»   » 'ಸಂಗೊಳ್ಳಿ ರಾಯಣ್ಣ' ಚಿತ್ರದ ನಿರ್ಮಾಪಕ ಗಳಗಳನೆ ಕಣ್ಣೀರಿಟ್ಟಿದ್ದೇಕೆ?

'ಸಂಗೊಳ್ಳಿ ರಾಯಣ್ಣ' ಚಿತ್ರದ ನಿರ್ಮಾಪಕ ಗಳಗಳನೆ ಕಣ್ಣೀರಿಟ್ಟಿದ್ದೇಕೆ?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರವನ್ನ ನಿರ್ಮಾಣ ಮಾಡಿದ್ದ ಆನಂದ್ ಅಪ್ಪುಗೋಳ್ ಕನ್ನಡದ ಶ್ರೀಮಂತ್ರ ನಿರ್ಮಾಪಕರಲ್ಲಿ ಒಬ್ಬರು. ಮಾಡಿದ್ದು ಒಂದೇ ಚಿತ್ರವಾದರೂ ಅದ್ಧೂರಿ ಬಜೆಟ್ ನಲ್ಲಿ ತಯಾರು ಮಾಡಿದ್ರು. ಅದೇ ರೀತಿ ಈ ಚಿತ್ರ ಕೂಡ ಕನ್ನಡ ಇತಿಹಾಸದಲ್ಲಿ ದಾಖಲೆ ಮಟ್ಟದ ಕಲೆಕ್ಷನ್ ಮಾಡಿ ರೆಕಾರ್ಡ್ ಮಾಡಿತ್ತು.

ಆದ್ರೀಗ, ದರ್ಶನ್ ಸಿನಿಮಾವನ್ನ ನಿರ್ಮಾಣ ಮಾಡಿದ್ದ ನಿರ್ಮಾಪಕ 300 ಕೋಟಿ ನಷ್ಟದಲ್ಲಿದ್ದಾರಂತೆ. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಆನಂದ್ ಅಪ್ಪುಗೋಳ್ ಕಣ್ಣಿರು ಹಾಕುವಂತಾಗಿದೆ.

ಅಷ್ಟಕ್ಕೂ, ಕೋಟಿ ನಿರ್ಮಾಪಕ ಆನಂದ್ ಅಪ್ಪುಗೋಳ್ ದಿಢೀರ್ ಅಂತ ನಷ್ಟವಾಗಿದ್ದೇಕೆ? ಮುಂದೆ ಓದಿ.....

ಸಂಗೊಳ್ಳಿ ರಾಯಣ್ಣ ಬ್ಯಾಂಕ್ ನಷ್ಟ

ಆನಂದ್ ಅಪ್ಪುಗೋಳ್ ಅವರು ವ್ಯವಸ್ಥಾಪಕ ನಿರ್ದೇಶಕರಾಗಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥೆಯಲ್ಲಿ ಹಣ ತೊಡಗಿಸಿರುವ ಗ್ರಾಹಕರು ಹಣ ವಾಪಸ್ ಮಾಡುವಂತೆ ದುಂಬಾಲು ಬಿದ್ದಿದ್ದಾರೆ. ಇವರ ಹಣ ವಾಪಸ್ ನೀಡಲು ಸಾಧ್ಯವಾಗದೆ ನಿರ್ಮಾಪಕ ಕಂಗಲಾಗಿದ್ದಾರೆ.

ರಿಯಲ್ ಎಸ್ಟೇಟ್ ನಷ್ಟವಾಗಿದ್ದು ಕಾರಣ

ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿದ ಶೇಕಡಾ 35 ರಷ್ಟು ಹಣವನ್ನ ರಿಯಲ್ ಎಸ್ಟೇಟ್ ನಲ್ಲಿ ಆನಂದ್ ಅಪ್ಪುಗೋಳ್ ಹೂಡಿಕೆ ಮಾಡಿದ್ದರು. ನೋಟ್ ಬ್ಯಾನ್ ಅದರ ಕಾರಣ ರಿಯಲ್ ಎಸ್ಟೇಟ್ ನಲ್ಲಿ ನಷ್ಟವಾಯಿತು. ಹೀಗಾಗಿ, ಆನಂದ್ ಅಪ್ಪುಗೋಳ್ ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರಂತೆ.

ಆಸ್ತಿ ಮಾರಿ ಹಣ ವಾಪಸ್ ಕೊಡ್ತೀನಿ

ಸಂಗೊಳ್ಳಿ ರಾಯಣ್ಣ ಬ್ಯಾಂಕಿನಲ್ಲಿ ಹಣ ಇಟ್ಟಿದ್ದ ಜನರು ಈಗ ಹಣ ವಾಪಸ್ ಕೇಳುತ್ತಿದ್ದಾರೆ. ಆದ್ರೆ, ಅವರ ಹಣವನ್ನ ವಾಪಸ್ ನೀಡಲಾಗಿದೆ ಆನಂದ್ ಅವರು ಸಂಕಷ್ಟಕ್ಕೆ ಒಳಗಗಾಗಿದ್ದಾರೆ. ಜನರು ಈಗ ಪ್ರತಿಭಟನೆಗೆ ಮುಂದಾಗಿದ್ದು, ಅವರಿಗೆಲ್ಲಾ ನನ್ನ ಆಸ್ತಿಯನ್ನ ಮಾರಿ ಹಣ ವಾಪಸ್ ಕೊಡ್ತಿನಿ ಎಂದು ಆನಂದ್ ಅವರು ಸಮಾಧಾನ ಪಡಿಸುತ್ತಿದ್ದಾರೆ.

ಆನಂದ್ ಅವರ ಕಷ್ಟಕ್ಕೆ ಪರಿಹಾರವೇನು?

ಸಂಗೊಳ್ಳಿ ರಾಯಣ್ಣ ಬ್ಯಾಂಕ್ ವಿವಿದ ಕಡೆ ಸುಮಾರು 50 ಬ್ರಾಂಚ್ ಗಳು ಕಾರ್ಯನಿರ್ವಹಿಸುತ್ತಿದೆ. ಸುಮಾರು 5೦ ಸಾವಿರ ಖಾತೆಗಳಿವೆ. ಈಗಾಗಲೇ 150 ಕೋಟಿ ಹಣವನ್ನ ವಾಪಸ್ ಕೊಟ್ಟಿದ್ದಾರಂತೆ. ಆದ್ರೆ, ಇನ್ನು 300 ಕೋಟಿವರೆಗೂ ಹಣ ನೀಡಬೇಕಾಗಿದೆಯಂತೆ. ಸದ್ಯ, ಜನರಿಂದ ಕಾಲವಕಾಶ ಪಡೆದುಕೊಂಡಿರುವ ಆನಂದ್ ಅವರು ಮುಂದೆ ಏನು ಮಾಡ್ತಾರೆ ಎಂಬುದು ನೋಡಬೇಕಿದೆ.

English summary
Krantiveer Sangoli Rayanna bank's Managing Director Anand Appugol in trouble. Producer Anand has to return back over Rs 300 cr deposited by customers of this co operative bank.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada