ಲೈಂಗಿಕ ಕಿರುಕುಳದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ ಕೃಷಿ ತಾಪಂಡ

By Pavithra

Recommended Video

ಸ್ಯಾಂಡಲ್ವುಡ್ ನಲ್ಲೂ ಇದೆಯಂತೆ ಕಾಸ್ಟಿಂಗ್ ಕೌಚ್ | Oneindia Kannada

ಒಂದಾದ ಮೇಲೆ ಒಂದರಂತೆ ಸಿನಿಮಾರಂಗದಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಮಾತುಗಳು ಕೇಳಿ ಬರುತ್ತಲೇ ಇದೆ. ಕೇವಲ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೆ ಅಕ್ಕ -ಪಕ್ಕದ ಸಿನಿಮಾರಂಗದಲ್ಲಿಯೂ ಕಾಸ್ಟಿಂಗ್ ಕೌಚ್ ವಿಚಾರದ ಸದ್ದು ಜೋರಾಗಿಯೇ ಇದೆ.

ಕಳೆದ ಎರಡು ಮೂರು ತಿಂಗಳ ಹಿಂದೆ ನಟಿ ಶೃತಿ ಹರಿಹರನ್ ಕಾರ್ಯಕ್ರಮವೊಂದರಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದರು. ಇದಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ತದ ನಂತರ ಕನ್ನಡ ಚಿತ್ರ ನಟಿಯರೇ ನಾನು ಸ್ಟ್ರಾಂಗ್ ಆಗಿ ಇದ್ದರೆ ನಮಗ್ಯಾವುದೇ ಭಯವಿಲ್ಲ. ಸಾಕಷ್ಟು ವರ್ಷಗಳಿಂದ ನಾವು ಚಿತ್ರರಂಗದಲ್ಲಿ ಇದ್ದೇವೆ ನಮಗೆ ಈ ಅನುಭವ ಆಗಿಲ್ಲ ಎಂದು ಕಡ್ಡಿ ಮುರಿದಂತೆ ಮಾತನಾಡಿದ್ದರು.

ಸಿನಿಮಾರಂಗದಲ್ಲಿ ಇರುವ ಲೈಂಗಿಕ ಕಿರುಕುಳದ ಬಗೆಗಿನ ಸುದ್ದಿ ತಣ್ಣಗಾಯ್ತು ಎನ್ನುವಾಗಲೇ ನಟಿ ಕೃಷಿ ತಾಪಂಡ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ಮೂರು ದಿನಗಳ ಹಿಂದೆಯಷ್ಟೇ ಈ ರೀತಿಯ ಅನುಭವ ನನಗಾಗಿದೆ ಎಂದು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ಹಾಗಾದರೆ ಕೃಷಿ ಲೈಂಗಿಕ ಕಿರುಕುಳದ ಬಗ್ಗೆ ಏನು ಹೇಳಿದ್ದಾರೆ? ಇಲ್ಲಿದೆ ಮಾಹಿತಿ. ಮುಂದೆ ಓದಿ

ಲೈಂಗಿಕ ಕಿರುಕುಳದ ಬಗ್ಗೆ ಕೃಷಿ ಮಾತು

ಲೈಂಗಿಕ ಕಿರುಕುಳದ ಬಗ್ಗೆ ಕೃಷಿ ಮಾತು

ಅಕಿರ, ಎರಡು ಕನಸು ಸಿನಿಮಾಗಳಲ್ಲಿ ಅಭಿನಯಿಸ ಕನ್ನಡ ಸಿನಿಮಾರಂಗದಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿರುವ ನಟಿ ಕೃಷಿ ತಾಪಂಡ ಸಿನಿಮಾರಂಗದಲ್ಲಿರುವ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ.

ಕಾಸ್ಟಿಂಗ್ ಕೌಚ್ ಪ್ರವೃತ್ತಿ ಇದೆ ಎಂದ ಕೃಷಿ

ಕಾಸ್ಟಿಂಗ್ ಕೌಚ್ ಪ್ರವೃತ್ತಿ ಇದೆ ಎಂದ ಕೃಷಿ

ಸ್ಯಾಂಡಲ್ ವುಡ್ ನಲ್ಲಿ ಕಾಸ್ಟಿಂಗ್ ಕೌಚ್ ಪ್ರವೃತಿ ಇದೆ. ಕಾಂಪ್ರಮೈಸ್ ಗೆ ಒಪ್ಪಿಲ್ಲ ಅನ್ನೋ ಕಾರಣಕ್ಕೆ ಸಾಕಷ್ಟು ಪ್ರಾಜೆಕ್ಟ್ ತಪ್ಪಿ ಹೋಗಿವೆ. ನನಗೂ ಈ ಅನುಭವ ಆಗಿದೆ ಎಂದಿದ್ದಾರೆ ನಟಿ ಕೃಷಿ.

ಅವಕಾಶ ಕಳೆದುಕೊಂಡಿದ್ದೇನೆ

ಅವಕಾಶ ಕಳೆದುಕೊಂಡಿದ್ದೇನೆ

ತಮಿಳಿನಿಂದ ಕೃಷಿ ಅವರಿಗೆ ಸಾಕಷ್ಟು ಅವಕಾಶ ಬಂದಿತ್ತಂತೆ. ಆದರೆ ಅಲ್ಲಿ ಲೈಂಗಿಕ ಕಿರುಕುಳ ಹೆಚ್ಚಾಗಿದೆ ಎನ್ನುವುದನ್ನ ತಿಳಿದ ನಂತರ ಕೃಷಿ ತಾವೇ ಬಂದ ಆಫರ್ ಅನ್ನು ರಿಜೆಕ್ಟ್ ಮಾಡಿದ್ರಂತೆ.

ಇತ್ತೀಚಿನ ಅನುಭವದ ಬಗ್ಗೆ ಮಾತು

ಇತ್ತೀಚಿನ ಅನುಭವದ ಬಗ್ಗೆ ಮಾತು

ನಟಿ ಕೃಷಿ ತಾಪಂಡಗೆ ಮೂರು ದಿನಗಳ ಹಿಂದಷ್ಟೇ ಇಂಥ ಒಂದು ಎಕ್ಸ್ ಪೀರಿಯನ್ಸ್ ಆಗಿತ್ತಂತೆ. ಈ ಬಗ್ಗೆಯೂ ಕೃಷಿ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ನಾವು ಕಲಾವಿದರು ನಮ್ಮ ಪ್ರತಿಭೆಗೆ ಬೆಲೆ ಕೊಡಬೇಕು ದೇಹಕಲ್ಲ, ಇಲ್ಲವಾದರೆ ನಾವು ಕಲಾವಿದರಾಗಿ ಉಳಿಯಲ್ಲ ಸೆಕ್ಸ್ ಟಾಯ್ ಗಳಂತಾಗಿ ಬಿಡ್ತೀವಿ

ಈ ಬಗ್ಗೆ ಯಾರು ಸಹಿಸಿಕೊಳ್ಳ ಬಾರದು ಓಪನ್ ಅಪ್ ಆಗ ಬೇಕು, ಹತ್ತು ಜನ ಇದನ್ನ ವಿರೋಧಿಸಿದ್ರೆ ಸಾಕು ಎಂದಿದ್ದಾರೆ.

More from Filmibeat

English summary
Kannada actress Krishi Thapanda spoke about Casting Couch in Kannada film industry. Krishi said Casting couch exists in Sandalwood, so I have lost enough opportunities.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X