ಹೊಂಬಾಳೆ ಫಿಲ್ಮ್ಸ್‌ನಿಂದ ಹೊರ ಬಂದ್ರಾ ಕಾರ್ತಿಕ್ ಗೌಡ? ವಿಜಯ್ ಕಿರಗಂದೂರು ಬಗ್ಗೆ ಕೆಆರ್‌ಜಿ ಮಾಲೀಕ ಹೇಳಿದ್ದೇನು?

By ಫಿಲ್ಮಿಬೀಟ್ ಡೆಸ್ಕ್

ಸ್ಯಾಂಡಲ್‌ವುಡ್‌ನ ಶ್ರೀಮಂತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್. ಈಗಾಗಲೇ ಈ ಸಂಸ್ಥೆಯಿಂದ ಮೆಗಾ ಸಿನಿಮಾಗಳು ನಿರ್ಮಾಣ ಆಗಿರುವುದು ಗೊತ್ತೇ ಇದೆ. 'ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ', 'ರಾಜಕುಮಾರ', 'ಕೆಜಿಎಫ್', 'ಕಾಂತಾರ', 'ಸಲಾರ್'ದಂತಹ ಸಿನಿಮಾಗಳೇ ಇದಕ್ಕೆ ಸಾಕ್ಷಿಯಂತಿವೆ.

ಹೊಂಬಾಳೆ ಫಿಲ್ಮ್ಸ್ ಕೇವಲ ಕನ್ನಡದಲ್ಲಷ್ಟೇ ಅಲ್ಲ, ಬೇರೆ ಭಾಷೆಯಲ್ಲೂ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿವೆ. 'ಸಲಾರ್'ಗೂ ಮುನ್ನ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಮಾಲೀಕ ವಿಜಯ್ ಕಿರಗಂದೂರು ಆಗಿದ್ದರೂ, ಕಾರ್ತಿಕ್ ಗೌಡ ಮುಂದಿರುತ್ತಿದ್ದರು. ಈ ಸಂಸ್ಥೆಯ ಮೆಗಾ ಬಜೆಟ್ ಸಿನಿಮಾಗಳನ್ನು ಯಶಸ್ವಿಯಾಗಿ ಪೂರೈಸುವುದಕ್ಕೆ ಇವರ ಪಾತ್ರ ದೊಡ್ಡದಿದೆ.

KRG Studio Karthik Gowda opens up about comments about him leaving Hombale Films

ಎಲ್ಲಕ್ಕಿಂತ ಹೆಚ್ಚಾಗಿ ಹೊಂಬಾಳೆ ಫಿಲ್ಮ್ಸ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೆಳೆಯುವುದಕ್ಕೂ ಕಾರ್ತಿಕ್ ಗೌಡ ಕೊಡುಗೆ ದೊಡ್ಡದಿದೆ. ಆದರೆ, ಕಳೆದ ಕೆಲವು ತಿಂಗಳಿನಿಂದ ಕಾರ್ತಿಕ್ ಗೌಡ ಹೊಂಬಾಳೆ ಫಿಲ್ಮ್ಸ್‌ನಿಂದ ಹೊರಬಂದಿದ್ದಾರೆಂಬ ಸುದ್ದಿ ಓಡಾಡುತ್ತಿತ್ತು. ವಿಜಯ್ ಕಿರಗಂದೂರು ಹಾಗೂ ಕಾರ್ತಿಕ್ ಗೌಡ ಮಧ್ಯೆ ಕಿತ್ತಾಟ ನಡೆದಿದೆ. ಈ ಕಾರಣಕ್ಕೆ ಕಾರ್ತಿಕ್ ಗೌಡ ಹೊಂಬಾಳೆಯಿಂದ ಹೊರಬಂದಿದ್ದಾರೆ ಅನ್ನೋ ಸುದ್ದಿ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲಿ ಹರಿದಾಡುತ್ತಿದೆ.

ಇಂತಹ ಚರ್ಚೆ ನಡೆಯುತ್ತಿರುವಾಗಲೇ ಕಾರ್ತಿಕ್ ಗೌಡ ಕೂಡ ತಮ್ಮ ಕೆಆರ್‌ಜಿ ಸ್ಟುಡಿಯೋದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ. ಹೊಸ ಹೊಸ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾಗಳನ್ನು ವಿತರಣೆ ಮಾಡುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿರುವ ಸಿನಿಮಾ ಜೊತೆಗೆ ಗುರುತಿಸಿಕೊಂಡಿಲ್ಲ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದವರು ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಅಂತ ಮಾತಾಡಿಕೊಳ್ಳುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಕೂಡ ಹೊಂಬಾಳೆ ಫಿಲ್ಮ್ಸ್‌ ಹಾಗೂ ಕಾರ್ತಿಕ್ ಗೌಡ ಬಗ್ಗೆ ಚರ್ಚೆಯಾಗಿತ್ತು. ಎಲ್ಲಾ ಗೊಂದಲಗಳ ಬಗ್ಗೆ 'ದಿ ಹಿಂದೂ' ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

KRG Studio Karthik Gowda opens up about comments about him leaving Hombale Films

"ಕೆಆರ್‌ಜಿ ಸ್ಟುಡಿಯೋ ಒಳಗೆ ಸಿಕ್ಕಾಪಟ್ಟೆ ಕೆಲಸ ನಡೆಯುತ್ತಿದೆ. ನಾನು ಅದರ ಬಗ್ಗೆ ಪ್ರಾಮುಖ್ಯತೆಯನ್ನು ನೀಡಬೇಕಿದೆ. ಅದು ಬಿಟ್ಟರೆ ಬೇರೆ ಏನೂ ಇಲ್ಲ. ಹೊಂಬಾಳೆ ಜೊತೆ ಏನೂ ನಡೆದಿಲ್ಲ. ವಿಜಯ್ ಕಿರಗಂದೂರು ಹೇಳಿ ಕೇಳಿ ನನ್ನ ಸಹೋದರ. ಸೋಶಿಯಲ್ ಮೀಡಿಯಾದಲ್ಲಿ ಬಂದಿರೋ ಕಾಮೆಂಟ್‌ಗಳ ಬಗ್ಗೆ ನಾನು ಉತ್ತರ ಕೊಡಬೇಕಿಲ್ಲ. " ಎಂದು ಸಂದರ್ಶಕರ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.

ಹಾಗೇ ಹೊಂಬಾಳೆ ಫಿಲ್ಮ್ಸ್ ಜೊತೆ ಯಾಕೆ ಸಿನಿಮಾ ಮಾಡುತ್ತಿಲ್ಲ ಅನ್ನೋದನ್ನು ಇದೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. "ಹೊಂಬಾಳೆಯ ಭಾಗವಾಗಿದ್ದೆ ಅನ್ನುವ ಕ್ರೆಡಿಟ್ ಅನ್ನು ಯಾರೂ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ. ಕೇವಲ ಪ್ರಾಮುಖ್ಯತೆ ಬದಲಾಗಿದೆ. ಕೆಆರ್‌ಜಿ ಸ್ಟುಡಿಯೋ ಬಗ್ಗೆ ಫೋಕಸ್ ಹೆಚ್ಚಾಗಿದೆ ಅಷ್ಟೇ. ಹಲವು ಪ್ರಾಜೆಕ್ಟ್‌ಗಳನ್ನು ಅಲ್ಲಿ ಮಾಡಲಿಲ್ಲ ಅಂತಲ್ಲ. ಅವುಗಳನ್ನು ನಾನು ಮಾಡಬೇಕು ಅಂತಿದ್ದೆ. ಆ ಸಮಯದಲ್ಲಿ ದೊಡ್ಡ ಬಜೆಟ್ ಸಿನಿಮಾಗಳು ಅಲ್ಲಿ ನಡೆಯುತ್ತಿದ್ದವು. ಅದು ಬಿಟ್ಟರೆ, ಏನೂ ಸಮಸ್ಯೆಯಿಲ್ಲ. ನಾನು ಸಾಕಷ್ಟು ಚಾಟ್‌ಗಳನ್ನು ನೋಡಿದ್ದೇನೆ. ಅದಕ್ಕೆಲ್ಲ ಉತ್ತರ ಕೊಡಬೇಕಾದ ಅಗತ್ಯವಿಲ್ಲ." ಎಂದು ಕಾರ್ತಿಕ್ ಗೌಡ ಹೇಳಿದ್ದಾರೆ.

More from Filmibeat

English summary
Karthik Gowda of KRG Studio addresses speculation about his departure from Hombale Films, offering clarity on his professional stance
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X