For Quick Alerts
  ALLOW NOTIFICATIONS  
  For Daily Alerts

  ಅಪ್ಪು ನೆಚ್ಚಿನ ಊರಿನಲ್ಲಿ ಈ ದಿನಾಂಕದಂದು 'ಕ್ರಾಂತಿ' 2ನೇ ಹಾಡು ಬಿಡುಗಡೆ; ದರ್ಶನ್‌ರಿಂದ ಅಧಿಕೃತ ಘೋಷಣೆ

  |

  ಕ್ರಾಂತಿ ಚಿತ್ರದ ಬಿಡುಗಡೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಚಿತ್ರದ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿವೆ. ಅಭಿಮಾನಿಗಳು ಕ್ರಾಂತಿ ಪ್ರಚಾರವನ್ನು ಸ್ವತಃ ಮಾಡುತ್ತಿದ್ದರೆ, ಚಿತ್ರತಂಡ ಹಾಡುಗಳನ್ನು ಬಿಡುಗಡೆ ಮಾಡುವುದರ ಮೂಲಕ ಚಿತ್ರದ ಹೈಪ್ ಹೆಚ್ಚಿಸುವ ಕಾರ್ಯದಲ್ಲಿ ನಿರತವಾಗಿದೆ. ನಿಗದಿಪಡಿಸಿದಂತೆ ಕ್ರಾಂತಿ ಚಿತ್ರದ ಮೊದಲ ಹಾಡು 'ಧರಣಿ' ಇಂದು ( ಡಿಸೆಂಬರ್ 10 ) ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಿಡುಗಡೆಯಾಗಿದೆ.

  ದರ್ಶನ್ ಅವರ ನೆಚ್ಚಿನ ಅಭಿಮಾನಿಗಳಿಂದಲೇ ಬಿಡುಗಡೆಗೊಂಡ ಈ ಹಾಡು ಡಿ ಬೀಟ್ಸ್ ಮ್ಯೂಸಿಕ್ ಯುಟ್ಯೂಬ್ ಚಾನೆಲ್‌ನಲ್ಲಿ ಕೇಳಲು ಲಭ್ಯವಿದೆ. 'ಧರಣಿ ಮಂಡಲ ಮಧ್ಯದಲಿ.. ಮೆರೆವ ಕನ್ನಡ ದೇಶದಲಿ..' ಎಂಬ ಸಾಲುಗಳಿಂದ ಆರಂಭವಾಗುವ ಈ ಹಾಡಿನಲ್ಲಿ ಕನ್ನಡ ಹಾಗೂ ಕನ್ನಡಕ್ಕಾಗಿ ಬದುಕಿ ಹೋರಾಡಿದ ಹಲವಾರು ಸಾಧಕರನ್ನು ನೆನೆಯಲಾಗಿದೆ, ಕನ್ನಡ ಭಾಷೆಗಿರುವ ಮಹತ್ವ ಹಾಗೂ ಇತಿಹಾಸವನ್ನು ತಿಳಿಸಲಾಗಿದೆ. ಇನ್ನು ಈ ಹಾಡು ಲಿರಿಕಲ್ ವಿಡಿಯೊ ರೂಪದಲ್ಲಿದ್ದು, ಹಾಡಿನ ಕೆಲ ದೃಶ್ಯದ ತುಣುಕುಗಳೂ ಸಹ ಕಾಣಸಿಗಲಿವೆ.

  ವಿ ನಾಗೇಂದ್ರ ಪ್ರಸಾದ್ ಹಾಡಿಗೆ ರೋಮಾಂಚನವಾಗುವಂತಹ ಸಾಹಿತ್ಯವನ್ನು ಬರೆದಿದ್ದು, ವಿ ಹರಿಕೃಷ್ಣ ಸಂಗೀತವನ್ನು ಸಂಯೋಜಿಸಿದ್ದಾರೆ. ಸದ್ಯ ಈ ಹಾಡು ಬಿಡುಗಡೆಗೊಂಡಿದ್ದು ಕನ್ನಡಿಗರ ಮನ ಗೆಲ್ಲುತ್ತಿದ್ದು, ಈ ಹಾಡಿನ ಬಳಿಕ ಚಿತ್ರತಂಡ ಮತ್ತೊಂದು ಹಾಡನ್ನು ಬಿಡುಗಡೆ ಮಾಡುತ್ತಾ ಅಥವಾ ಟ್ರೈಲರ್ ಬಿಡುಗಡೆ ಮಾಡುತ್ತಾ ಎಂಬ ಪ್ರಶ್ನೆ ಇತ್ತು. ಇನ್ನು ಈ ಪ್ರಶ್ನೆಗೆ ನಟ ದರ್ಶನ್ ಧರಣಿ ಹಾಡು ಬಿಡುಗಡೆಗೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಉತ್ತರ ನೀಡಿದ್ದಾರೆ.

  ಅಪ್ಪು ನೆಚ್ಚಿನ ಊರಿನಲ್ಲಿ ಎರಡನೇ ಸಾಂಗ್

  ಅಪ್ಪು ನೆಚ್ಚಿನ ಊರಿನಲ್ಲಿ ಎರಡನೇ ಸಾಂಗ್

  ಕ್ರಾಂತಿ ಚಿತ್ರದ ಎರಡನೇ ಹಾಡನ್ನು ಮುಂದಿನ ಭಾನುವಾರ ಅಂದರೆ ಡಿಸೆಂಬರ್ 18ರಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆ ಪಟ್ಟಣದಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಘೋಷಿಸಿದ್ದಾರೆ ಹಾಗೂ ಯಾವ ಹಾಡು ಎಂಬ ಮಾಹಿತಿಯನ್ನು ಅತಿ ಶೀಘ್ರದಲ್ಲೇ ತಿಳಿಸಲಿದ್ದೇವೆ ಎಂದೂ ಸಹ ದರ್ಶನ್ ಹೇಳಿದರು. ಇನ್ನು ಪುನೀತ್ ರಾಜ್‌ಕುಮಾರ್ ಹಲವು ಬಾರಿ ನನ್ನ ನೆಚ್ಚಿನ ಊರು ಎಂದು ಹೇಳಿದ್ದ ಹೊಸಪೇಟೆಯಲ್ಲಿ ಗೆಳೆಯ ದರ್ಶನ್ ಕ್ರಾಂತಿ ಚಿತ್ರದ ಎರಡನೇ ಹಾಡು ಬಿಡುಗಡೆಯಾಗಲಿರುವುದು ವಿಶೇಷವಾಗಿರಲಿದೆ.

  ಒಂದೊಂದು ಊರಿನಲ್ಲಿ ಒಂದೊಂದು ಹಾಡು?

  ಒಂದೊಂದು ಊರಿನಲ್ಲಿ ಒಂದೊಂದು ಹಾಡು?

  ಇನ್ನು ಮೈಸೂರಿನಲ್ಲಿ ಧರಣಿ ಹಾಡನ್ನು ಬಿಡುಗಡೆ ಮಾಡಿರುವ ಕ್ರಾಂತಿ ಚಿತ್ರತಂಡ ರಾಜ್ಯದ ಒಂದೊಂದು ಊರಿನಲ್ಲಿ ಒಂದೊಂದು ಹಾಡನ್ನು ಬಿಡುಗಡೆ ಮಾಡುವ ಉದ್ದೇಶವನ್ನು ಹೊಂದಿದೆ ಎಂಬ ಮಾಹಿತಿ ಇದೆ. ಈಗಾಗಲೇ ದರ್ಶನ್ ಎರಡನೇ ಹಾಡನ್ನು ಹೊಸಪೇಟೆಯಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿಕೆ ನೀಡಿರುವುದು ಒಂದೊಂದು ಊರಿನಲ್ಲಿ ಒಂದೊಂದು ಹಾಡು ಎಂಬ ಸೂಚನೆಯನ್ನು ನೀಡಿದ್ದು, ಬೆಳಗಾವಿಯಲ್ಲೂ ಸಹ ಒಂದು ಹಾಡು ಬಿಡುಗಡೆಯಾಗುವ ಸುದ್ದಿ ಇದೆ.

  ಒಂದೊಂದು ಹಾಡಿಗೂ ಒಂದೊಂದು ಬಣ್ಣದ ಉಡುಗೆ

  ಒಂದೊಂದು ಹಾಡಿಗೂ ಒಂದೊಂದು ಬಣ್ಣದ ಉಡುಗೆ

  ಅಷ್ಟೇ ಅಲ್ಲದೇ ಕ್ರಾಂತಿ ಚಿತ್ರದ ಒಂದೊಂದು ಹಾಡಿಗೂ ಚಿತ್ರತಂಡದ ಸದಸ್ಯರು ಒಂದೊಂದು ಬಣ್ಣದ ಉಡುಗೆ ಧರಿಸಲು ತೀರ್ಮಾನಿಸಿದ್ದಾರೆ. ಈ ಮಾಹಿತಿಯನ್ನೂ ಸಹ ಸ್ವತಃ ದರ್ಶನ್ ಅವರೇ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಧರಣಿ ಹಾಡು ಬಿಡುಗಡೆಗೆ ಎಲ್ಲರೂ ಯಾಕೆ ಕೆಂಪು ಬಣ್ಣದ ಬಟ್ಟೆಯನ್ನೇ ಧರಿಸಿ ಬಂದಿದ್ದೀರ ಎಂಬ ಪ್ರಶ್ನೆ ಎದುರಾದಾಗ ಉತ್ತರಿಸಿದ ದರ್ಶನ್ ಪ್ರತಿ ಹಾಡಿಗೂ ಬೇರೆ ಬೇರೆ ಬಣ್ಣದ ಉಡುಗೆ ತೊಡಲಿದ್ದೇವೆ ಎಂದು ತಿಳಿಸಿದರು.

  English summary
  Kranti second song releasing on December 18th at Hospete says Darshan
  Saturday, December 10, 2022, 20:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X