ವಿನಯ್ ರಾಜ್‌ಕುಮಾರ್ ಮಾಸ್ 'ಪೆಪೆ' ಚಿತ್ರಕ್ಕೆ ಸಿಕ್ತು ಆನೆಬಲ

ಈ ವರ್ಷ ಕನ್ನಡ ಚಿತ್ರರಂಗದಲ್ಲಿ ನಿರೀಕ್ಷೆ ಹುಟ್ಟು ಹಾಕಿರುವ ಸಿನಿಮಾ ಸಿನಿಮಾ 'ಪೆಪೆ' ಕೂಡ ಒಂದು. ವಿನಯ್ ರಾಜ್‌ಕುಮಾರ್ ಹೀರೊ ಆಗಿ ನಟಿಸಿರುವ ಸಿನಿಮಾ ಪೋಸ್ಟರ್, ಟೀಸರ್‌ಗಳಿಂದ್ಲೇ ಸಖತ್ ಸದ್ದು ಮಾಡ್ತಿದೆ. ಈಗಾಗಲೇ ಸೆನ್ಸಾರ್ ಮುಗಿಸಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

'ಪೆಪೆ ಪ್ರಿಸೆಟ್' ಹೆಸರಿನಲ್ಲಿ ಚಿತ್ರದ ವಿಶೇಷ ಹಾಡೊಂದು ಬಿಡುಗಡೆ ಆಗಿದೆ. ಜೇನು ಕುರುಬ ಬುಡಗಟ್ಟು ಜನಾಂಗದ ಆಚಾರ ವಿಚಾರ ತೆರೆದಿಡುವ ಗೀತೆಗೆ ಗಿರಿಜನ ಸಮಗ್ರ ಅಭಿವೃದ್ದಿ ಕಲಾ ಸಂಸ್ಥೆ ಹಾಗೂ ಜೆ. ಜಿ. ಕುಮಾರ ಧ್ವನಿಯಾಗಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಹಾಡಿಗೆ ಟ್ಯೂನ್ ಹಾಕಿದ್ದಾರೆ. ಸದ್ಯ 'ಪೆಪೆ ಪ್ರಿಸೆಟ್' ಸದ್ದು ಜೋರಾಗಿದೆ. ವಿನಯ್ ರಾಜ್‌ಕುಮಾರ್ ಚಿತ್ರದಲ್ಲಿ ಹಿಂದೆಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ಅಬ್ಬರಿಸಿದ್ದಾರೆ.

KRG Studios acquires distribution rights for Vinay Rajkumar starrer Pepe

ವಿನಯ್ ಅಂದ್ರೆ ಲವರ್ ಬಾಯ್ ಎನ್ನುವ ಇಮೇಜ್ ಇದೆ. ಆದರೆ 'ಪೆಪೆ' ಸಿನಿಮಾ ಅದನ್ನು ಸಂಪೂರ್ಣವಾಗಿ ಬದಲಾಯಿಸಲಿದೆ. ಮಲೆನಾಡಿದ ಸುತ್ತಾಮುತ್ತಾ ನಡೆಯುವ ಕಥೆ ಚಿತ್ರದಲ್ಲಿದೆ. ಕುಟುಂಬಗಳ ನಡುವೆ ನಡೆಯುವ ಪ್ರತಿಕಾರದ ಕಥೆಯನ್ನು ಶ್ರೀಲೇಶ್ ಎಸ್. ನಾಯರ್ ಕಟ್ಟಿಕೊಟ್ಟಿದ್ದಾರೆ. ಇದೊಂದು ಗ್ಯಾಂಗ್‌ಸ್ಟರ್ ಸಿನಿಮಾ ಎಂದೂ ಹೇಳಬಹುದು. ನಾಯಕಿಯಾಗಿ ಕಾಜಲ್‌ ಕುಂದರ್‌ ಮಿಂಚಿದ್ದಾರೆ. ಮಯೂರ್‌ ಪಟೇಲ್‌, ಯಶ್‌ ಶೆಟ್ಟಿ, ಬಲ ರಾಜ್‌ವಾಡಿ, ಅರುಣಾ ಬಾಲರಾಜ್‌ ತಾರಾಗಣದಲ್ಲಿದ್ದಾರೆ.

ಚಿತ್ರಕ್ಕೆ ಅಭಿಷೇಕ್‌ ಜಿ. ಕಾಸರಗೋಡು ಕ್ಯಾಮೆರಾ ವರ್ಕ್, ಪೂರ್ಣಚಂದ್ರ ತೇಜಸ್ವಿ ಸಂಗೀವಿದೆ. ಉದಯ್‌ ಸಿನಿ ವೆಂಚರ್‌ ಹಾಗೂ ದೀಪ ಫಿಲ್ಮ್ಸ್ ಬ್ಯಾನರ್‌ ಅಡಿಯಲ್ಲಿ ಉದಯ್ ಶಂಕರ್.ಎಸ್ ಹಾಗೂ ಬಿ.ಎಮ್ ಶ್ರೀರಾಮ್ ಚಿತ್ರಕ್ಕೆ ಹಣ ಹೂಡಿದ್ದಾರೆ. ರವಿವರ್ಮ, ಚೇತನ್‌ ಡಿಸೋಜಾ, ಡಿಫ್ರೆಂಟ್‌ ಡ್ಯಾನಿ, ನರಸಿಂಹ ಚಿತ್ರದ ಫೈಟ್ಸ್ ಕಂಪೋಸ್ ಮಾಡಿದ್ದಾರೆ.

KRG Studios acquires distribution rights for Vinay Rajkumar starrer Pepe

ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರಗಳಲ್ಲಿ 'ಪೆಪೆ' ಚಿತ್ರೀಕರಣ ನಡೆದಿದೆ. 'ಜಾಕಿ' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಫೈಯರ್ ಫೈಟ್ ಹೈಲೆಟ್ ಆಗಿತತು. ಅಂಥದ್ದೇ ಫೈಟ್ ಅನ್ನು ರವಿವರ್ಮಾ ಈ ಚಿತ್ರದಲ್ಲೂ ಕಂಪೋಸ್ ಮಾಡಿದ್ದಾರೆ. ಅದರ ಮೇಕಿಂಗ್ ಅನ್ನು ಹೊ ಸಾಂಗ್‌ನಲ್ಲಿ ನೋಡಬಹುದು. ಅದು ಅಭಿಮಾನಿಗಳಿಗೆ ಸಖತ್ ಮಜಾ ಕೊಡುವ ನಿರೀಕ್ಷೆಯಿದೆ.

ಸದ್ಯ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ 'ಪೆಪೆ' ಸಿನಿಮಾ ವಿತರಣೆ ಜವಾಬ್ದಾರಿ ವಹಿಸಿಕೊಂಡಿದೆ. ಸಿನಿಮಾಗಳ ವಿತರಣೆಯಲ್ಲಿ ಕೆಆರ್‌ಜಿ ಸಂಸ್ಥೆ ಒಳ್ಳೆ ಹೆಸರು ಮಾಡಿದೆ. ಆ ಸಂಸ್ಥೆ ಈಗ 'ಪೆಪೆ' ತಂಡದ ಜೊತೆ ನಿಂತಿರುವುವ ಆನೆ ಬಲ ಬಂದಂತೆ ಆಗಿದೆ. ಸಿನಿಮಾ ರಿಲೀಸ್ ಡೇಟ್ ಇನ್ನು ಘೋಷಣೆ ಆಗಿಲ್ಲ. ಇನ್ನೆರಡು ವಾರಗಳಲ್ಲಿ ಸಿನಿಮಾ ರಿಲೀಸ್ ಆಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ವಿನಯ್ ರಾಜ್‌ಕುಮಾರ್ ನಟನೆಯ 'ಒಂದು ಸರಳಪ್ರೇಮಕಥೆ' ಸಿನಿಮಾ ಇದೇ ವರ್ಷ ತೆರೆಗೆ ಬಂದಿತ್ತು. ಸುನಿ ನಿರ್ದೇಶನದ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಅಲ್ಲಿ ಲವರ್ ಬಾಯ್ ಆಗಿಯೇ ವಿನಯ್ ಕಾಣಿಸಿಕೊಂಡಿದ್ದರು. ಇದೀಗ ಕಂಪ್ಲೀಟ್ ಮಾಸ್ ರೋಲ್‌ನಲ್ಲಿ ಅಬ್ಬರಿಸಲು ಬರ್ತಿದ್ದಾರೆ. ಇದೊಂದು ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ ಆಗಿದ್ದು ಪ್ರೇಕ್ಷಕರ ಮನಗೆಲ್ಲುವ ಸುಳಿವು ಸಿಗುತ್ತಿದೆ. ಶೀಘ್ರದಲ್ಲೇ ಟ್ರೈಲರ್ ಸಹ ಬಿಡುಗಡೆ ಆಗಲಿದೆ.

ಬಹಳ ರಾ ಆಗಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ಮೊದಲ ಪ್ರಯತ್ನದಲ್ಲೇ ನಿರ್ದೇಶಕ ಶ್ರೀಲೇಶ್ ನಾಯರ್ ಭರವಸೆ ಮೂಡಿಸಿದ್ದಾರೆ. ಚಿತ್ರದಲ್ಲಿ 90ರ ದಶಕದಲ್ಲಿ ನಡೆಯುವ ಕಥೆಯನ್ನು ಹೇಳಲು ಬರುತ್ತಿದ್ದಾರೆ.

More from Filmibeat

English summary
Vinay Rajkumar's Pepe Film Entire Karnataka Release by KRG Studios;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X