ಪೈಲ್ವಾನ್ ವಿತರಣೆ ಹಕ್ಕು ಪಡೆದ ಕಾರ್ತಿಕ್ ಗೌಡ

Recommended Video

Pailvan Movie: ಪೈಲ್ವಾನ್ ವಿತರಣೆ ಹಕ್ಕು ಪಡೆದ ಕಾರ್ತಿಕ್ ಗೌಡ | FILMIBEAT KANNADA

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಚಿತ್ರ ಪೈಲ್ವಾನ್ ಬಿಡುಗಡೆ ಬಗ್ಗೆ ಅಧಿಕೃತ ಮಾಹಿತಿಗಾಗಿ ಚಿತ್ರಪ್ರೇಮಿಗಳು ಕಾದು ಕುಂತಿದ್ದಾರೆ. ಇಷ್ಟು ದಿನ ವರಮಹಾಲಕ್ಷ್ಮಿ ಹಬ್ಬಕ್ಕೆ ಬರುತ್ತೆ ಎನ್ನಲಾಗುತ್ತಿತ್ತು. ಆದ್ರೀಗ ಸುದೀಪ್ ಹುಟ್ಟುಹಬ್ಬಕ್ಕೆ ಪೈಲ್ವಾನ್ ಪೋಸ್ಟ್ ಪೋನ್ ಆಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಸದ್ಯ ಪೈಲ್ವಾನ್ ಬಿಡುಗಡೆ ಬಗ್ಗೆಯೇ ಅಭಿಮಾನಿಗಳಲ್ಲಿ ಗೊಂದಲ ಉಂಟಾಗಿದೆ. ಹೀಗಿರುವಾಗ, ಪೈಲ್ವಾನ್ ಚಿತ್ರದ ಆಡಿಯೋ ಯಾವಾಗ ಎಂಬ ಕುತೂಹಲ ಕಾಡ್ತಿದೆ. ಅಷ್ಟರಲ್ಲೇ ಪೈಲ್ವಾನ್ ಚಿತ್ರದ ಆಡಿಯೋ ಹಕ್ಕು ಖರೀದಿಸಿರುವ ಬಗ್ಗೆ ಲಹರಿ ಮ್ಯೂಸಿಕ್ ಸಂಸ್ಥೆ ಮಾಹಿತಿ ನೀಡಿದೆ.

ಐದು ಭಾಷೆಯಲ್ಲಿ ಪೈಲ್ವಾನ್ ಚಿತ್ರದ ಆಡಿಯೋ ಹಕ್ಕು ಪಡೆದುಕೊಂಡಿರುವ ಲಹರಿ ಸಂಸ್ಥೆ ಸದ್ಯದಲ್ಲೇ ಹಾಡುಗಳು ಅನಾವರಣ ಮಾಡಬಹುದು. ಇದೀಗ, ಪೈಲ್ವಾನ್ ಚಿತ್ರದ ಬಗ್ಗೆ ಇನ್ನೊಂದು ವಿಷ್ಯ ಸಿಕ್ಕಿದೆ.

KRG studio get the karnataka distribution rights for Pailwaan

ಯಶ್ ಅಭಿನಯಿಸಿದ್ದ ಕೆಜಿಎಫ್ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದ ಕಾರ್ತಿಕ್ ಗೌಡ ಅವರು, ಪೈಲ್ವಾನ್ ಚಿತ್ರದ ಕರ್ನಾಟಕ ವಿತರಣೆ ಹಕ್ಕು ಪಡೆದುಕೊಂಡಿದ್ದಾರೆ. ಉಳಿದಂತೆ ಐದಕ್ಕೂ ಹೆಚ್ಚು ಭಾಷೆಗಳಲ್ಲಿ ಪೈಲ್ವಾನ್ ಬರ್ತಿದ್ದು, ಬೇರೆ ಭಾಷೆಯಲ್ಲಿ ಮತ್ತು ಬೇರೆ ರಾಜ್ಯಗಳಲ್ಲಿ ಯಾರು ವಿತರಣೆ ಮಾಡಬಹುದು ಎಂಬುದರ ಬಗ್ಗೆ ಮಾಹಿತಿ ಇಲ್ಲ.

ಕಾರ್ತಿಕ್ ಗೌಡ ಸಾರಥ್ಯದ ಕೆ.ಆರ್.ಜಿ ಸ್ಟುಡಿಯೋ ಇತ್ತೀಚಿಗೆ ದರ್ಶನ್ ಅಭಿನಯದ ಯಜಮಾನ ಸಿನಿಮಾದ ಬಿಡುಗಡೆಯಲ್ಲಿ ಸಹಭಾಗಿತ್ವ ಹೊಂದಿದ್ದರು.

ಇನ್ನುಳಿದಂತೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು, ಸುದೀಪ್ ಜೊತೆಯಲ್ಲಿ ಆಕಾಂಕ್ಷ ಸಿಂಗ್ ನಾಯಕಿಯಾಗಿ ನಟಿಸಿದ್ದಾರೆ. ಕಬೀರ್ ದುಹಾನ್ ಸಿಂಗ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ ಮುಖ್ಯ ಪಾತ್ರವೊಂದರಲ್ಲಿ ಬಣ್ಣ ಹಚ್ಚಿದ್ದಾರೆ.

More from Filmibeat

English summary
Karthik gowda get the karnataka distribution rights for sudeep's Pailwaan movie. the movie will release on kiccha sudeep's birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X