'ಆದಿಪುರುಷ್' ಕನ್ನಡ ಸೆಲೆಬ್ರೆಟಿ ಶೋನಲ್ಲಿ ಯಶ್, ರಿಷಬ್, ರಕ್ಷಿತ್, ರಮ್ಯಾ, ಧನಂಜಯ್ ಭಾಗಿ?

ಬಹುನಿರೀಕ್ಷಿತ 'ಆದಿಪುರುಷ್' ಸಿನಿಮಾ ಬಿಡುಗಡೆಗೆ 3 ದಿನ ಮಾತ್ರ ಬಾಕಿಯಿದೆ. ಕರ್ನಾಟಕದಲ್ಲೂ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಕರ್ನಾಟಕ ಥ್ರಿಯೇಟ್ರಿಕಲ್ ರೈಟ್ಸ್ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಕೊಂಡುಕೊಂಡಿದೆ. ಈಗಾಗಲೇ ಆನ್‌ಲೈನ್ ಬುಕ್ಕಿಂಗ್ ಶುರುವಾಗಿದ್ದು ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಇನ್ನು 'ಆದಿಪುರುಷ್' ಕನ್ನಡ ಶೋಗಳ ಬಗ್ಗೆ ಕೂಡ ವಿತರಕ ಕಾರ್ತಿಕ್ ಗೌಡ ಮಾಹಿತಿ ನೀಡಿದ್ದಾರೆ.

ರಾಮಾಯಣ ಕಾವ್ಯ ಆಧರಿಸಿ ನಿರ್ಮಿಸಿರುವ ಈ ಪೌರಾಣಿಕ ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನಾಗಿ ಕಾಣಿಸಿಕೊಂಡಿದ್ದಾರೆ. ಓಂ ರಾವುತ್ ನಿರ್ದೇಶನದ ಈ ಚಿತ್ರದಲ್ಲಿ ಕೃತಿ ಸನೂನ್ ಸೀತೆಯಾಗಿ, ಸೈಫ್ ಅಲಿಖಾನ್ ರಾವಣನಾಗಿ ಸನ್ನಿ ಸಿಂಗ್ ಲಕ್ಷ್ಮಣನಾಗಿ ದೇವದತ್ತ ಹನುಮಂತನಾಗಿ ಬಣ್ಣ ಹಚ್ಚಿದ್ದಾರೆ. 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ದೊಡ್ಡದಾಗಿ ಸಿನಿಮಾ ರಿಲೀಸ್ ಆಗಲಿದೆ. ಪ್ರೇಕ್ಷಕರು ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

KRG Studios planning Adipurush kannada celebrity premiere on 16th of June

ಟೀ ಸೀರಿಸ್ ಹಾಗೂ ರೆಟ್ರೊಪ್ಲಿಸ್ ಸಂಸ್ಥೆಗಳು ಜಂಟಿಯಾಗಿ 'ಆದಿಪುರುಷ್' ಸಿನಿಮಾ ನಿರ್ಮಾಣ ಮಾಡಿವೆ. ಇವತ್ತಿನ ಕಾಲದ ತಂತ್ರಜ್ಞಾನ ಬಹಳ ತ್ರಿಡಿಯಲ್ಲಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ಈಗಾಗಲೇ ಹಲವು ರೂಪಗಳಲ್ಲಿ ರಾಮಾಯಣ ನೋಡಿದ್ದರೂ 'ಆದಿಪುರುಷ್' ಸಿನಿಮಾ ಅದ್ಭುತ ಅನುಭವ ನೀಡಲಿದೆ. ಈಗಾಗಲೇ ಟ್ರೈಲರ್‌, ಸಾಂಗ್ಸ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ.

ಕನ್ನಡ ಸೆಲೆಬ್ರೆಟಿ ಶೋ

ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ 'ಆದಿಪುರುಷ್' ಕರ್ನಾಟಕ ರೈಟ್ಸ್ ಪಡೆದಿದೆ. ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ತಯಾರಿ ನಡೀತಿದ್ದು ಭರ್ಜರಿ ಪ್ರೀಮಿಯರ್ ಶೋ ಪ್ಲಾನ್ ಮಾಡಲಾಗುತ್ತಿದೆ. ಈ ಬಗ್ಗೆ ವಿತರಕ ಕಾರ್ತಿಕ್ ಗೌಡ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಜೂನ್ 16ರಂದು ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳಿಗಾಗಿ ಮೆಗಾ ಈವೆಂಟ್ ಪ್ಲಾನ್ ಮಾಡುತ್ತಿರುವುದಾಗಿ ಹೇಳಿದ್ದಾರೆ. ನಗರದ ಒರಾಯನ್ ಮಾಲ್‌ನಲ್ಲಿ ಶೋ ಏರ್ಪಡಿಸುವ ಸಾಧ್ಯತೆಯಿದೆ.

ಯಶ್, ಪ್ರಶಾಂತ್‌ ನೀಲ್ ಭಾಗಿ?

ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳ ಸೆಲೆಬ್ರೆಟಿ ಶೋಗಳು ಯಶಸ್ವಿಯಾಗಿ ನಡೀತಿದೆ. '777 ಚಾರ್ಲಿ', 'ಗಂಧದಗುಡಿ' ಸೆಲೆಬ್ರೆಟಿ ಪ್ರೀಮಿಯರ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ 'ಆದಿಪುರುಷ್' ಸೆಲೆಬ್ರೆಟಿ ಶೋಗೆ ಕೆಆರ್‌ಜಿ ಸಂಸ್ಥೆ ಪ್ಲ್ಯಾನ್ ಮಾಡ್ತಿದೆ. ಶಿವಣ್ಣ, ಯಶ್, ಪ್ರಶಾಂತ್ ನೀಲ್, ಧನಂಜಯ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಮ್ಯಾ ಸೇರಿದಂತೆ ಸಾಕಷ್ಟು ತಾರೆಯರು ಸಿನಿಮಾ ನೋಡಲು ಬರುವ ನಿರೀಕ್ಷೆಯಿದೆ.

KRG Studios planning Adipurush kannada celebrity premiere on 16th of June

ಬುಕ್ಕಿಂಗ್‌ಗೆ ಭರ್ಜರಿ ರೆಸ್ಪಾನ್ಸ್

'ಆದಿಪುರುಷ್' ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಕರ್ನಾಟಕದಲ್ಲಿ ಈಗಾಗಲೇ ಆರಂಭವಾಗಿದೆ. ಪ್ರೇಕ್ಷಕರು ಟಿಕೆಟ್ ಬುಕ್ ಮಾಡಿಕೊಳ್ಳುತ್ತಿದ್ದಾರೆ. ಭಾನುವಾರ ತೆಲುಗು, ಹಿಂದಿ ವರ್ಷನ್ ಬುಕ್ಕಿಂಗ್ ಬಿಟ್ಟಿದ್ದ ಸಂಸ್ಥೆ ಈಗ ಕನ್ನಡ ವರ್ಷನ್ ಸಹ ಆರಂಭಿಸಿದೆ. 2ಡಿ ಹಾಗೂ 3ಡಿ ವರ್ಷನ್‌ಗಳಲ್ಲಿ ಪ್ರೇಕ್ಷಕರು ಸಿನಿಮಾ ನೋಡುವ ಅವಕಾಶ ಇದೆ. ಕೆಲವೆಡೆ ಟಿಕೆಟ್ ದರ ಹೆಚ್ಚಿಸಿರುವ ಬಗ್ಗೆ ಪ್ರೇಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

1000 ಕೋಟಿ ಕಲೆಕ್ಷನ್ ನಿರೀಕ್ಷೆ

'ಬಾಹುಬಲಿ' ಸರಣಿ ಸಿನಿಮಾಗಳಿಂದ ಪ್ರಭಾಸ್ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿದ್ದಾರೆ. ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮಾತ್ರ ನಟಿಸ್ತಿದ್ದಾರೆ. ಹಿಂದಿನ ಎರಡು ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೆ 'ಆದಿಪುರುಷ್' 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವ ಲೆಕ್ಕಾಚಾರ ನಡೀತಿದೆ. ಈಗಾಗಲೇ ಪ್ರೀ ರಿಲೀಸ್ ಬ್ಯುಸಿನೆಸ್ ಸಖತ್ ಸದ್ದು ಮಾಡಿದೆ. ಬೆಂಗಳೂರಿನಲ್ಲಿ 400ಕ್ಕೂ ಅಧಿಕ ಶೋಗಳ ಬುಕ್ಕಿಂಗ್ ನಡೀತಿದೆ.

More from Filmibeat

English summary
KRG Studios planning Adipurush kannada celebrity premiere on 16th of June. Prabhas starrer mythology film directed by Om Raut and produced by T-Series and Retrophiles. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X