For Quick Alerts
  ALLOW NOTIFICATIONS  
  For Daily Alerts

  ಕ್ರಾಂತಿ ಮೊದಲ ಹಾಡು 'ಧರಣಿ' ಮೈಸೂರಿನ ಯಾವ ಸ್ಥಳದಲ್ಲಿ, ಎಷ್ಟು ಗಂಟೆಗೆ ಬಿಡುಗಡೆ? ಇಲ್ಲಿದೆ ಮಾಹಿತಿ

  |

  ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ರಾಬರ್ಟ್ ಬಿಡುಗಡೆಯಾಗಿದ್ದು ಬಿಟ್ಟರೆ, ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ಅಭಿನಯಿಸಿದ ಯಾವ ಚಿತ್ರಗಳೂ ಸಹ ತೆರೆಗೆ ಬಂದಿಲ್ಲ. ಅದರಲ್ಲಿಯೂ ದರ್ಶನ್ ಅಭಿನಯದ ಯಾವ ಚಿತ್ರವೂ ಈ ವರ್ಷ ಬಿಡುಗಡೆಗೊಳ್ಳದಿರುವುದು ಅಭಿಮಾನಿಗಳಲ್ಲಿ ಹಾಗೂ ಸಿನಿ ರಸಿಕರಲ್ಲಿ ನಿರಾಸೆ ಮೂಡಿಸಿದೆ.

  ಇನ್ನು ಎಲ್ಲಾ ಯೋಜನೆ ಪ್ರಕಾರವೇ ನಡೆದಿದ್ದರೆ ಈ ವರ್ಷದ ನವೆಂಬರ್ ತಿಂಗಳಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕ್ರಾಂತಿ ಚಿತ್ರ ಬಿಡುಗಡೆಗೊಳ್ಳಬೇಕಿತ್ತು. ಆದರೆ ಚಿತ್ರದ ಕೆಲಸಗಳು ಸಂಪೂರ್ಣವಾಗದ ಕಾರಣ ಕ್ರಾಂತಿ ಚಿತ್ರವನ್ನು ಈ ವರ್ಷದಿಂದ ಮುಂದಿನ ವರ್ಷಕ್ಕೆ ಮುಂದೂಡಲಾಗಿದ್ದು, ಮುಂಬರುವ ಗಣರಾಜ್ಯೋತ್ಸವದ ಪ್ರಯುಕ್ತ ಕ್ರಾಂತಿ ಚಿತ್ರ ತೆರೆಗೆ ಅಪ್ಪಳಿಸಲಿದೆ.

  ಬಿಡುಗಡೆ ದಿನ ಸಮೀಪಿಸುತ್ತಿದ್ದಂತೆ ಕ್ರಾಂತಿ ಚಿತ್ರತಂಡ ಪ್ರಚಾರದ ಕೆಲಸಗಳನ್ನು ಆರಂಭಿಸಿದ್ದು, ಒಂದೆಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಲು ಸಾಲು ಸಂದರ್ಶನಗಳಲ್ಲಿ ಭಾಗವಹಿಸುತ್ತಿದ್ದರೆ, ಇನ್ನೊಂದೆಡೆ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಲು ಚಿತ್ರತಂಡ ದಿನಾಂಕವನ್ನು ನಿಗದಿ ಮಾಡಿದೆ. ಹೌದು, ಕ್ರಾಂತಿ ಚಿತ್ರದ ಮೊದಲ ಹಾಡು 'ಧರಣಿ ಥೀಮ್ ಸಾಂಗ್' ಅನ್ನು ಇದೇ ಡಿಸೆಂಬರ್ 10ರಂದು ಡಿ ಬೀಟ್ಸ್ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಮೈಸೂರಿನಲ್ಲಿ ಹಾಡನ್ನು ಬಿಡುಗಡೆಗೊಳಿಸಲಾಗುವುದು ಎಂದಿದ್ದ ಚಿತ್ರತಂಡ ಇದೀಗ ಮೈಸೂರಿನ ಯಾವ ಸ್ಥಳದಲ್ಲಿ ಹಾಗೂ ಎಷ್ಟು ಗಂಟೆಗೆ ಹಾಡನ್ನು ಬಿಡುಗಡೆ ಮಾಡಲಾಗುವುದು ಎಂಬುದನ್ನು ಘೋಷಿಸಿದೆ.

  ಹಾಡು ಬಿಡುಗಡೆಯ ಸಮಯ ಹಾಗೂ ಸ್ಥಳದ ಮಾಹಿತಿ

  ಹಾಡು ಬಿಡುಗಡೆಯ ಸಮಯ ಹಾಗೂ ಸ್ಥಳದ ಮಾಹಿತಿ

  ಕ್ರಾಂತಿ ಚಿತ್ರದ 'ಧರಣಿ' ಎಂಬ ಥೀಮ್ ಹಾಡನ್ನು ಡಿಸೆಂಬರ್ 10ರ ಸಂಜೆ 7 ಗಂಟೆಗೆ ಮೈಸೂರು ಹಾಗೂ ಹುಣಸೂರು ರಸ್ತೆಯ ಹಿನಕಲ್‌ನಲ್ಲಿರುವ ವಿಜಯ ಟೆಂಟ್ ಹೌಸ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ವಿಶೇಷ ಪೋಸ್ಟರ್ ಹಂಚಿಕೊಳ್ಳುವುದರ ಮೂಲಕ ತಿಳಿಸಿದೆ ಹಾಗೂ ಹಾಡು ಬಿಡುಗಡೆ ಕಾರ್ಯಕ್ರಮಕ್ಕೆ ನೀವೂ ಸಹ ಹಾಜರಾಗಿ ಎಂದು ಆಹ್ವಾನಿಸಿದೆ. ಈ ವಿಜಯ್ ಟೆಂಟ್ ಹೌಸ್ ಮೈಸೂರು ನಗರದ ಹೊರ ವಲಯದಲ್ಲಿದ್ದು, ಸಿಟಿ ಬಸ್ ಸ್ಟಾಂಡ್‌ನಿಂದ ಸುಮಾರು ಎಂಟು ಕಿಲೋಮೀಟರ್ ದೂರವಿದೆ.

  ಹಾಡಿನ ಬಗ್ಗೆ ದರ್ಶನ್ ವಿಶ್ವಾಸ

  ಹಾಡಿನ ಬಗ್ಗೆ ದರ್ಶನ್ ವಿಶ್ವಾಸ

  ಇನ್ನು ಚಿತ್ರದ ಪ್ರಚಾರದ ಸಂದರ್ಶನವೊಂದರಲ್ಲಿ ಧರಣಿ ಹಾಡಿನ ಬಗ್ಗೆ ಮಾತನಾಡಿದ ದರ್ಶನ್ ಹಾಡಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಧರಣಿ ಹಾಡು ಸ್ನೇಹಿತರ ಬಗ್ಗೆ ಹಾಗೂ ಸರ್ಕಾರಿ ಶಾಲೆಗಳ ಮಹತ್ವ ಮತ್ತು ವಿಶೇಷತೆ ಬಗ್ಗೆ ಇರಲಿದೆ, ಹಾಡು ಖಂಡಿತವಾಗಿ ಗೂಸ್‌ಬಂಪ್ಸ್ ನೀಡಲಿದೆ ಎಂದು ತಿಳಿಸಿದರು. ಈ ಮೂಲಕ ಮತ್ತೊಮ್ಮೆ ತಮ್ಮ ಹಾಗೂ ವಿ ಹರಿಕೃಷ್ಣ ಅವರ ಕಾಂಬಿನೇಶನ್ ಮೋಡಿ ಮಾಡಲಿದೆ ಎಂಬುದನ್ನು ದರ್ಶನ್ ಪರೋಕ್ಷವಾಗಿ ತಿಳಿಸಿದ್ದಾರೆ.

  ಹಾಡಿನ ಬಗ್ಗೆ ಹೆಚ್ಚು ಮಾಹಿತಿ ಬಿಟ್ಟುಕೊಟ್ಟಿಲ್ಲ

  ಹಾಡಿನ ಬಗ್ಗೆ ಹೆಚ್ಚು ಮಾಹಿತಿ ಬಿಟ್ಟುಕೊಟ್ಟಿಲ್ಲ

  ಹಾಡು ಯಾವ ಸಮಯಕ್ಕೆ ಹಾಗೂ ಯಾವ ಸ್ಥಳದಲ್ಲಿ ಬಿಡುಗಡೆಯಾಗಲಿದೆ ಎಂಬುದರ ಕುರಿತು ಮಾಹಿತಿ ಹಂಚಿಕೊಂಡಿರುವ ಕ್ರಾಂತಿ ಚಿತ್ರತಂ ಹಾಡಿಗೆ ಸಾಹಿತ್ಯ ಬರೆದಿರುವವರು ಯಾರು ಹಾಗೂ ಹಾಡಿನ ಅವಧಿ ಎಷ್ಟು ನಿಮಿಷಗಳು ಇರಲಿದೆ ಎಂಬುದನ್ನು ಮಾತ್ರ ಹಂಚಿಕೊಂಡಿಲ್ಲ. ತಂಡ ಹಾಡನ್ನು ರಚಿಸಿರುವವರು ಯಾರು ಎಂಬ ಮಾಹಿತಿಯನ್ನಾದರೂ ಹಂಚಿಕೊಳ್ಳಬೇಕಿತ್ತು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  English summary
  Kranti movie's Dharani song releasing at 7pm on December 10 in Vijay tent house Mysuru. Read on
  Monday, December 5, 2022, 16:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X