Nimika Ratnakar: 'ಫೀನಿಕ್ಸ್'ನಂತೆ ಬಂದ 'ಪುಷ್ಪವತಿ'.. ಕ್ರೈಮ್ ಥ್ರಿಲ್ಲರ್‌ಗೆ ಓಂ ಪ್ರಕಾಶ್ ಆಕ್ಷನ್ ಕಟ್
ದರ್ಶನ್ ನಟಿಸಿದ 'ಕ್ರಾಂತಿ' ಸಿನಿಮಾದ ಪುಷ್ಪವತಿ ಹಾಡು ಇಂದಿಗೂ ಹಾಡು ಕೇಳುಗರ ಫೇವರಿಟ್. ಈ ಹಾಡಿನಲ್ಲಿ ಪುಷ್ಪವತಿಯಾಗಿ ನಿಮಿಕಾ ರತ್ನಾಕರ್ ಗಮನ ಸೆಳೆದಿದ್ದರು. ದರ್ಶನ್ ಜೊತೆ ಗ್ಲಾಮರಸ್ ಆಗಿ ಹೆಜ್ಜೆ ಹಾಕಿದ್ದ ನಟಿಗೆ ಮೆಚ್ಚುಗೆಗಳು ಕೂಡ ವ್ಯಕ್ತವಾಗಿದ್ದವು.
ಒಂದೇ ಒಂದು ಹಾಡಿಗೆ ಬಂದು ಹೋಗಿದ್ದ ನಿಮಿಕಾ ರತ್ನಾಕರ್ ಈಗ ಮತ್ತೊಂದು ಸಿನಿಮಾಗೆ ನಾಯಕಿಯಾಗಿದ್ದಾರೆ. ಅದುವೇ 'ಫೀನಿಕ್ಸ್'. ಇತ್ತೀಚೆಗೆ ಈ ಸಿನಿಮಾ ಸೆಟ್ಟೇರಿದೆ. ವಿಶೇಷ ಅಂದರೆ, ಇದೊಂದು ಮಹಿಳಾ ಪ್ರಧಾನ ಸಿನಿಮಾ.

ಶೇಕ್ ಇಟ್ ಪುಷ್ಪವತಿ ಅಂತ ಹುಡುಗರ ಹೃದಯ ಗೆದ್ದಿದ್ದ ನಿಮಿಕಾ ರತ್ನಾಕರ್ ಈಗ ಪಕ್ಕಾ ಡಿ ಗ್ಲಾಮರ್ ರೋಲ್‌ನಲ್ಲಿ ನಟಿಸಿತ್ತಿದ್ದಾರೆ. ಹೊಸ ಸಿನಿಮಾದ ಪಾತ್ರದ ಬಗ್ಗೆ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.
'ಲಾಕಪ್ ಡೆತ್', 'Ak 47', 'ಮಂಡ್ಯ', 'ಹುಬ್ಬಳ್ಳಿ', 'ಕಲಾಸಿಪಾಳ್ಯ'ದಂತಹ ಪಕ್ಕಾ ಆಕ್ಷನ್ ಸಿನಿಮಾಗಳನ್ನು ನಿರ್ದೇಶನ ಮಾಡಿರೋ ಓಂ ಪ್ರಕಾಶ್ ರಾವ್ ಕಮ್‌ಬ್ಯಾಕ್ ಸಿನಿಮಾವಿದು. ಇತ್ತೀಚೆಗೆ ಈ ಸಿನಿಮಾ 'ಫೀನಿಕ್ಸ್' ಸಿನಿಮಾದ ಮುಹೂರ್ತ ಸಮಾರಂಭ ಮಾಗಡಿ ರಸ್ತೆಯ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ನಡೀತು.
"ಇದೊಂದು ಮಹಿಳಾ ಪ್ರಧಾನ ಚಿತ್ರ. ರಿಮೇಕ್ ಚಿತ್ರಗಳಿಗೆ ಬ್ರೇಕ್ ಹಾಕಿ ಸ್ವಮೇಕ್ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದೇನೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದ ನಾಯಕಿಯರಾಗಿ ನಿಮಿಕಾ ರತ್ನಾಕರ್, ಕೃತಿಕಾ ಲೋಗೊ, ತನುಷಾ ರಜಪುತ್ ನಟಿಸುತ್ತಿದ್ದಾರೆ. ಭಾಸ್ಕರ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬೆಂಗಳೂರು, ಜರ್ಮನ್ ಹಾಗೂ ಆಸ್ಟ್ರೀಯಾ ದಲ್ಲಿ ಚಿತ್ರೀಕರಣ ನಡೆಯಲಿದೆ. ಶ್ರೀಗುರು ಚಿತ್ರಾಲಯ ಲಾಂಛನದಲ್ಲಿ ತ್ರಿಶಾ ಪ್ರಕಾಶ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ನನ್ನ ನಿರ್ದೇಶನದ 49ನೇ ಸಿನಿಮಾ" ಎಂದು ನಿರ್ದೇಶಕ ಓಂಪ್ರಕಾಶ್ ರಾವ್ ಹೇಳಿದ್ದಾರೆ.

"ಈ ಸಿನಿಮಾದ ಶೀರ್ಷಿಕೆ ಕೇಳಿ ನನಗೆ ಈ ಚಿತ್ರದಲ್ಲಿ ನಟಿಸುವ ಆಸೆಯಾಯಿತು. ಕಥೆ ಕೇಳಿದ ಮೇಲಂತೂ ಬಹಳ ಖುಷಿಯಾಯಿತು. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ" ಎಂದು ನಿಮಿಕಾ ರತ್ನಾಕರ್ ಹೇಳಿದ್ದಾರೆ. "ನಾನು ಈ ಹಿಂದೆ ಓಂಪ್ರಕಾಶ್ ರಾವ್ ಅವರ ನಿರ್ದೇಶನ ಎರಡು ಚಿತ್ರಗಳಲ್ಲಿ ನಟಿಸಿದ್ದೆ. ಇದು ಮೂರನೇ ಚಿತ್ರ." ಎಂದು ಮತ್ತೊಬ್ಬ ನಾಯಕಿ ಕೃತಿಕ ಲೋಗೊ ಹೇಳಿದ್ದಾರೆ.
"ನಾನು ಈವರೆಗೂ ತೊಂಭತ್ತು ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ ಈ ಚಿತ್ರದಲ್ಲಿ ನಿರ್ದೇಶಕರು ಪ್ರಮಖಪಾತ್ರ ನೀಡಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರ ನನ್ನದು" ಎಂದು ಭಾಸ್ಕರ್ ಶೆಟ್ಟಿ ಹೇಳಿದ್ದಾರೆ. ಇನ್ನು ತ್ರಿಶಾ ಪ್ರಕಾಶ್ ಶ್ರೀ ಗುರು ಚಿತ್ರಾಲಯ ಬ್ಯಾನರ್‌ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
'ಫೀನಿಕ್ಸ್' ಸಿನಿಮಾದಲ್ಲಿ ಕಾಕ್ರೋಜ್ ಸುಧೀ, ವಿನೋದ್ ಕಿನ್ನಿ, ರೋಬೊ ಗಣೇಶ್, ಆರ್ಯನ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಹಾಗೇ ಎಂ ಎಸ್ ರಮೇಶ್ ಸಂಭಾಷಣೆ ಬರೆಯುತ್ತಿದ್ದಾರೆ. "ನಾನು ಹಾಗೂ ಓಂಪ್ರಕಾಶ್ ರಾವ್ ಮೂವತ್ತು ವರ್ಷದ ಗೆಳೆಯರು. ಓಂಪ್ರಕಾಶ್ ರಾವ್ ನಿರ್ದೆಶನದ ಬಹುತೇಕ ಚಿತ್ರಗಳಿಗೆ ನಾನೇ ಸಂಭಾಷಣೆ ಬರೆದಿದ್ದೇನೆ. ಈ ಚಿತ್ರಕ್ಕೂ ಬರೆಯುತ್ತಿದ್ದೇನೆ" ಎಂದರು ಎಂ.ಎಸ್ ರಮೇಶ್ ಹೇಳಿದ್ದಾರೆ. ಅಂದ್ಹಾಗೆ, ಸಾಧುಕೋಕಿಲ ಸಂಗೀತ ನಿರ್ದೇಶನವಿದ್ದರೆ, ರವಿಕುಮಾರ್ ಕ್ಯಾಮರಾ, ಲಕ್ಷ್ಮಣ್ ರೆಡ್ಡಿ ಎಡಿಟಿಂಗ್, ವಿಜಯನ್ ಸಾಹಸ ನಿರ್ದೇಶನವಿದೆ.


Click it and Unblock the Notifications











