24 ಗಂಟೆಯಲ್ಲಿ ಹೆಚ್ಚು ವೀಕ್ಷಣೆ ಪಡೆದ ಟ್ರೈಲರ್ ದಾಖಲೆ: ಗಂಧದಗುಡಿಗೆ 3ನೇ ಸ್ಥಾನ, ಕ್ರಾಂತಿಗೆ ಎಷ್ಟು?
ಮೊನ್ನೆಯಷ್ಟೇ ( ಜನವರಿ 7 ) ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷಿತ ಕ್ರಾಂತಿ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿತು. ಚಿತ್ರದ ಟ್ರೈಲರ್‌ಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದರೆ, ಇನ್ನುಳಿದವರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಟ್ಟಿನಲ್ಲಿ ಕ್ರಾಂತಿ ಚಿತ್ರದ ಟ್ರೈಲರ್ ಅಭಿಮಾನಗಳಿಗಿದ್ದ ನಿರೀಕ್ಷೆಯನ್ನಂತೂ ಮೀರಿಸುವಲ್ಲಿ ಯಶಸ್ವಿಯಾಗಿದೆ.
ಟ್ರೈಲರ್ ವೀಕ್ಷಿಸಿದ ನಂತರ ಸರ್ಕಾರಿ ಶಾಲೆಯೊಂದರ ಜಾಗವನ್ನು ಕಬಳಿಸಲು ಯತ್ನಿಸುವ ಕಿಡಿಗೇಡಿಗಳ ವಿರುದ್ಧ ನಾಯಕ ಹೇಗೆ ಹೋರಾಡ್ತಾನೆ ಎನ್ನುವುದೇ ಚಿತ್ರದ ಕಥಾ ಹಂದರ ಎಂದು ಸಿನಿ ರಸಿಕರು ಕ್ರಾಂತಿ ಚಿತ್ರದ ಕಥೆಯನ್ನು ಊಹಿಸುತ್ತಿದ್ದು, ಚರ್ಚೆಗಳು ಹೆಚ್ಚಾಗುತ್ತಿವೆ. ಇನ್ನು ಈ ಟ್ರೈಲರ್‌ನಲ್ಲಿರುವ ಡೈಲಾಗ್‌ಗಳಿಗೆ ವಿಶೇಷ ಪ್ರಶಂಸೆ ಸಿಕ್ಕಿದೆ. ಅದರಲ್ಲಿಯೂ ಅಭಿಮಾನಿಗಳಿಗಂತೂ ಡೈಲಾಗ್ ಅಚ್ಚುಮೆಚ್ಚಾಗಿವೆ.
ಒಂದೆಡೆ ಟ್ರೈಲರ್‌ನಲ್ಲಿ ಅದು ಚೆನ್ನಾಗಿದೆ, ಇದು ಇರಬಾರದಿತ್ತು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದರೆ ಮತ್ತೊಂದೆಡೆ ಟ್ರೈಲರ್ ಬಿಡುಗಡೆಯಾದ 24 ಗಂಟೆಗಳಲ್ಲಿ ಎಷ್ಟು ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿತು ಎಂಬ ಪೈಪೋಟಿಯ ಲೆಕ್ಕಾಚಾರದ ಬಗ್ಗೆ ಕೂಡ ಚರ್ಚೆ ಏರ್ಪಟ್ಟಿದೆ. ಇನ್ನು ಟ್ರೈಲರ್ ಬಿಡುಗಡೆಯಾಗುವ ಮುನ್ನವೇ ದರ್ಶನ್ ಅಭಿಮಾನಿಗಳು ದಾಖಲೆ ನಿರ್ಮಿಸುವಂತಹ ವ್ಯೂಸ್ ಬರಲೇಬೇಕು ಎಂದು ಯೋಜನೆ ರೂಪಿಸಿಕೊಂಡಿದ್ರು.

24 ಗಂಟೆಗಳಲ್ಲಿ ಕ್ರಾಂತಿ ಟ್ರೈಲರ್ ಗಳಿಸಿದ್ದೆಷ್ಟು?
ಅಂತಿಮವಾಗಿ ಬಿಡುಗಡೆಯಾದ 24 ಗಂಟೆಗಳಲ್ಲಿ ಕ್ರಾಂತಿ ಚಿತ್ರದ ಟ್ರೈಲರ್ 7.8 ಮಿಲಿಯನ್ ವೀಕ್ಷಣೆ ಪಡೆದುಕೊಂಡರೆ, 394000 ಮೆಚ್ಚುಗೆಯನ್ನು ಪಡೆದುಕೊಂಡಿದೆ. ಈ ಮೂಲಕ ಕನ್ನಡ ಚಲನಚಿತ್ರರಂಗದ ಇತಿಹಾಸದಲ್ಲಿ ಬಿಡುಗಡೆಗೊಂಡ 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡ ಟ್ರೈಲರ್‌ಗಳ ಪಟ್ಟಿಯಲ್ಲಿ ಕ್ರಾಂತಿ ಟ್ರೈಲರ್ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ ಹಾಗೂ ಅತಿಹೆಚ್ಚು ಲೈಕ್ಸ್ ಪಡೆದುಕೊಂಡ ಟ್ರೈಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಗಂಧದಗುಡಿ ಜತೆ ಹಂಚಿಕೊಂಡಿದೆ.

ಅತಿಹೆಚ್ಚು ವೀಕ್ಷಣೆ ಪಡೆದ ಟ್ರೈಲರ್‌ಗಳು
ಬಿಡುಗಡೆಗೊಂಡ ಮೊದಲ 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡ ಟಾಪ್ 5 ಕನ್ನಡ ಸಿನಿಮಾಗಳ ಟ್ರೈಲರ್‌ಗಳ ಪಟ್ಟಿ ಈ ಕೆಳಕಂಡಂತಿದೆ..
1. ಕೆಜಿಎಫ್ ಚಾಪ್ಟರ್ 2 - 18 ಮಿಲಿಯನ್ ವೀಕ್ಷಣೆಗಳು
2. ಯಜಮಾನ - 10 ಮಿಲಿಯನ್ ವೀಕ್ಷಣೆಗಳು
3. ಗಂಧದ ಗುಡಿ - 8.1 ಮಿಲಿಯನ್ ವೀಕ್ಷಣೆಗಳು
4. ಕ್ರಾಂತಿ - 7.8 ಮಿಲಿಯನ್ ವೀಕ್ಷಣೆಗಳು
5. ವಿಕ್ರಾಂತ್ ರೋಣ - 7.1 ಮಿಲಿಯನ್ ವೀಕ್ಷಣೆಗಳು

ಅತಿಹೆಚ್ಚು ಲೈಕ್ಸ್ ಪಡೆದ ಟ್ರೈಲರ್‌ಗಳು
ಬಿಡುಗಡೆಗೊಂಡ ಮೊದಲ 24 ಗಂಟೆಗಳಲ್ಲಿ ಅತಿಹೆಚ್ಚು ಲೈಕ್ಸ್ ಪಡೆದುಕೊಂಡ ಟಾಪ್ 5 ಕನ್ನಡ ಸಿನಿಮಾಗಳ ಟ್ರೈಲರ್‌ಗಳ ಪಟ್ಟಿ ಈ ಕೆಳಕಂಡಂತಿದೆ..
1. ಕೆಜಿಎಫ್ ಚಾಪ್ಟರ್ 2 - 7,78,000 ಲೈಕ್ಸ್
2. ಗಂಧದ ಗುಡಿ - 3,94,000 ಲೈಕ್ಸ್ ಹಾಗೂ ಕ್ರಾಂತಿ - 3,94,000 ಲೈಕ್ಸ್
3. ವಿಕ್ರಾಂತ್ ರೋಣ - 3,83,000 ಲೈಕ್ಸ್
4. 777 ಚಾರ್ಲಿ - 3,54,000 ಲೈಕ್ಸ್
5. ರಾಬರ್ಟ್ - 3,51,000 ಲೈಕ್ಸ್


Click it and Unblock the Notifications











