For Quick Alerts
  ALLOW NOTIFICATIONS  
  For Daily Alerts

  'ಕ್ರಾಂತಿ' ಚಿತ್ರದ ಮೇಕಿಂಗ್ ಫೋಟೊ ವೈರಲ್!

  By Bhagya.s
  |

  ದರ್ಶನ್​ ನಟನೆಯ ಬಹುನಿರೀಕ್ಷಿತ​ ಸಿನಿಮಾ 'ಕ್ರಾಂತಿ'. 'ಕ್ರಾಂತಿ' ಸಿನಿಮಾದ ಚಿತ್ರೀಕರಣ ಸದ್ದಿಲ್ಲದೆ ನಡೆಯುತ್ತಿದೆ. ಈಗಾಗಲೇ ಬಹುತೇಕ ಶೂಟಿಂಗ್​ ಮುಕ್ತಾಯವಾಗಿದೆ. ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್​​​​​ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಫಸ್ಟ್​ ಲುಕ್ ಟೀಸರ್​ ರಿಲೀಸ್​ ಆಗಿ ಕುತೂಹಲ ಹೆಚ್ಚಿಸಿದೆ.

  ಕಥೆಯ ಬಗ್ಗೆ ಸಣ್ಣ ಸುಳಿವು ಬಿಟ್ಟು ಕೊಟ್ಟಿರುವ ನಿರ್ಮಾಪಕಿ ಶೈಲಜಾ ನಾಗ್ ಇದು ಅಕ್ಷರ 'ಕ್ರಾಂತಿ' ಎಂದಿದ್ದಾರೆ. ಚಿತ್ರದ ಬಹುತೇಕ ಶೂಟಿಂಗ್​ ಮಾಡಿ ಮುಗಿಸಿದೆ ಸಿನಿಮಾ ತಂಡ. ಈಗಾಗಲೇ ಬೆಂಗಳೂರು, ಹೈದರಾಬಾದ್​​ನಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ.

  ವಿ. ಹರಿಕೃಷ್ಣ ಚಿತ್ರಕ್ಕೆ ಆ್ಯಕ್ಷನ್ ಕಟ್​ ಹೇಳೋದರ ಜೊತೆಗೆ ಮ್ಯೂಸಿಕ್​ ಕಂಪೋಸ್​ ಮಾಡ್ತಿದ್ದಾರೆ. ಇನ್ನು ಸಿನಿಮಾದ ಕೆಲವು ಭಾಗದ ಚಿತ್ರೀಕರಣ ಮಾತ್ರವೇ ಬಾಕಿ ಇದ್ದು, ಚಿತ್ರೀಕರಣಕ್ಕಾಗಿ ಉಳಿದ ಭಾಗದ ಚಿತ್ರೀಕರಣಕ್ಕಾಗಿ ಸಿನಿಮಾ ತಂಡ ಸದ್ಯ ವಿದೇಶಕ್ಕೆ ಹಾರಿದೆ.

  ಪೋಲ್ಯಾಂಡ್‌ನಲ್ಲಿ 'ಕ್ರಾಂತಿ' ಶೂಟಿಂಗ್!

  ಪೋಲ್ಯಾಂಡ್‌ನಲ್ಲಿ 'ಕ್ರಾಂತಿ' ಶೂಟಿಂಗ್!

  ದರ್ಶನ್ ಮುಂದಿನ ಸಿನಿಮಾ 'ಕ್ರಾಂತಿ'. ವಿ.ಹರಿಕೃಷ್ಣ ನಿರ್ದೇಶಿಸುತ್ತಿರುವ ಈ ಸಿನಿಮಾ ಟಾಕಿ ಪೋಷನ್ ಸದ್ದಿಲ್ಲದೆ ನಡೆದಿತ್ತು. ಈಗ ಇಡೀ ತಂಡ ಪೋಲ್ಯಾಂಡ್‌ಗೆ ಪಯಣ ಬೆಳೆಸಿದೆ. ದರ್ಶನ್ ಜೊತೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ನಿರ್ಮಾಪಕಿ ಶೈಲಜಾ ನಾಗ್ ಹಾಗೂ ಅವರ ಪುತ್ರಿ ಪ್ರೈವೆಟ್ ಜೆಟ್‌ನಲ್ಲಿ ಪಯಣ ಬೆಳೆಸಿದ್ದರ ಬಗ್ಗೆ ಈ ಹಿಂದೆಯೇ ವಿಡಿಯೋ ಹಂಚಿಕೊಂಡು ಮಾಹಿತಿ ಹೊರ ಹಾಕಿದ್ದರು. ಕೊನೆಯ ಹಂತದ ಚಿತ್ರೀಕರಣಕ್ಕೆ 'ಕ್ರಾಂತಿ' ಸಿನಿಮಾ ತಂದ ಸದ್ಯ ಪೋಲ್ಯಾಂಡ್‌ನಲ್ಲಿ ಬೀಡು ಬಿಟ್ಟಿದೆ.

  'ಕ್ರಾಂತಿ' ಚಿತ್ರದ ಹೊಸ ಫೋಟೊ ಲೀಕ್!

  'ಕ್ರಾಂತಿ' ಚಿತ್ರದ ಹೊಸ ಫೋಟೊ ಲೀಕ್!

  'ಕ್ರಾಂತಿ' ಚಿತ್ರದ ಶೂಟಿಂಗ್ ಪೋಲ್ಯಾಂಡ್‌ನಲ್ಲಿ ನಡೆಯುತ್ತಿದೆ. ಶೂಟಿಂಗ್ ಸ್ಪಾಟ್‌ನಿಂದ ಫೋಟೊ ಒಂದು ರಿವೀಲ್ ಆಗಿದೆ. ಸಂದರ್ಶನ ನೀಡುತ್ತಿರುವ ಫೋಟೊ ಇದು. ದರ್ಶನ್ ಎನ್‌ಆರ್‌ಐ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ದಾಸನ ಹೊಸ ಲುಕ್ ವೈರಲ್ ಆಗಿದೆ.

  'ಕ್ರಾಂತಿ' ಫೋಟೊ ಹಂಚಿಕೊಂಡಿದ್ದ ದರ್ಶನ್!

  'ಕ್ರಾಂತಿ' ಫೋಟೊ ಹಂಚಿಕೊಂಡಿದ್ದ ದರ್ಶನ್!

  'ಕ್ರಾಂತಿ' ಚಿತ್ರದ ಶೂಟಿಂಗ್ ಬಗ್ಗೆ ಸ್ವತಃ ನಟ ದರ್ಶನ್ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಚಿತ್ರದಲ್ಲಿನ ತಮ್ಮ ಹೊಸ ಲುಕ್ ಕೂಡ ರಿವೀಲ್ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಟ ದರ್ಶನ್ ಫೋಟೊವನ್ನು ಹಂಚಿಕೊಂಡಿದ್ದಾರೆ. ಸೂಟು, ಬೂಟು ತೊಟ್ಟು ನಟ ದರ್ಶನ್ ಗ್ಲಾಮರ್ ಲಯಕ್‌ನಲ್ಲಿ ಮಿಂಚಿದ್ದಾರೆ. ದರ್ಶನ್ ಈ ಲುಕ್ ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ.

  ಅಭಿಮಾನಿಗಳಿಗೆ ದರ್ಶನ್ ಧನ್ಯವಾದ!

  ಪೋಲ್ಯಾಂಡ್‌ನಲ್ಲಿ ಶೂಟಿಂಗ್ ವೇಳೆ ಕ್ಲಿಕ್ಕಿಸಿದ ಫೋಟೊ ಹಂಚಿಕೊಂಡಿರುವ ದರ್ಶನ್ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. "ಕ್ರಾಂತಿ ಚಿತ್ರದ ಶೂಟಿಂಗ್ ಪೋಲೆಂಡ್‌ನಲ್ಲಿ ಬಿರುಸಿನಿಂದ ಸಾಗುತ್ತಿದೆ. ನಲ್ಮೆಯ ಸೆಲೆಬ್ರಿಟಿಗಳು ತೋರುತ್ತಿರುವ ಪ್ರೀತಿಗೆ ನಾ ಸದಾ ಚಿರಋಣಿ". ಎಂದು ದರ್ಶನ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

  English summary
  Kranti Movie Making Photo Viral In Social Media, Darshna Shootinig In Poland, Know More
  Saturday, July 16, 2022, 10:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X