ಚಿತ್ರೀಕರಣದ ವೇಳೆ ಅಜಯ್ ರಾವ್ ಕಾಲಿಗೆ ಗಾಯ

By Pavithra

Recommended Video

ಅಜಯ್ ರಾವ್ ಕಾಲಿಗೆ ಚಿತ್ರೀಕರಣದ ವೇಳೆ ಗಾಯ | Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸಕ್ಸಸ್ ಜೋಡಿ ಎನ್ನಿಸಿಕೊಂಡಿರುವ ಕೃಷ್ಣ ಅಜಯ್ ರಾವ್ ಹಾಗೂ ನಿರ್ದೇಶಕ ಶಶಾಂಕ್ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ 'ತಾಯಿಗೆ ತಕ್ಕ ಮಗ' ಸಿನಿಮಾದ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದೆ. ಇತ್ತೀಚಿಗಷ್ಟೇ ಸಿನಿಮಾ ಸಾಹಸ ದೃಶ್ಯಗಳನ್ನ ಚಿತ್ರೀಕರಿಸುವಾಗ ನಟ ಅಜಯ್ ರಾವ್ ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ.

ಸುಮಲತಾ ಅಂಬರೀಶ್, ಅಜಯ್ ರಾವ್ ಹಾಗೂ ಆಶಿಕಾ ರಂಗನಾಥ್, ಭಜರಂಗಿ ಲೋಕಿ, ಅಚ್ಚುತ್ ರಾವ್ ಹಾಗೂ ಸಾಧು ಕೋಕಿಲ ಚಿತ್ರದಲ್ಲಿ ಅಭಿನಯಿಸುತ್ತಿದ್ದು ಸಾಕಷ್ಟು ದಿನಗಳ ಹಿಂದೆಯೇ ಚಿತ್ರೀಕರಣ ಶುರು ಮಾಡಿದ್ದ ಸಿನಿಮಾ ಟೀಂ ಶೇಕಡ 50 ರಷ್ಟು ಚಿತ್ರೀಕರಣ ಮಾಡಿ ಮುಗಿಸಿದೆ.

Krishna Ajay Rao injured in the shooting of Thayige thakka maga film

ವೈದ್ಯರು ಅಜಯ್ ರಾವ್ ಅವರಿಗೆ ವಿಶ್ರಾಂತಿ ಪಡೆಯಲು ತಿಳಿಸಿದ್ದು ಅದಕ್ಕಾಗಿ ಸದ್ಯಕ್ಕೆ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿದೆ. ಏರ್ಪಿಲ್ 2 ರಿಂದ ಚಿತ್ರೀಕರಣಕ್ಕೆ ಪ್ಲಾನ್ ಮಾಡಿಕೊಂಡಿದೆ ಸಿನಿಮಾತಂಡ. ಸಿನಿಮಾಗೆ ಶೇಖರ್ ಚಂದ್ರ ಕ್ಯಾಮೆರಾ ವರ್ಕ್ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿದೆ.

ಬೆಂಗಳೂರಿನ ಸುತ್ತಾ ಮುತ್ತಾ ತಾಯಿಗೆ ತಕ್ಕ ಮಗ ಸಿನಿಮಾದ ಚಿತ್ರೀಕರಣ ಮಾಡಿರುವ ನಿರ್ದೇಶಕರು ಸತತ 35 ದಿನಗಳ ಶೂಟಿಂಗ್ ಮುಗಿಸಿದ್ದಾರೆ. ಹಿಟ್ ಸಿನಿಮಾಗಳನ್ನ ನೀಡಿ ಪ್ರೇಕ್ಷಕರನ್ನ ಖುಷಿ ಪಡಿಸಿರುವ ಅಜಯ್ ಮತ್ತು ಶಶಾಂಕ್ ಕಾಂಬಿನೇಶನ್ ಈ ಬಾರಿಯೂ ನೋಡುಗರಿಗೆ ಮನೋರಂಜನೆ ನೀಡಲಿದೆ.

More from Filmibeat

English summary
Kannada actor Krishna Ajay Rao injured in the shooting of Thayige thakka maga film. Shashank is directing the movie, Sumalatha Ambarish, Ashika Ranganath and Bajrangi Loki acting in movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X