೊಂಡು ವಿರೋಧಿಗಳ ಹುಬ್ಬೇರುವಂತೆ ಮಾಡಿತ್ತು. ಆದರೆ ಮೊದಲ ದಿನ ಆದ ಬುಕಿಂಗ್‌ಗೂ ನಂತರದ ದಿನಗಳಲ್ಲಿ ಆದ ಬುಕಿಂಗ್‌ಗೂ ತೀವ್ರ ವ್ಯತ್ಯಾಸವಿತ್ತು.

ಹೌದು, ಮೊದಲ ದಿನ ಹೆಚ್ಚು ಹೌಸ್‌ಫುಲ್ ಪ್ರದರ್ಶನಗಳನ್ನು ಕಂಡ ಕ್ರಾಂತಿ ಚಿತ್ರ ನಂತರದ ದಿನಗಳಲ್ಲಿ ಬೆರಳೆಣಿಕೆಯಷ್ಟು ಪ್ರದರ್ಶನಗಳಲ್ಲಿ ಮಾತ್ರ ಹೌಸ್‌ಫುಲ್ ಆಗಿತ್ತು. ಸಿನಿ ರಸಿಕರು ತುಂಬಿರುವ ಬೆಂಗಳೂರಿನಂತಹ ಮಹಾನಗರದ ಮಲ್ಪಿಪ್ಲೆಕ್ಸ್‌ಗಳಲ್ಲಿ ಟಿಕೆಟ್‌ಗಳು ತೀರಾ ಕಡಿಮೆ ಮಟ್ಟದಲ್ಲಿ ಮಾರಾಟವಾಗಿದ್ದವು. ಅದರಲ್ಲಿಯೂ ಎರಡನೇ ದಿನ ಹತ್ತಕ್ಕಿಂತ ಹೆಚ್ಚು ಪ್ರದರ್ಶನಗಳು ಸೋಲ್ಡ್ ಔಟ್ ಕೂಡ ಆಗಿರಲಿಲ್ಲ.

ಹೀಗೆ ಎರಡನೇ ದಿನ ಆನ್‌ಲೈನ್‌ ಬುಕಿಂಗ್‌ನಲ್ಲಿ ಮಂಕಾದ ಕ್ರಾಂತಿ ಆಫ್‌ಲೈನ್‌ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಸದ್ದು ಮಾಡದಿದ್ದರೂ ಸಮಾಧಾನಕರ ಮಟ್ಟದಲ್ಲಿ ಟಿಕೆಟ್‌ಗಳು ಮಾರಾವಾಗಿದ್ದವು. ಇನ್ನು ಮೂರನೇ ದಿನ ಶನಿವಾರದಂದು ಹೆಚ್ಚೇನೂ ವ್ಯತ್ಯಾಸ ಕಾಣದ ಕ್ರಾಂತಿ ಚಿತ್ರದ ಬುಕಿಂಗ್‌ನಲ್ಲಿ ಭಾನುವಾರ ತುಸು ಸುಧಾರಣೆ ಕಂಡಿದೆ. ಭಾನುವಾರದಂದು ಬೆಂಗಳೂರಿನಲ್ಲಿ ಚಿತ್ರದ ಸುಮಾರು 30 ಪ್ರದರ್ಶನಗಳು ಫಾಸ್ಟ್ ಫಿಲ್ಲಿಂಗ್/ ಸೋಲ್ಡ್ ಔಟ್ ಆಗಿದ್ದವು. ಇನ್ನು ರಾಜ್ಯದ ಉಳಿದೆಡೆ ಸಹ ಕ್ರಾಂತಿ ಚಿತ್ರ ಮೊದಲ ದಿನದ ಬಳಿಕ ಭಾನುವಾರ ತುಸು ಒಳ್ಳೆಯ ಬುಕಿಂಗ್ ಕಂಡಿತ್ತು. ಇನ್ನು ಚಿತ್ರಕ್ಕೆ ವ್ಯಕ್ತವಾಗುತ್ತಿರುವ ಮಿಶ್ರ ಪ್ರತಿಕ್ರಿಯೆಯಿಂದ ಈ ಹಿಂದಿನ ದರ್ಶನ್ ಚಿತ್ರಗಳು ಮಾಡುತ್ತಿದ್ದ ರೀತಿಯ ಕಲೆಕ್ಷನ್ ಆಗುತ್ತಿಲ್ಲ ಎಂದೇ ಹೇಳಬಹುದಾಗಿದ್ದು, ಚಿತ್ರ ಮೊದಲ 4 ದಿನಗಳಲ್ಲಿ ಎಷ್ಟು ಗಳಿಕೆ ಮಾಡಿತು ಎಂಬ ಮಾಹಿತಿ ಈ ಕೆಳಕಂಡಂತಿದೆ..

ಮೊದಲ 4 ದಿನಗಳ ಕಲೆಕ್ಷನ್

ಮೊದಲ 4 ದಿನಗಳ ಕಲೆಕ್ಷನ್

ಕ್ರಾಂತಿ ಚಿತ್ರ ಮೊದಲ ದಿನ 12.85 ಕೋಟಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿ ಅಬ್ಬರಿಸಿತ್ತು. ಹೀಗೆ ಮೊದಲ ದಿನ ಅಬ್ಬರದ ಓಪನಿಂಗ್ ಪಡೆದುಕೊಂಡಿದ್ದ ಕ್ರಾಂತಿ ಎರಡನೇ ದಿನ 3.9 ಕೋಟಿ ಹಾಗೂ ಮೂರನೇ ದಿನ 4.35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇನ್ನು ನಾಲ್ಕನೇ ದಿನವಾದ ಜನವರಿ 29ರ ಭಾನುವಾರದಂದು ಕ್ರಾಂತಿ ಚಿತ್ರ 4.65 ಕೋಟಿ ಗಳಿಕೆ ಮಾಡಿದೆ ಎಂದು ಬಾಕ್ಸ್ ಆಫೀಸ್ ಪಂಡಿತರು ತಿಳಿಸಿದ್ದಾರೆ. ಈ ಮೂಲಕ ಕ್ರಾಂತಿ ಮೊದಲ ವಾರಾಂತ್ಯಕ್ಕೆ 25.75 ಕೋಟಿ ಗಳಿಸಿದೆ ಎಂಬ ಮಾಹಿತಿ ಇದೆ.

ಅಧಿಕೃತವಾಗಿ ಯಾವುದೇ ಮಾಹಿತಿ ನೀಡ್ತಿಲ್ಲ ಚಿತ್ರತಂಡ

ಅಧಿಕೃತವಾಗಿ ಯಾವುದೇ ಮಾಹಿತಿ ನೀಡ್ತಿಲ್ಲ ಚಿತ್ರತಂಡ

ಇನ್ನು ಕ್ರಾಂತಿ ಚಿತ್ರ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದನ್ನು ಬಾಕ್ಸ್ ಆಫೀಸ್ ಪಂಡಿತರು ಊಹಿಸಿ ತಿಳಿಸುತ್ತಿದ್ದಾರೆಯೇ ಹೊರತು ಚಿತ್ರತಂಡ ಅಧಿಕೃತವಾಗಿ ಯಾವ ಮಾಹಿತಿಯನ್ನೂ ಸಹ ಹಂಚಿಕೊಂಡಿಲ್ಲ. ಚಿತ್ರ ಬಿಡುಗಡೆಯಾಗುವುದಕ್ಕೂ ಮುನ್ನ ಸಾಲು ಸಾಲು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದ ಚಿತ್ರತಂಡ ಎಷ್ಟು ಬುಕಿಂಗ್ ಆಗಿದೆ, ಅಡ್ವಾನ್ಸ್ ಬುಕಿಂಗ್‌ನಿಂದ ಎಷ್ಟು ಕಲೆಕ್ಷನ್ ಆಗಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿತ್ತು. ಆದರೆ ಬಿಡುಗಡೆಯಾದ ನಂತರ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಎಂದು ಪೋಸ್ಟ್ ಮಾಡಿದ್ದು, ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರವಾಗಿ ಮಾತ್ರ ಪೋಸ್ಟ್ ಮಾಡಿಲ್ಲ.

ಕಲೆಕ್ಷನ್ ವಿಚಾರವಾಗಿ ಉಂಟಾಗಿದೆ ಗೊಂದಲ

ಕಲೆಕ್ಷನ್ ವಿಚಾರವಾಗಿ ಉಂಟಾಗಿದೆ ಗೊಂದಲ

ಈ ರೀತಿ ಅಧಿಕೃತ ಮಾಹಿತಿ ಇಲ್ಲದ ಕಾರಣ ಚಿತ್ರ ಎಷ್ಟು ಗಳಿಸಿದೆ ಎಂಬ ಗೊಂದಲ ಸಿನಿ ರಸಿಕರಲ್ಲಿ ಹಾಗೂ ಅಭಿಮಾನಿಗಳಲ್ಲಿ ಉಂಟಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಿನಿ ರಸಿಕರ ದಿಕ್ಕು ತಪ್ಪಿಸಲು ಎರಡೇ ದಿನಕ್ಕೆ ಚಿತ್ರ ಐವತ್ತು ಕೋಟಿ ದಾಟಿದೆ ಎಂಬ ನಕಲಿ ರಿಪೋರ್ಟ್‌ಗಳೂ ಸಹ ಹರಿದಾಡುತ್ತಿವೆ. ಇನ್ನು ಬಾಕ್ಸ್ ಆಫೀಸ್ ಪಂಡಿತರು ಚಿತ್ರ ಮೊದಲ 4 ದಿನಗಳಲ್ಲಿ ಚಿತ್ರ 27 ಕೋಟಿ ಗಳಿಸಿದೆ ಎಂದು ಹೇಳುತ್ತಿದ್ದಾರೆ. ಈ ಗೊಂದಲಗಳೆಲ್ಲಾ ಸರಿ ಹೋಗಬೇಕೆಂದರೆ ಚಿತ್ರ ತಂಡ ಅಧಿಕೃತವಾಗಿ ಕಲೆಕ್ಷನ್ ರಿಪೋರ್ಟ್ ಅನ್ನು ಹಂಚಿಕೊಳ್ಳಲೇಬೇಕಿದೆ.

More from Filmibeat

English summary
Kranti first weekedn box office report: Kranti earned 27 crores on box office in 4 days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X