For Quick Alerts
  ALLOW NOTIFICATIONS  
  For Daily Alerts

  ಸಂಗೊಳ್ಳಿ ರಾಯಣ್ಣ ಇದುವರೆಗಿನ ಕಲೆಕ್ಷನ್ ಎಷ್ಟು?

  By Rajendra
  |

  ಈ ಪ್ರಶ್ನೆಗೆ ಕಡೆಗೂ ಉತ್ತರ ಸಿಕ್ಕಿದೆ! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವೃತ್ತಿಜೀವನದಲ್ಲಿ 'ರಾಯಣ್ಣ' ಚಿತ್ರ ಹೊಸದೊಂದು ಮೈಲಿಗಲ್ಲನ್ನು ಸೃಷ್ಟಿಸಿದೆ. ಫೆಬ್ರವರಿ 5ನೇ ತಾರೀಖಿಗೆ ಈ ಐತಿಹಾಸಿಕ ಚಿತ್ರ ಶತದಿನೋತ್ಸವ ಆಚರಿಸಿಕೊಳ್ಳಲಿದೆ. ಈ ಸಂಭ್ರಮವನ್ನು ಹಂಚಿಕೊಳ್ಳಲು ಫೆಬ್ರವರಿ 22ಕ್ಕೆ ಸಂಭ್ರಮದ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ.

  ಇದುವರೆಗೂ 'ರಾಯಣ್ಣ' ಚಿತ್ರದ ಕಲೆಕ್ಷನ್ ಎಷ್ಟು ಎಂಬ ಬಗ್ಗೆ ನಿಖರ ಮಾಹಿತಿ ಇರಲಿಲ್ಲ. ಶತದಿನೋತ್ಸವ ಸಂದರ್ಭದಲ್ಲಿ ಈ ವಿವರಗಳನ್ನು ನೀಡುವುದಾಗಿ ದರ್ಶನ್ ತಿಳಿಸಿದ್ದಾರೆ. ಅವರ ಪ್ರಕಾರ 75 ದಿನಗಳಲ್ಲಿ ರಾಯಣ್ಣ ಚಿತ್ರ ಸರಿಸುಮಾರು ರು.40 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದಿದ್ದಾರೆ. ಆದರೆ ಒಟ್ಟಾರೆ ಗಳಿಕೆ ಎಷ್ಟು ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಹೇಳಿದ್ದಾರೆ.

  'ರಾಯಣ್ಣ' ಚಿತ್ರ ಕೇವಲ ಕನ್ನಡಿಗರನ್ನಷ್ಟೇ ಅಲ್ಲದೆ ಪರಭಾಷಾ ಚಿತ್ರರಸಿಕರನ್ನೂ ಆಕರ್ಷಿಸುತ್ತಿದೆ. ಒಂದೆಡೆ ರಾಯಣ್ಣ ಶತದಿನೋತ್ಸವ ಸಂಭ್ರಮ, ಮತ್ತೊಂದೆಡೆ ಫೆಬ್ರವರಿ 16ಕ್ಕೆ ದರ್ಶನ್ ಹುಟ್ಟುಹಬ್ಬ ಸಂಭ್ರಮ. ಅವರ ಹುಟ್ಟುಹಬ್ಬದ ದಿನ ಹೊಸ ಚಿತ್ರ 'ಬೃಂದಾವನ' ಸೆಟ್ಟೇರಲಿದೆ.

  ಇನ್ನೊಂದು ವಿಶೇಷ ಎಂದರೆ, ಕಿತ್ತೂರಿನ ಚಿತ್ರಮಂದಿರದಲ್ಲಿ ಎರಡು ಬಾಕ್ಸ್ ಗಳನ್ನು ಇಡಲಾಗಿದ್ದು ಒಂದಕ್ಕೆ ರಾಣಿ ಕಿತ್ತೂರು ಚೆನ್ನಮ್ಮ ಎಂದು ಇನ್ನೊಂದಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದಿಡಲಾಗಿದೆ. ಇದುವರೆಗೂ ಈ ಚಿತ್ರಮಂದಿರಗಲ್ಲಿ ರು.5 ಲಕ್ಷ ಸಂಗ್ರಹವಾಗಿದೆ. ಇಲ್ಲಿ ಸಂಗ್ರಹವಾದ ಹಣವನ್ನು ರಾಯಣ್ಣ ಸಮಾಧಿ ಅಭಿವೃದ್ಧಿಗೆ ವಿನಿಯೋಗಿಸಿಕೊಳ್ಳಲಾಗುತ್ತದೆ ಎಂದು ದರ್ಶನ್ ವಿವರ ನೀಡಿದ್ದಾರೆ. (ಏಜೆನ್ಸೀಸ್)

  English summary
  Challenging Star Darsha's historical biopic 'Krantiveera Sangolli Rayanna' up until now Rs.40 cr plus collection in 75 days of screening. The film competing 100 days on 5th of February 2013. The 100 days grand function will be held on 22nd Feb in Bangalore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X