ದರ್ಶನ್ ನಟನೆಯ ಮತ್ತೊಂದು ಚಿತ್ರ ರೀ-ರಿಲೀಸ್; ಅಭಿಮಾನಿಗಳ ಉತ್ಸಾಹ ಕಮ್ಮಿ ಆಯ್ತಾ?
ನಟ ದರ್ಶನ್ 6 ವಾರಗಳ ಕಾಲ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ. ಇತ್ತೀಚೆಗೆ ದಿನಕರ್ ತೂಗುದೀಪ ನಿರ್ದೇಶನದ 'ನವಗ್ರಹ' ಸಿನಿಮಾ ಮರು ಬಿಡುಗಡೆ ಆಗಿತ್ತು. ಭರ್ಜರಿ ರೆಸ್ಪಾನ್ಸ್ ಸಹ ಸಿಕ್ಕಿತ್ತು. ಆದರೆ ಈ ವಾರ ಮತ್ತೊಂದು ಸಿನಿಮಾ ರೀ-ರಿಲೀಸ್ ಆಗ್ತಿದೆ. ಆದರೆ ಅಭಿಮಾನಿಗಳ ಉತ್ಸಾಹ ಕಡಿಮೆ ಆದಂತೆ ಕಾಣುತ್ತಿದೆ.
ದರ್ಶನ್ ನಟಿಸಿದ ಯಾವುದೇ ಸಿನಿಮಾ ತೆರೆಗೆ ಬಂದರೂ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟುತ್ತದೆ. ಆದರೆ ಬ್ಯಾಕ್ ಟು ಬ್ಯಾಕ್ ಹಳೇ ಚಿತ್ರಗಳು ಬಿಡುಗಡೆ ಆಗುತ್ತಲೇ ಇದೆ. 15 ದಿನಗಳ ಅಂತರದಲ್ಲಿ ಮತ್ತೊಂದು ಸಿನಿಮಾ ಬರ್ತಿದೆ. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳು ಸೈಲೆಂಟ್ ಆಗಿದ್ದಾರೆ.

ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ ಬಳಿಕ 'ರಾಬರ್ಟ್', 'ಶಾಸ್ತ್ರಿ', 'ಕರಿಯ', 'ಪೊರ್ಕಿ', 'ನವಗ್ರಹ' ಹೀಗೆ ದರ್ಶನ್ ನಟಿಸಿದ ಹಳೇ ಸಿನಿಮಾಗಳು ಹೊರ ರೂಪದಲ್ಲಿ ತೆರೆಗೆ ಬಂದಿದ್ದವು. ಅದರಲ್ಲಿ 'ಶಾಸ್ತ್ರಿ', 'ಕರಿಯ' ಹಾಗೂ 'ನವಗ್ರಹ' ಚಿತ್ರಗಳಿಗೆ ಅಭಿಮಾನಿಗಳ ರೆಸ್ಪಾನ್ಸ್ ಚೆನ್ನಾಗಿತ್ತು.
ದಿನಕರ್ ಅಂಡ್ ಟೀಂ ಭರ್ಜರಿ ಪ್ರಚಾರ ಮಾಡಿ 'ನವಗ್ರಹ' ಸಿನಿಮಾ ರೀ-ರಿಲೀಸ್ ಮಾಡಿದ್ದರು. ಹಾಗಾಗಿ ಚಿತ್ರಮಂದಿರಗಳ ಅಂಗಳದಲ್ಲಿ ಸೆಲೆಬ್ರೇಷನ್ ಜೋರಾಗಿತ್ತು. ಈ ವಾರ ದರ್ಶನ್ ನಟನೆಯ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾ ಮರುಬಿಡುಗಡೆ ಆಗುತ್ತಿದೆ. ನವೆಂಬರ್ 8ಕ್ಕೆ ಈ ಸಿನಿಮಾ ಐತಿಹಾಸಿಕ ಸಿನಿಮಾ ಕೂಡ ಬರಬೇಕಿತ್ತು. ಆದರೆ 'ನವಗ್ರಹ' ರಿಲೀಸ್ ವೇಳೆ ಬೇಡ ಎಂದು ಮುಂದೂಡಲಾಗಿತ್ತು.
ಈಗಾಗಲೇ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಕೂಡ ಶುರುವಾಗಿದೆ. ರಾಜ್ಯದ ಕೆಲ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಜೆಪಿ ನಗರದ ಸಿದ್ದಲಿಂಗೇಶ್ವರ, ಶಾರದಾ, ವಿನಾಯಕ ಸೇರಿದಂತೆ ನಗರದ ಕೆಲ ಚಿತ್ರಮಂದಿರಗಳಲ್ಲಿ ರಾಯಣ್ಣನ ದರ್ಬಾರ್ ಶುರುವಾಗುತ್ತಿದೆ. ಇದರಲ್ಲಿ ಸಿದ್ದಲಿಂಗೇಶ್ವರ ಚಿತ್ರಮಂದಿರದಲ್ಲಿ ಬೆಳಗ್ಗೆ 6.30 ಹಾಗೂ 10.30ರ ಶೋಗಳ ಟಿಕೆಟ್ ಬಹುತೇಕ ಸೋಲ್ಡೌಟ್ ಆಗಿದೆ.

ದರ್ಶನ್ ಸಿನಿಜೀವನಲ್ಲಿ ಮೈಲಿಗಲ್ಲಾದ ಸಿನಿಮಾ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ'. 12 ವರ್ಷಗಳ ಹಿಂದೆ ಈ ಐತಿಹಾಸಿಕ ಸಿನಿಮಾ ತೆರೆಗೆ ಬಂದಿತ್ತು. ನಾಗಣ್ಣ ನಿರ್ದೇಶನದ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದರು. ಸುದೀಪ್ ಹಿನ್ನೆಲೆ ದನಿಯಲ್ಲಿ ರಾಯಣ್ಣನ ಕಥೆಯನ್ನು ಹೇಳಿದ್ದರು. ಜಯಪ್ರದ, ಶಶಿಕುಮಾರ್, ನಿಖಿತಾ ತಾರಾಗಣದಲ್ಲಿದ್ದರು.
ಆನಂದ್ ಅಪ್ಪುಗೋಳ್ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದರು. ರಾಯಣ್ಣನ ಜೀವನಚರಿತ್ರೆಯನ್ನು ಆಧರಿಸಿ ಸಿನಿಮಾ ಮೂಡಿ ಬಂದಿತ್ತು. ರಮೇಶ್ ಬಾಬು ಛಾಯಾಗ್ರಹಣ, ಯಶೋವರ್ಧನ್ ಹಾಗೂ ವಿ. ಹರಿಕೃಷ್ಣ ಸಂಗೀತ ಚಿತ್ರಕ್ಕಿತ್ತು. ರಾಯಣ್ಣ ಪಾತ್ರದಲ್ಲಿ ದರ್ಶನ್ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಚಿತ್ರ ಬ್ಲಾಕ್‌ಬಸ್ಟರ್ ಹಿಟ್ ಲಿಸ್ಟ್ ಸೇರಿತ್ತು.
ಇವತ್ತಿಗೂ ದರ್ಶನ್ ಅಭಿಮಾನಿಗಳ ನೆಚ್ಚಿನ ಸಿನಿಮಾಗಳಲ್ಲಿ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಕೂಡ ಒಂದು. ಇದೇ ಚಿತ್ರ ಮುಂದೆ ದರ್ಶನ್ ಐತಿಹಾಸಿಕ, ಪೌರಾಣಿಕ ಪಾತ್ರಗಳಲ್ಲಿ ನಟಿಸಲು ಧೈರ್ಯ ತುಂಬಿತ್ತು. ಕುರುಕ್ಷೇತ್ರ ಚಿತ್ರದಲ್ಲಿ ದುರ್ಯೋಧನನಾಗಿ ಅಬ್ಬರಿಸಿ ಗೆದ್ದರು. 'ರಾಜಾವೀರ ಮದಕರಿ' ಸಿನಿಮಾ ಕೂಡ ಶುರುವಾಯಿತು.
ಮತ್ತೊಂದು ಕಡೆ ಇಂದು(ನವೆಂಬರ್ 21) ಮತ್ತೊಮ್ಮೆ ದರ್ಶನ್ ಹಾಗೂ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಬಹಳ ಹಿಂದೆಯೇ ದರ್ಶನ್ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅನಾರೋಗ್ಯದ ಹಿನ್ನೆಲೆ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ಮಾತ್ರ ಸಿಕ್ಕಿತ್ತು. ಬಳಿಕ ಬಿಜಿಎಸ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿದ್ದರು. ಇನ್ನು ಪವಿತ್ರಾ ಗೌಡ ಕೂಡ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದಾರೆ.


Click it and Unblock the Notifications











