'ರತ್ನನ್ ಪ್ರಪಂಚ'ಕ್ಕೆ ಕಾಲಿಟ್ಟ ಡಾಲಿ ಧನಂಜಯ್

ಟಗರು ಡಾಲಿ ಖ್ಯಾತಿಯ ನಟ ಧನಂಜಯ್, ತಮ್ಮನ್ನು ವಿಲನ್ ಪಾತ್ರಗಳಿಗೆ ಸೀಮಿತಗೊಳಿಸಿಕೊಳ್ಳದೆ. ಭಿನ್ನ ಕತೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಇದೀಗ ಧನಂಜಯ್ 'ರತ್ನನ್ ಪ್ರಪಂಚ' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾದ ಪೋಸ್ಟರ್ ಇಂದು ಬಿಡುಗಡೆ ಆಗಿದೆ.

ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಪೋಸ್ಟರ್ ಅನ್ನು ಧನಂಜಯ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಚಿತ್ರದ ಪ್ರಾಥಮಿಕ ಮಾಹಿತಿಯನ್ನು ಸಹ ಹಂಚಿಕೊಂಡಿದ್ದಾರೆ.

ರಾಹುಲ್ ಪದಕಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಯೋಗಿ ಜಿ ರಾವ್ ಹಾಗೂ ಕಾರ್ತಿಕ್ ಗೌಡ ಅವರುಗಳು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಕೆಆರ್‌ಜಿ ಪ್ರೊಡಕ್ಷನ್ಸ್‌ನ ಮೊದಲ ಸಿನಿಮಾ ಇದಾಗಿದೆ.

ಗಮನ ಸೆಳೆಯುತ್ತಿರುವ ಸಿನಿಮಾದ ಪೋಸ್ಟರ್

ಗಮನ ಸೆಳೆಯುತ್ತಿರುವ ಸಿನಿಮಾದ ಪೋಸ್ಟರ್

ಸಿನಿಮಾದ ಪೋಸ್ಟರ್‌ ಗಮನ ಸೆಳೆಯುತ್ತಿದ್ದು, ಬಹಳ ದಟ್ಟಣೆ ಇರುವ ರಸ್ತೆಯಲ್ಲಿ ಧನಂಜಯ್ ಒಂದು ಕೈಯಲ್ಲಿ ಮಲ್ಲಿಗೆ ಹೂ ಹಿಡಿದು ಮತ್ತೊಂದು ಕೈಯಲ್ಲಿ ಪೆಪ್ಪರಮಿಂಟು ತುಂಬಿದ ಬಾಟಲಿ ಹಿಡಿದು ಏನನ್ನೋ ನೆನದು ನಗುತ್ತಾ ಬರುತ್ತಿದ್ದಾರೆ. ಸಿನಿಮಾವು ಕೌಟುಂಬಿಕ ಕಥಾನಕ ಹೊಂದಿರುವ ಅನುಮಾನ ಪೋಸ್ಟರ್ ನೋಡಿದರೆ ಬರುತ್ತದೆ.

ರಚಿತಾ ರಾಮ್ ನಾಯಕಿ?

ರಚಿತಾ ರಾಮ್ ನಾಯಕಿ?

ಸಿನಿಮಾದ ನಾಯಕಿ ಯಾರೆಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ ರಚಿತಾ ರಾಮ್ ಅವರು ಸಿನಿಮಾದ ನಾಯಕಿ ಯಾಗಿ ಆಯ್ಕೆಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಹೇಳಿಕೆ ನೀಡಿಲ್ಲ.

ಧನಂಜಯ್ ಮತ್ತೆ ಶಿವರಾಜ್ ಕುಮಾರ್ ಜೊತೆಯಾಗಿ ನಟಿಸುತ್ತಿದ್ದಾರೆ

ಧನಂಜಯ್ ಮತ್ತೆ ಶಿವರಾಜ್ ಕುಮಾರ್ ಜೊತೆಯಾಗಿ ನಟಿಸುತ್ತಿದ್ದಾರೆ

ನಟ ಧನಂಜಯ್ ಮತ್ತೆ ಶಿವರಾಜ್ ಕುಮಾರ್ ಜೊತೆಯಾಗಿ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ತಮಿಳಿನ ನಿರ್ದೇಶಕ ವಿಜಯ್ ಮಿಲ್ಟನ್ ನಿರ್ದೇಶಿಸಲಿದ್ದಾರೆ. ಈ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿದೆ.

ಬೇರೆ ಭಾಷೆಗಳ ಸಿನಿಮಾದಲ್ಲಿ ನಟನೆ

ಬೇರೆ ಭಾಷೆಗಳ ಸಿನಿಮಾದಲ್ಲಿ ನಟನೆ

ಇನ್ನುಳಿದಂತೆ ಧನಂಜಯ್ ನೆರೆಯ ಭಾಷೆಗಳ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾದಲ್ಲಿ ಧನಂಜಯ್ ನಟಿಸುತ್ತಿದ್ದಾರೆ ಎನ್ನಲಾಗಿತ್ತು, ಈ ಬಗ್ಗೆ ಸ್ಪಷ್ಟನೆ ಇಲ್ಲ. ರೌಡಿ ಜಯರಾಜ್ ಜೀವನ ಆಧರಿಸಿದ ಸಿನಿಮಾದಲ್ಲಿ ಧನಂಜಯ್ ನಟಿಸುತ್ತಿದ್ದಾರೆ.

More from Filmibeat

English summary
Dolly Dhananjay's next movie Rathnan Prapancha's poster released today. Rohit Padaki is directing the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X